Karnataka Dam Water Level: ವ್ಯಾಪಕ ಮುಂಗಾರು ಮಳೆ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
Karnataka Reservoirs Water Level: ಕರ್ನಾಟಕದಲ್ಲಿ ಜುಲೈ 19ರಿಂದ ಜುಲೈ 23ರವರೆಗೆ ಉತ್ತಮ ಮಳೆಯಾಗಲಿದೆ. ಹೀಗಾಗಿ ಇನ್ನೂ ಮೂರ್ನಾಲ್ಕು ದಿನಗಳ ತನಕ ಮಳೆಯ ವಾತಾವರಣ (Monsoon 2021) ಮುಂದುವರೆಯಲಿದ್ದು, ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ಸದ್ಯಕ್ಕೆ ನಿಲ್ಲುವುದು ಅನುಮಾನ ಎನ್ನಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಜುಲೈ 19ರಿಂದ ಜುಲೈ 23ರವರೆಗೆ ಉತ್ತಮ ಮಳೆಯಾಗಲಿದೆ. ಹೀಗಾಗಿ ಇನ್ನೂ ಮೂರ್ನಾಲ್ಕು ದಿನಗಳ ತನಕ ಮಳೆಯ ವಾತಾವರಣ (Monsoon 2021) ಮುಂದುವರೆಯಲಿದ್ದು, ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ಸದ್ಯಕ್ಕೆ ನಿಲ್ಲುವುದು ಅನುಮಾನ ಎನ್ನಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಾಳೆಯಿಂದ ಮೂರು ದಿನ ಅಧಿಕ ಪ್ರಮಾಣದ ಮಳೆಯಾಗಲಿದೆ. ನಾಳೆ ಮತ್ತು ನಾಡಿದ್ದು (ಜುಲೈ 21 ಮತ್ತು 22) ಈ ಭಾಗಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಜುಲೈ 23ರಂದು ಮಳೆ ಹೆಚ್ಚಾಗುವ ಸಂಭವ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರ್ಗಿ, ಗದಗ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಲಿದ್ದು, ಜುಲೈ 22 ಮತ್ತು 23ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ (Weather Report).
ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕಾವೇರಿ ಕಣಿವೆ ಭಾಗದ ಕೆಆರ್ಎಸ್, ಕಬಿನಿ, ಹೇಮಾವತಿ, ಹಾರಂಗಿ ಮತ್ತು ಜಲ ವಿದ್ಯುತ್ ಅಣೆಕಟ್ಟೆಗಳಾದ ಲಿಂಗನಮಕ್ಕಿ, ಸೂಪಾ ಮತ್ತು ಕೃಷ್ಣಾ ನದಿ ಭಾಗದ ಜಲಾಶಯಗಳಾದ ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಕಾವೇರಿ ಕಣಿವೆ ಭಾಗದ ಜಲಾಶಯಗಳು:
1) ಕೆಆರ್ಎಸ್ ಜಲಾಶಯ | KRS Dam ಇಂದಿನ ನೀರಿನ ಮಟ್ಟ: 99.00 ಅಡಿ ಗರಿಷ್ಠ ಸಾಮರ್ಥ್ಯ: 124.80 ಅಡಿ
2) ಹಾರಂಗಿ ಜಲಾಶಯ | Harangi Dam ಇಂದಿನ ನೀರಿನ ಮಟ್ಟ: 2855 ಅಡಿ ಗರಿಷ್ಠ ಸಾಮರ್ಥ್ಯ: 2859 ಅಡಿ
3) ಹೇಮಾವತಿ ಜಲಾಶಯ | Hemavathi Dam ಇಂದಿನ ನೀರಿನ ಮಟ್ಟ: 2905 ಅಡಿ ಗರಿಷ್ಠ ಸಾಮರ್ಥ್ಯ: 2922 ಅಡಿ
4) ಕಬಿನಿ ಜಲಾಶಯ | Kabini Dam ಇಂದಿನ ನೀರಿನ ಮಟ್ಟ: 2280 ಅಡಿ ಗರಿಷ್ಠ ಸಾಮರ್ಥ್ಯ: 2284 ಅಡಿ
ಜಲ ವಿದ್ಯುತ್ ಅಣೆಕಟ್ಟೆಗಳು:
5) ಲಿಂಗನಮಕ್ಕಿ ಜಲಾಶಯ | Linganamakki Dam ಇಂದಿನ ನೀರಿನ ಮಟ್ಟ: 1794 ಅಡಿ ಗರಿಷ್ಠ ಸಾಮರ್ಥ್ಯ: 1819 ಅಡಿ
6) ಸೂಪಾ ಜಲಾಶಯ | Supa Dam ಇಂದಿನ ನೀರಿನ ಮಟ್ಟ: 542 ಅಡಿ ಗರಿಷ್ಠ ಸಾಮರ್ಥ್ಯ: 564 ಅಡಿ
ಕೃಷ್ಣಾ ನದಿ ಭಾಗದ ಜಲಾಶಯಗಳು:
7) ತುಂಗಾಭದ್ರಾ ಜಲಾಶಯ | Tungabhadra Dam ಇಂದಿನ ನೀರಿನ ಮಟ್ಟ: 1617 ಅಡಿ ಗರಿಷ್ಠ ಸಾಮರ್ಥ್ಯ: 1633 ಅಡಿ
8) ಭದ್ರಾ ಜಲಾಶಯ | Bhadra Dam ಇಂದಿನ ನೀರಿನ ಮಟ್ಟ: 165 ಅಡಿ ಗರಿಷ್ಠ ಸಾಮರ್ಥ್ಯ: 186 ಅಡಿ
9) ಮಲಪ್ರಭಾ ಜಲಾಶಯ | Malaprabha Dam ಇಂದಿನ ನೀರಿನ ಮಟ್ಟ: 2066.00 ಅಡಿ ಗರಿಷ್ಠ ಸಾಮರ್ಥ್ಯ: 2079.05 ಅಡಿ
10) ಘಟಪ್ರಭಾ ಜಲಾಶಯ | Ghataprabha Dam ಇಂದಿನ ನೀರಿನ ಮಟ್ಟ: 2150 ಅಡಿ ಗರಿಷ್ಠ ಸಾಮರ್ಥ್ಯ: 2175 ಅಡಿ
11) ನಾರಾಯಣಪುರ ಜಲಾಶಯ | Narayanpur Dam ಇಂದಿನ ನೀರಿನ ಮಟ್ಟ: 492 ಮೀಟರ್ ಗರಿಷ್ಠ ಸಾಮರ್ಥ್ಯ: 492.25 ಮೀಟರ್
12) ಆಲಮಟ್ಟಿ ಜಲಾಶಯ | Almatti Dam ಇಂದಿನ ನೀರಿನ ಮಟ್ಟ: 518 ಮೀಟರ್ ಗರಿಷ್ಠ ಸಾಮರ್ಥ್ಯ: 519.69 ಮೀಟರ್
ಪ್ರಮುಖ ಜಲಾಶಯ -19-07-2021 ರಂದು ಮಟ್ಟ, ಸಂಗ್ರಹಣೆ, ಹರಿವುಗಳು pic.twitter.com/oJSlRLvZ6T
— KSNDMC (@KarnatakaSNDMC) July 19, 2021
(Monsoon 2021 Karnataka 12 reservoirs and dams water level as on 20th July 2021)
Published On - 8:44 am, Tue, 20 July 21