‘ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್’; ದರ್ಶನ್​ ಬೆಂಬಲಕ್ಕೆ ನಿಂತ ಯುವ ನಟ

ದರ್ಶನ್​ ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಆರೋಪಿಸಿದ್ದರು. ಇಂದ್ರಜಿತ್​ ಈ ಆರೋಪ ಮಾಡಿದ ಬೆನ್ನಲ್ಲೇ ಸೋಶಿಯಲ್​ ಮೀಡಿಯಾದಲ್ಲಿ ದರ್ಶನ್​ ಬೆಂಬಲಿಸಿ ಅಭಿಮಾನಿಗಳು ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ.

‘ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್’; ದರ್ಶನ್​ ಬೆಂಬಲಕ್ಕೆ ನಿಂತ ಯುವ ನಟ
ಕೃಷಿ ರಾಯಭಾರಿಯಾಗಿ ನೇಮಕಗೊಂಡ ನಟ ದರ್ಶನ್​
TV9kannada Web Team

| Edited By: Rajesh Duggumane

Jul 19, 2021 | 7:56 PM


ನಟ ದರ್ಶನ್​ ಇತ್ತೀಚೆಗೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. 25 ಕೋಟಿ ರೂಪಾಯಿ ವಂಚನೆ ಪ್ರಯತ್ನ ಪ್ರಕರಣದಿಂದ ಶುರುವಾದ ವಿಚಾರ ಮೈಸೂರಿನ ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ ಸಿಬ್ಬಂದಿ ಮೇಲೆ ಚಾಲೆಂಜಿಂಗ್​ ಸ್ಟಾರ್​ ಹಲ್ಲೆ ಮಾಡಿದ್ದಾರೆ ಎಂಬಲ್ಲಿಗೆ ಬಂದು ನಿಂತಿದೆ. ಈ ಎಲ್ಲಾ ಬೆಳವಣಿಗೆಯಿಂದ ದರ್ಶನ್​ ಅಸಮಾಧಾನ ಗೊಂಡಿದ್ದಾರೆ. ಆದರೆ, ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಕೆಲವರು ದರ್ಶನ್​ ಬೆಂಬಲಕ್ಕೆ ನಿಂತಿದ್ದಾರೆ.

ದರ್ಶನ್​ ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ ಸಿಬ್ಬಂದಿ ಗಂಗಾಧರ್​ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಆರೋಪಿಸಿದ್ದರು. ಇಂದ್ರಜಿತ್​ ಈ ಆರೋಪ ಮಾಡಿದ ಬೆನ್ನಲ್ಲೇ ಸೋಶಿಯಲ್​ ಮೀಡಿಯಾದಲ್ಲಿ ದರ್ಶನ್​ ಬೆಂಬಲಿಸಿ ಅಭಿಮಾನಿಗಳು ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಯುವ ನಟ ಧನ್ವೀರ್ ಗೌಡ ಅವರು​ ದರ್ಶನ್​ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿಬಾಸ್ ಎಂದು ಫೇಸ್​ಬುಕ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

‘ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್. ಚಿತ್ರೋದ್ಯಮಕ್ಕೆ ಬರುವ ಮೊದಲಿನಿಂದಲೂ ನಾನು ದರ್ಶನ್​ ಅಭಿಮಾನಿ. ಈ ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಟ್ಟಿರುವ ಕಷ್ಟ, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂಥದ್ದು. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ. ಇಂತಹ ನೂರಾರು ಗುಣಗಳಿಂದ ನನ್ನಂತ ಅಭಿಮಾನಿಗಳಿಗೆ ಸ್ಫೂರ್ತಿಯಾಗಿ ನಿಂತಿರುವ ಬೃಹತ್ ಶಿಖರ ಡಿ ಬಾಸ್​. ಎಷ್ಟೇ ಕಲ್ಲು ಎಸೆದರೂ ಅದನ್ನೆಲ್ಲ ಲೆಕ್ಕಿಸದೇ ಎಸೆದವರ ಮುಂದೆ ಎತ್ತರವಾಗಿ ಬೆಳೆದು ನಿಲ್ಲೋ ಗುಣ ಅವರದ್ದು’ ಎಂದು ಪೋಸ್ಟ್​ ಆರಂಭಿಸಿದ್ದಾರೆ ಧನ್ವೀರ್.

‘ದರ್ಶನ್​ ಎಂದರೆ ಸಾಕು, ಪ್ರೀತಿಯಿಂದ ಹರಿದು ಬರುವುದು ಅಭಿಮಾನಿಗಳ ಹೊಳೆ. ಎಷ್ಟೇ ಕುತಂತ್ರ ಮಾಡಿದರು ಇವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗೋದಿಲ್ಲ. ಜಗತ್ತೇ ತಿರುಗಿಬಿದ್ದರು ನಾನು ಮತ್ತು ನನ್ನಂತಹ ಕೋಟ್ಯಾಂತರ ಅಭಿಮಾನಿಗಳು ಸದಾ ದರ್ಶನ್​ ಜೊತೆ ಇರುತ್ತೇವೆ’  ಎಂದು ಬರೆದುಕೊಂಡಿದ್ದಾರೆ ಅವರು.

ಇದನ್ನೂ ಓದಿ: ನಟ ದರ್ಶನ್ ವಿರುದ್ಧ ಕಾನೂನು ಸಮರಕ್ಕೆ ನಿರ್ಮಾಪಕ ಉಮಾಪತಿ ಸಜ್ಜು

ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ: ದರ್ಶನ್ ಹಿಂಬಾಲಕರು, ರೌಡಿಗಳು ಬೆದರಿಕೆ ಹಾಕ್ತಿದಾರೆ, ಇವರಿಗೆ ಪಾಠ ಕಲಿಸುತ್ತೇನೆ; ಇಂದ್ರಜಿತ್ ಎಚ್ಚರಿಕೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada