ಎಸ್.ಎಂ.ಗೋಲ್ಡ್ ಫೈನಾನ್ಸ್ ಸಿಬ್ಬಂದಿಗೆ ವಂಚಿಸಿದ ಮೈಸೂರಿನ ಖತರ್ನಾಕ್ ದಂಪತಿ ಅರೆಸ್ಟ್
ಎಸ್.ಎಂ.ಗೋಲ್ಡ್ ಫೈನಾನ್ಸ್ ಸಿಬ್ಬಂದಿಗೆ ವಂಚಿಸಿದ್ದ ಬಗ್ಗೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಕಾರ್ಯಚರಣೆಯಲ್ಲಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.
ಮೈಸೂರು: ಗಿರವಿ ಇಟ್ಟ ಒಡವೆಯನ್ನು ಬಿಡಿಸಿ ಮಾರಾಟ ಮಾಡುವುದಾಗಿ ವಂಚಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಲಿಗ್ರಾಮ ಠಾಣೆ ಪೊಲೀಸರು ವಂಚಕ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ. 29 ವರ್ಷದ ಸೌಭಾಗ್ಯ ಅಲಿಯಾಸ್ ಸೌಮ್ಯಾ ಮತ್ತು 30 ವರ್ಷದ ಪ್ರಸಾದ್ ಎಂಬುವವರು ಬಂಧನಕ್ಕೊಳಗಾದ ದಂಪತಿ. ಇವರು ಮೈಸೂರಿನ ಅಗ್ರಹಾರದಲ್ಲಿರುವ ಎಸ್.ಎಂ.ಗೋಲ್ಡ್ ಫೈನಾನ್ಸ್ ಸಿಬ್ಬಂದಿಗೆ ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
50 ಗ್ರಾಂ ಚಿನ್ನದ ಆಭರಣ ಅಡ ಇಟ್ಟಿದ್ದೇವೆ. ಅದನ್ನು ಬಿಡಿಸಿ ನಿಮ್ಮ ಸಂಸ್ಥೆಗೆ ಮಾರಾಟ ಮಾಡುತ್ತೇವೆ ಅಂತ ಸುಮಾರು 1.75 ಲಕ್ಷ ರೂ. ಹಣವನ್ನು ದಂಪತಿ ವಂಚಿಸಿದ್ದಾರೆ. ಸಾಲಿಗ್ರಾಮಕ್ಕೆ ಹಣದೊಂದಿಗೆ ಕರೆಸಿಕೊಂಡು ವಂಚಿಸಿದ್ದ ದಂಪತಿ ಹೀಗೆ ಹಲವು ಕಡೆ ಮೋಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಎಸ್.ಎಂ.ಗೋಲ್ಡ್ ಫೈನಾನ್ಸ್ ಸಿಬ್ಬಂದಿಗೆ ವಂಚಿಸಿದ್ದ ಬಗ್ಗೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಕಾರ್ಯಚರಣೆಯಲ್ಲಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.
ಮೈಸೂರು ರಾಜವಂಶಸ್ಥರ ಹೆಸರಲ್ಲಿ ವ್ಯಕ್ತಿಯಿಂದ ಯುವತಿಯರಿಗೆ ವಂಚನೆ ಮೈಸೂರು ರಾಜವಂಶಸ್ಥರ ಹೆಸರಿನಲ್ಲಿ ವ್ಯಕ್ತಿಯೋರ್ವ ಹಲವು ಯುವತಿಯರಿಗೆ ವಂಚನೆ ಎಸಗಿದ ಪ್ರಕರಣ ಪಿರಿಯಾಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಹಣ ಪಡೆದು ವಂಚನೆ ಎಸಗಿದ್ದು, ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಯುವತಿಯೋರ್ವಳು ದೂರು ನೀಡಿದ್ದಳು. ಆರೋಪಿಯ ನಿಜವಾದ ಹೆಸರು ಮುತ್ತು ಎಂದು ತಿಳಿದುಬಂದಿದ್ದು, ಸಿದ್ದಾರ್ಥ ಎಂಬ ಹೆಸರಿನಲ್ಲಿ ಎಲ್ಲರಿಗೂ ಪರಿಚಯ ಮಾಡಿಕೊಂಡಿದ್ದ ಎಂದು ಬೆಂಗಳೂರಿನ ವೈಟ್‌ಫೀಲ್ಡ್ ಡಿಸಿಪಿ ದೇವರಾಜ್ ತಿಳಿಸಿದ್ದಾರೆ. ಮೂವರು ಯುವತಿಯರ ಬಳಿ ವೈಯಕ್ತಿಕ ಸಹಾಯ ಬೇಕೆಂದು ಹಣವನ್ನು ಖಾತೆಗೆ ಹಾಕಿಸಿಕೊಳ್ಳುತ್ತಿದ್ದ ಆರೋಪಿ ಒಟ್ಟಾರೆಯಾಗಿ ಮೂರು ಪ್ರಕರಣಗಳಲ್ಲಿ 40 ಲಕ್ಷ ವಂಚನೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ
ವಿದೇಶಿಗರಿಂದ ಇಂಗ್ಲೀಷ್, ಸ್ಪಾನಿಷ್ ಕಲಿತು ಮೈಸೂರು ರಾಜವಂಶಸ್ಥರ ಹೆಸರಲ್ಲಿ ವ್ಯಕ್ತಿಯಿಂದ ಯುವತಿಯರಿಗೆ ವಂಚನೆ
(Police arrested a couple who defrauded SM Gold Finance staff in mysuru)