Gold Rate Today: ಚಿನ್ನದ ದರ ಏರಿಕೆ, ಬೆಳ್ಳಿ ದರ ಇಳಿಕೆ; ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು? ಮಾಹಿತಿ ಇಲ್ಲಿದೆ
Gold Rate Today: ಹೂಡಿಕೆಯ ದೃಷ್ಟಿಯಿಂದ ಆಭರಣ ಖರೀದಿಸಿಡುವವರೂ ಇದ್ದಾರೆ. ಆಭರಣ ತೊಟ್ಟು ಖುಷಿ ಪಡುವವರೂ ಇದ್ದಾರೆ. ಒಟ್ಟಿನಲ್ಲಿ ಭಾರತೀಯರಿಗೆ ಚಿನ್ನಾಭರಣ ಎಂದರೆ ಕೊಂಚ ಜಾಸ್ತಿಯೇ ಮೋಹ ಎಂದರೆ ತಪ್ಪಾಗಲಾರದು. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಇಂದು ಚಿನ್ನದ ದರ ಕೊಂಚ ಏರಿಕೆಯಾಗಿದೆ.
Gold Silver Price Today | ಕಳೆದ ಎರಡು ದಿನಗಳಿಂದ ಚಿನ್ನದ ದರ ಇಳಿಕೆಯ ಹಾದಿ ಹಿಡಿದಿತ್ತು. ಗ್ರಾಹಕರಿಗೆ ಖುಷಿ ತಂದಿರುವ ವಿಚಾರವಾಗಿತ್ತು. ಆದರೆ ಇಂದು (ಜುಲೈ 20, ಮಂಗಳವಾರ) ದರ ಸ್ವಲ್ಪವೇ ಏರಿಕೆಯಾಗಿದೆ. ಬೆಳ್ಳಿ ದರ(Silver Price) ಕೊಂಚ ಇಳಿಕೆ ಕಂಡಿದೆ. ಚಿನ್ನ ಖರೀದಿಸುವ ಕುರಿತಾಗಿ ಯೋಚಿಸಬಹುದು. ಚಿನ್ನಾಭರಣದ (Gold Price) ಬೆಲೆ ಇಳಿಕೆಯತ್ತ ಸಾಗಿದಾಗ ಚಿನ್ನ ಖರೀದಿಸಬೇಕು ಅಂದನಿಸುವುದು ಸಹಜ. ಜತೆಜತೆಗೆ ಇನ್ನಷ್ಟು ಇಳಿಕೆ ಕಾಣಬಹುದು ಎಂಬ ನಿರೀಕ್ಷೆಯೂ ತಪ್ಪಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಏರಿಳಿತ ಕಾಣುತ್ತಿರುವುದು ಸಹಜ. ಇಂದಿನ ದರ ವಿವರ ಗಮನಿಸಿ ಚಿನ್ನ ಕೊಳ್ಳುವುದಿದ್ದರೆ ಯೋಚಿಸಿ.
ಹೂಡಿಕೆಯ ದೃಷ್ಟಿಯಿಂದ ಆಭರಣ ಖರೀದಿಸಿಡುವವರೂ ಇದ್ದಾರೆ. ಆಭರಣ ತೊಟ್ಟು ಖುಷಿ ಪಡುವವರೂ ಇದ್ದಾರೆ. ಒಟ್ಟಿನಲ್ಲಿ ಭಾರತೀಯರಿಗೆ ಚಿನ್ನಾಭರಣ ಎಂದರೆ ಕೊಂಚ ಜಾಸ್ತಿಯೇ ಮೋಹ ಎಂದರೆ ತಪ್ಪಾಗಲಾರದು. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಇಂದು ಚಿನ್ನದ ದರ ಕೊಂಚ ಏರಿಕೆಯಾಗಿದೆ. ವಿವಿಧ ನಗರಗಳಲ್ಲಿ ಎಷ್ಟು ದರ ಏರಿಕೆಯಾಗಿದೆ? ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,000 ರೂಪಾಯಿ ಇದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 4,50,000 ರೂಪಾಯಿ ಇದೆ. ಸರಿಸುಮಾರು 100 ರೂಪಾಯಿಯಷ್ಟು ದರ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,090 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರದಲ್ಲಿ ದೈನಂದಿನ ಬದಲಾವಣೆಯಲ್ಲಿ 900 ರೂಪಾಯಿಯಷ್ಟು ಹೆಚ್ಚಳವಾಗಿದೆ. ಇನ್ನು ಬೆಳ್ಳಿ ದರ ಕೊಂಚ ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 67,800 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 600 ರೂಪಾಯಿ ಇಳಿಕೆ ಕಂಡಿದೆ.
ಚೆನ್ನೈನಲ್ಲಿ ಚಿನ್ನದ ದರ ಕೊಂಚ ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಮ ಚಿನ್ನದ ದರ 45,460 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,54,600 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ರ 49,560 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,95,600 ರೂಪಾಯಿ ಇದೆ. ಸುಮಾರು 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆ 72,900 ರೂಪಾಯಿ ಇದೆ. ಸುಮಾರು 300 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,150 ರೂಪಾಯಿ ಇದೆ. 100 ಗ್ರಾಂ ಚಿನ್ನದ ರ 4,71,500 ರೂಪಾಯಿ ನಿಗದಿಯಾಗಿದೆ. ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,440 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,14,400 ರೂಪಾಯಿ ನಿಗದಿಯಾಗಿದೆ. ಇನ್ನು, ಬೆಳ್ಳಿ ದರದಲ್ಲಿ 600 ರೂಪಾಯಿ ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿ ಬೆಲೆ 67,800 ರೂಪಾಯಿಗೆ ಇಳಿಕೆ ಕಂಡಿದೆ.
ಮುಂಬೈ, ಹೈದರಾಬಾದ್, ಕೇರಳ, ಕೋಲ್ಕತ್ತಾ, ಜೈಪುರ, ಲಕ್ನೋ, ಮಧುರೈ, ಮಂಗಳೂರು, ಪಾಟ್ನಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ ಕೊಂಚ ಏರಿಕೆ ಕಂಡಿದೆ. ಜತೆಗೆ ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ.
ಇದನ್ನೂ ಓದಿ: