ಕೊಚ್ಚೆ ಮೇಲೆ ಕಲ್ಲು ಹಾಕಲ್ಲ, ಲೀಗಲ್​ ಆಗಿ ಫೈಟ್​ ಮಾಡ್ತೀನಿ; ದರ್ಶನ್​ಗೆ ಇಂದ್ರಜಿತ್​ ತಿರುಗೇಟು

ನಟ ದರ್ಶನ್ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ದರ್ಶನ್ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು. ಅವರು ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ ಇಂದ್ರಜಿತ್ ಲಂಕೇಶ್.


ನಟ ದರ್ಶನ್​ ಅವರು ಇಂದ್ರಜಿತ್​ ಲಂಕೇಶ್​ ವಿರುದ್ಧ ಹರಿಹಾಯ್ದಿದ್ದರು. ಅವರು ಗಂಡಸಾಗಿದ್ದರೆ ಆಡಿಯೋ ರಿಲೀಸ್​  ಮಾಡಲಿ ಎಂದು ಸವಾಲು ಹಾಕಿದ್ದರು. ಈ ಹೇಳಿಕೆಯಿಂದ ಇಂದ್ರಜಿತ್​ ಬೇಸರವಾಗಿಲ್ಲ ಎಂದಿದ್ದಾರೆ. ‘ನಟ ದರ್ಶನ್ ಹೇಳಿಕೆಯಿಂದ ನನಗೆ ನೋವಾಗಿಲ್ಲ. ಮೂರು ಬಿಟ್ಟವರ ಬಗ್ಗೆ ಏನು ಮಾತನಾಡುವುದು? ಕೊಚ್ಚೆಗೆ ಕಲ್ಲು ಎಸೆಯುವುದಕ್ಕೆ ನಾನು ಹೋಗುವುದಿಲ್ಲ. ನಾನು ಲೀಗಲ್ ಆಗಿ ಹೋಗ್ತೀನಿ. ಸುಮೊಟೊ ಕೇಸ್ ಆಗಿದೆ, ಎಫ್​ಐಆರ್ ಕೂಡ ಆಗಿದೆ ಎಂದರು.

‘ನಟ ದರ್ಶನ್ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ದರ್ಶನ್ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು. ಅವರು ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದು ಒಳ್ಳೆಯದು’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್.

ಇದನ್ನೂ ಓದಿ: Prem Press Meet: ದರ್ಶನ್ ‘ಜೋಗಿ ಪ್ರೇಮ್ ಪುಡಾಂಗ್’ ಎಂದಿದ್ದು ಬೇಸರವಾಗಿದೆ; ನಿರ್ದೇಶಕ ಪ್ರೇಮ್