ನಟ ದರ್ಶನ್ ವಿರುದ್ಧ ಕಾನೂನು ಸಮರಕ್ಕೆ ನಿರ್ಮಾಪಕ ಉಮಾಪತಿ ಸಜ್ಜು

ತಮ್ಮ ಪರ ವಾದ ಮಂಡಿಸಲು ಖ್ಯಾತ ವಕೀಲರಿಬ್ಬರನ್ನು ಉಮಾಪತಿ ನೇಮಕ ಮಾಡಿದ್ದಾರೆ. ಹನುಮಂತರಾಯಪ್ಪ, ಶ್ಯಾಮ್​ ಸುಂದರ್​ಗೆ ಕೇಸ್ ಜವಾಬ್ದಾರಿಯನ್ನು ನೀಡಿದ್ದಾರೆ.

ನಟ ದರ್ಶನ್ ವಿರುದ್ಧ ಕಾನೂನು ಸಮರಕ್ಕೆ ನಿರ್ಮಾಪಕ  ಉಮಾಪತಿ ಸಜ್ಜು
ದರ್ಶನ್​ - ಉಮಾಪತಿ ಶ್ರೀನಿವಾಸ್​ ಗೌಡ
TV9kannada Web Team

| Edited By: sandhya thejappa

Jul 19, 2021 | 12:07 PM

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದರ್ಶನ್ (Darshan) ವಿರುದ್ಧ ಕಾನೂನು ಸಮರಕ್ಕೆ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ( Umapathy Srinivas Gowda) ಸಜ್ಜಾಗಿದ್ದಾರೆ. ಲೋನ್ ಲಡಾಯಿಗೆ ಕಾನೂನಾತ್ಮಕವಾಗಿ ಉತ್ತರ ನೀಡಲು ನಿರ್ಮಾಪಕ ಸಿದ್ಧರಾಗುತ್ತಿದ್ದಾರೆ. ತಮ್ಮ ಪರ ವಾದ ಮಂಡಿಸಲು ಖ್ಯಾತ ವಕೀಲರಿಬ್ಬರನ್ನು ಉಮಾಪತಿ ನೇಮಕ ಮಾಡಿದ್ದಾರೆ. ಹನುಮಂತರಾಯಪ್ಪ, ಶ್ಯಾಮ್​ ಸುಂದರ್​ಗೆ ಕೇಸ್ ಜವಾಬ್ದಾರಿಯನ್ನು ನೀಡಿದ್ದಾರೆ. ತಿರುಪತಿಯಿಂದ ಬರುತ್ತಿದ್ದಂತೆ ಉಮಾಪತಿ ಎಲ್ಲದಕ್ಕೂ ಕಾನೂನಾತ್ಮಕವಾಗಿ ಉತ್ತರಿಸುತ್ತೇನೆ ಅಂತ ಹೇಳಿಕೆ ನೀಡಿದ್ದಾರೆ.

ಆಸ್ತಿ ವಿಚಾರವೇನು? ಆಸ್ತಿ ವಿಚಾರವಾಗಿ ಮಾತನಾಡಿದ್ದ ಉಮಾಪತಿ, ನಟ ಪುನೀತ್ ರಾಜ್ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರಿಗೆ ಸೇರಿದ್ದ ಆಸ್ತಿ ಖರೀದಿಸಿದ್ದೆ. ಆ ಆಸ್ತಿಯನ್ನು ದರ್ಶನ್ ಕೇಳಿದ್ದರು. ನಾನು ಕೊಡಲ್ಲ ಅಂದಿದ್ದೆ. ದರ್ಶನ್ ಸರ್ ಸಹ ಅದಕ್ಕೆ ಒಪ್ಪಿಗೆ ನೀಡಿ ವಿಚಾರ ಕೈಬಿಟ್ಟಿದ್ದರು ಎಂದು ಹೇಳಿದ್ದರು. ಪ್ರಾಪರ್ಟಿ ವಿಚಾರವನ್ನು ನಾನು ಮತ್ತು ದರ್ಶನ್ ಮಾತನಾಡಿಕೊಳ್ಳುತ್ತೇವೆ. ಪ್ರಾಪರ್ಟಿ ಬೇಕೇ ಬೇಕು ಎಂದು ದರ್ಶನ್ ಕೇಳುವುದಿಲ್ಲ. ದರ್ಶನ್ ಅವರಿಗೆ ನಾನು ಬೇರೆ ವ್ಯವಸ್ಥೆ ಮಾಡುವುದಾಗಿ ಈಗಾಗಲೇ ಹೇಳಿದ್ದೇನೆ ಎಂದು ತಿಳಿಸಿದ್ದರು.

ನಾನು ಆ ಆಸ್ತಿಯನ್ನು ದುಡ್ಡು ಕೊಟ್ಟು ಖರೀದಿಸಿದ್ದೇನೆ. ಅದು ದೊಡ್ಮನೆಯವರದ್ದು. ಪ್ರಾಪರ್ಟಿ ಕೊಟ್ಟರೆ, ಬೇರೆಯದ್ದೇ ಆಯಾಮ ಪಡೆಯುತ್ತದೆ. ದೊಡ್ಮನೆಯವರ ಪ್ರಾಪರ್ಟಿ ಮತ್ತೊಬ್ಬರಿಗೆ ಮಾರಿದರೆ ಶೋಭೆ ತರುವುದಿಲ್ಲ. ಹಾಗಾಗಿ ನಾನು ದೊಡ್ಮನೆ ಪ್ರಾಪರ್ಟಿಯನ್ನ ಮಾರಾಟ ಮಾಡಿಲ್ಲ ಎಂದು ಉಮಾಪತಿ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ

ದರ್ಶನ್- ಉಮಾಪತಿ ಭಿನ್ನಾಭಿಪ್ರಾಯಕ್ಕೆ ಆಸ್ತಿ ವಿಚಾರ ಕಾರಣವೇ?; ಉಮಾಪತಿ ಹೇಳಿದ್ದೇನು?

ದರ್ಶನ್​ ಮತ್ತು ನನ್ನ ನಡುವೆ ಯಾವುದೇ ವೈರತ್ವ ಇಲ್ಲ: ನಿರ್ಮಾಪಕ ಉಮಾಪತಿ ಸ್ಪಷ್ಟನೆ

(Producer Umapathy has appointed a lawyer to argue their darshan loan case)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada