ನನ್ನ ಮತ್ತು ಇಂದ್ರಜಿತ್ ಭೇಟಿಯ ಚಿತ್ರ ಹಳೆಯದು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸ್ಪಷ್ಟನೆ

HD Kumaraswamy: ಇಂದ್ರಜಿತ್ ಲಂಕೇಶ್ ಅವರೊಂದಿಗೆ ವೈರಲ್ ಆಗುತ್ತಿರುವ ಫೊಟೊ ಹಳೆಯದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನನ್ನ ಮತ್ತು ಇಂದ್ರಜಿತ್ ಭೇಟಿಯ ಚಿತ್ರ ಹಳೆಯದು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸ್ಪಷ್ಟನೆ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (ಫೈಲ್ ಚಿತ್ರ)
TV9kannada Web Team

| Edited By: shivaprasad.hs

Jul 16, 2021 | 3:37 PM

ಬೆಂಗಳೂರು: ಇಂದ್ರಜಿತ್ ಲಂಕೇಶ್ ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಫೋಟೊ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಯಾಕೆ ಈ ಫೊಟೊ ವೈರಲ್ ಮಾಡುತ್ತಿದ್ದಾರೆ ಗೊತ್ತಿಲ್ಲ. ಪ್ರತೀ ದಿನ ನನ್ನನ್ನು ನೂರಾರು ಜನ ಭೇಟಿ ಮಾಡುತ್ತಾರೆ. ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ನನ್ನನ್ನು ಇಂದ್ರಜಿತ್ ಭೇಟಿ ಮಾಡಿಲ್ಲ. ಯಾಕೆ ನನ್ನ ಹೆಸರು ತಳುಕು ಹಾಕಿಕೊಂಡಿದ್ದಿರಾ ಎಂದು ಅವರು ಪ್ರಶ್ನಿಸಿದ್ದಾರೆ.

ನಿನ್ನೆಯಿಂದ ಇಂದ್ರಜಿತ್ ಲಂಕೇಶ್ ಅವರ ವಿಚಾರಗಳು ಮಾಧ್ಯಮಗಳಲ್ಲಿ ಪ್ರಸ್ತಾಪಿತವಾಗುತ್ತಿವೆ. ಆದರೆ ಅದಕ್ಕೂ ನನಗೂ ಸಂಬಂಧವೇ ಇಲ್ಲ. ಈಗ ವೈರಲ್ ಆಗಿರುವ ಚಿತ್ರವೂ ಹಳೆಯದು. ಅವರು ನನ್ನನ್ನು ಹಲವಾರು ಬಾರಿ ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆದರೆ ಇತ್ತೀಚೆಗೆ ಭೇಟಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನನ್ನ ರಾಜಕಾರಣವೇನಿದ್ದರೂ ನೇರವಾಗಿ. ಇಡೀ ದೇಶದಲ್ಲೇ ನನ್ನಷ್ಟು ನೇರವಾಗಿ, ಮುಕ್ತವಾಗಿ ಮಾತನಾಡುವ ರಾಜಕಾರಣಿ ಮತ್ತೊಬ್ಬ ಸಿಗಲಿಕ್ಕಿಲ್ಲ. ಕದ್ದುಮುಚ್ಚಿ ರಾಜಕಾರಣ ನನಗೆ ಬರುವುದಿಲ್ಲ. ಹಳೆಯ ಚಿತ್ರ ಈಗ ವೈರಲ್ ಆಗುತ್ತಿರುವುದರ ಹಿನ್ನೆಲೆ ನನಗೆ ಗೊತ್ತಿಲ್ಲ. ಅದನ್ನು ಯಾರು ಯಾವ ಕಾರಣಕ್ಕೆ ಮಾಡುತ್ತಿದ್ದಾರೆ ಎಂಬ ವಿಚಾರದ ಕುರಿತು ಇಂದ್ರಜಿತ್ ಲಂಕೇಶ್ ಅವರೇ ತಿಳಿಸಿದರೆ ಸೂಕ್ತ ಎಂದು ಕುಮಾರಸ್ವಾಮಿ ತಿಳಿಸಿದರು.

ನಟ ದರ್ಶನ್​ಗೆ ಬೆಂಬಲ ಸೂಚಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್:

ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ನಟ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಚಿತ್ರರಂಗದಲ್ಲಿಹೊಸಬರನ್ನು ಬೆಳೆಸುತ್ತಿರುವ ನಟ ದರ್ಶನ್. ಅವರ ತೇಜೋವಧೆಗೆ ಪ್ರಯತ್ನಪಡುತ್ತಿರುವಂತೆ ಕಾಣಿಸುತ್ತಿದೆ. ಪೊಲೀಸ್ ಇಲಾಖೆ ಯಾರ ಕೈಯಲ್ಲೂ ಇಲ್ಲ. ಅವರ ಕೆಲಸವನ್ನು ಅವರು ನಡೆಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಕೃಷಿ ಇಲಾಖೆ ರಾಯಭಅರಿ ಸ್ಥಾನದಿಂದ ಅವರನ್ನು ಕೈಬಬಿಡುವುದಿಲ್ಲ ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಷಾಡ ಶುಕ್ರವಾರ: ನಟ ದರ್ಶನ್​ಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ

ಇದನ್ನೂ ಓದಿ: ದರ್ಶನ್​ ಪ್ರೆಸ್​ ಮೀಟ್​ ನಂತರ ಹಲ್ಲೆ ಸಂಬಂಧ ಫೋಟೋ, ವಿಡಿಯೋ ಸಾಕ್ಷ್ಯದೊಂದಿಗೆ ಇಂದ್ರಜಿತ್​ ಲಂಕೇಶ್ ಕೌಂಟರ್​ ಸುದ್ದಿಗೋಷ್ಠಿ ಸಾಧ್ಯತೆ

(Former Karnataka CM  HD Kumaraswamy clarifies that he didnt meet Indrajit Lankesh recently)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada