ಈ ಪ್ರಕರಣಕ್ಕೂ ಕುಮಾರಸ್ವಾಮಿಗೂ ಸಂಬಂಧವಿಲ್ಲ ಎಂದ ಇಂದ್ರಜಿತ್​

ಮೈಸೂರಿನ ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಅವರ ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪ ಪ್ರಕರಣ ಗಂಟೆಗೆ ಒಂದೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ.


ಮೈಸೂರಿನ ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಅವರ ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪ ಪ್ರಕರಣ ಗಂಟೆಗೆ ಒಂದೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಅಂದು ಹಲ್ಲೆಯೇ ಆಗಿಲ್ಲ ಎಂದು ಗಂಗಾಧರ್​ ಹೇಳಿದ್ದರು. ಈ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್​ ಸುದ್ದಿಗೋಷ್ಠಿ ನಡೆಸಿದ್ದಾರೆ.

ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ. ಸಮಾಜದ ಹಿತದೃಷ್ಟಿಗಾಗಿ ನಮ್ಮ ಕುಟುಂಬ ಕೆಲಸ ಮಾಡ್ತಿದೆ. ಬಡವರಿಗೆ, ಸಾಮಾನ್ಯರಿಗೆ ಅನ್ಯಾಯವಾಗಿದೆ. ಸೆಲೆಬ್ರಿಟಿಗಳ ದೃಷ್ಟಿಯಿಂದ ನಾನು ಮುಂದೆ ಬಂದಿಲ್ಲ. ಯಾರದ್ದೇ ತೇಜೋವಧೆ ಮಾಡುವ ಉದ್ದೇಶ ನನ್ನದಲ್ಲ. ನೋವು ತಿಂದವರಿಗೆ ನ್ಯಾಯ ಒದಗಿಸಿಕೊಡಿ. ಇದಕ್ಕೂ ಮೇಲೆ ನನಗೇನು ಬೇಡ. ಪೊಲೀಸರಿಗೆ ಸಹಕಾರ ನೀಡೋಕೆ ಸಿದ್ಧನಿದ್ದೇನೆ’ ಎಂದಿದ್ದಾರೆ.