ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ: ದರ್ಶನ್ ಹಿಂಬಾಲಕರು, ರೌಡಿಗಳು ಬೆದರಿಕೆ ಹಾಕ್ತಿದಾರೆ, ಇವರಿಗೆ ಪಾಠ ಕಲಿಸುತ್ತೇನೆ; ಇಂದ್ರಜಿತ್ ಎಚ್ಚರಿಕೆ

ಇಂದ್ರಜಿತ್​ ಮಾಡುವ ಆರೋಪಕ್ಕೆ ದರ್ಶನ್​ ಉತ್ತರ ನೀಡಿದರೆ, ದರ್ಶನ್​ ಮಾಡುವ ಪ್ರತ್ಯಾರೋಪಕ್ಕೆ ಇಂದ್ರಜಿತ್​ ಉತ್ತರಿಸುತ್ತಿದ್ದಾರೆ. ಹೀಗಾಗಿ, ಇಬ್ಬರ ನಡುವಿನ ಕಿತ್ತಾಟ ಮುಂದುವರಿಯುತ್ತಲೇ ಇದೆ.

ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ: ದರ್ಶನ್ ಹಿಂಬಾಲಕರು, ರೌಡಿಗಳು ಬೆದರಿಕೆ ಹಾಕ್ತಿದಾರೆ, ಇವರಿಗೆ ಪಾಠ ಕಲಿಸುತ್ತೇನೆ; ಇಂದ್ರಜಿತ್ ಎಚ್ಚರಿಕೆ
ಇಂದ್ರಜಿತ್​ ಲಂಕೇಶ್​
TV9kannada Web Team

| Edited By: Rajesh Duggumane

Jul 19, 2021 | 3:16 PM


ನಿರ್ದೇಶಕ ಇಂದ್ರಜಿತ್ ಲಂಕೇಶ್​ ಹಾಗೂ ನಟ ದರ್ಶನ್​ ನಡುವಿನ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರವಾಗುತ್ತಿಲ್ಲ. ಇಂದ್ರಜಿತ್​ ಮಾಡುವ ಆರೋಪಕ್ಕೆ ದರ್ಶನ್​ ಉತ್ತರ ನೀಡಿದರೆ, ದರ್ಶನ್​ ಮಾಡುವ ಪ್ರತ್ಯಾರೋಪಕ್ಕೆ ಇಂದ್ರಜಿತ್​ ಉತ್ತರಿಸುತ್ತಿದ್ದಾರೆ. ಹೀಗಾಗಿ, ಇಬ್ಬರ ನಡುವಿನ ಕಿತ್ತಾಟ ಮುಂದುವರಿಯುತ್ತಲೇ ಇದೆ. ಇಂದು (ಜುಲೈ 19) ಇಂದ್ರಜಿತ್​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದಕ್ಕೆ ಕಾರಣ ಅವರಿಗೆ ಬರುತ್ತಿರುವ ಬೆದರಿಕೆಗಳು. 

ದರ್ಶನ್​ ವಿರುದ್ಧ ಮಾಡಿರುವ ಗಂಭೀರ ಆರೋಪದಿಂದ ಇಂದ್ರಜಿತ್​ ಬೆದರಿಕೆ ಎದುರಿಸುತ್ತಿದ್ದಾರೆ. ‘ಪ್ರಕರಣದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಅದನ್ನು ಕಾನೂನಾತ್ಮಕವಾಗಿ ಹೋರಾಡುತ್ತೇನೆ. ದರ್ಶನ್​ ಪ್ರಚೋದನೆ ಮೂಲಕ ದರ್ಶನ್​ ಹಿಂಬಾಲಕರು, ಅವರ​ ರೌಡಿಗಳು ಫೋನ್​ ಮೂಲಕ, ವಾಟ್ಸ್​ ಆ್ಯಪ್​ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ  ಪ್ರತಿ 30 ಸೆಕೆಂಡ್​ಗೆ ಒಂದು ಕರೆ ಬರ್ತಿದೆ. ಅಶ್ಲೀಲ ಚಿತ್ರಗಳಲ್ಲದೆ, ಅಶ್ಲೀಲ ಮೆಸೇಜ್​ಕೂಡ ಬರ್ತಿದೆ. ಹೀಗಾಗಿ ಸೈಬರ್​ ಕ್ರೈಮ್​ಗೆ ದೂರು ನೀಡುತ್ತಿದ್ದೇನೆ. ಅವರಿಗೆ ಪಾಠ ಕಲಿಸುತ್ತೇನೆ’ ಎಂದು ಎಚ್ಚರಿಸಿದ್ದಾರೆ ಇಂದ್ರಜಿತ್​.

‘30 ಜನರ ಗ್ಯಾಂಗ್​​ ನಿರಂತರವಾಗಿ ಕರೆ ಮಾಡುತ್ತಿದೆ. ಮೊಬೈಲ್ ಕರೆ ಸ್ವೀಕರಿಸಿದ ತಕ್ಷಣ ಕಾಲ್​ ಕಟ್ ಮಾಡುತ್ತಿದ್ದಾರೆ. ಕರೆ ಮಾಡಿ ನನ್ನನ್ನು ಹೆದರಿಸಲು ಯತ್ನಿಸಿದರೆ ನಾನು ಹೆದರಲ್ಲ. ಈ ರೀತಿ ನಿರಂತರ ಕರೆ, ವಾಟ್ಸಾಪ್ ಸಂದೇಶದಿಂದ ಕಿರಿಕಿರಿ ಉಂಟಾಗುತ್ತಿದೆ. ಹಾಗಾಗಿ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡುತ್ತಿದ್ದೇನೆ. ನನಗೆ ತೊಂದರೆ ನೀಡುತ್ತಿರುವವರ ನಂಬರ್​ ಉಲ್ಲೇಖಿಸಿದ್ದೇನೆ. ಅಶ್ಲೀಲ ಟ್ರೋಲ್ ಬಗ್ಗೆಯೂ ದೂರು ನೀಡ್ತೀನಿ’ ಎಂದರು ಇಂದ್ರಜಿತ್.

ಇನ್ನು, ಸುದ್ದಿಗೋಷ್ಠಿ ವೇಳೆಯೆ ಇಂದ್ರಜಿತ್​ ಕರೆ ಸ್ವೀಕರಿಸಿ ತೋರಿಸಿದ್ದಾರೆ. ಕರೆ ಎತ್ತಿದ ನಂತರದಲ್ಲಿ ಯಾರೊಬ್ಬರೂ ಮಾತನಾಡುವುದಿಲ್ಲ. ಬದಲಿಗೆ ಕಾಲ್​ ಕಟ್​ ಮಾಡಿದ್ದಾರೆ. .

ಇದನ್ನೂ ಓದಿ: ದರ್ಶನ್-ಇಂದ್ರಜಿತ್ ಎಪಿಸೋಡ್ ಸಮ್ಮುಖದಲ್ಲಿ ಹಿರಿಯ ನಟ ಜಗ್ಗೇಶ್ ನೀಡಿರುವ ಸಚಿತ್ರ ಪ್ರತಿಕ್ರಿಯೆ ಏನು? ಕೊಟ್ಟ ಸಂದೇಶ ಏನು? ಹಂಚಿಕೊಂಡ ಚಿತ್ರಗಳು ಎಂಥವು?

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada