ನಾನು ಆ ಆಸ್ತಿಯನ್ನು ದುಡ್ಡು ಕೊಟ್ಟು ಖರೀದಿಸಿದ್ದೇನೆ. ಅದು ದೊಡ್ಮನೆಯವರದ್ದು. ಪ್ರಾಪರ್ಟಿ ಕೊಟ್ಟರೆ, ಬೇರೆಯದ್ದೇ ಆಯಾಮ ಪಡೆಯುತ್ತದೆ.ದೊಡ್ಮನೆಯವರ ಪ್ರಾಪರ್ಟಿ ಮತ್ತೊಬ್ಬರಿಗೆ ಮಾರಿದರೆ ಶೋಭೆ ತರುವುದಿಲ್ಲ. ಹಾಗಾಗಿ ನಾನು ದೊಡ್ಮನೆ ಪ್ರಾಪರ್ಟಿಯನ್ನ ಮಾರಾಟಮಾಡಿಲ್ಲ ಎಂದು ಉಮಾಪತಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಉಮಾಪತಿ ಶ್ರೀನಿವಾಸ ಗೌಡ ನೀಡಿರುವ ಹೇಳಿಕೆ ಇಲ್ಲಿದೆ:
ಈ ನಡುವೆ, ಅರುಣಾ ಕುಮಾರಿ ಲೋನ್ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಒಂದು ಘಟನೆಯನ್ನು ಉದಾಹರಿಸಿದ್ದಾರೆ. ‘ಮದಗಜ’ ಸಿನಿಮಾ ತಂಡಕ್ಕೆ ನಟ ದರ್ಶನ್ರಿಂದ ಪಾರ್ಟಿ ನೀಡಲಾಗಿತ್ತು. ಪಾರ್ಟಿಗೆ ನಿರ್ಮಾಪಕರು ಬರುತ್ತಾರೆ ಕಾರು ಬಿಡಿ ಎಂದಿದ್ದರು. ಆದರೆ, ನಾನು ಹೋದ ಸಂದರ್ಭದಲ್ಲಿ ನನ್ನ ಕಾರನ್ನು ತಡೆದಿದ್ದರು. ಅನಂತರ ನಟ ದರ್ಶನ್ ಅವರಿಗೆ ನಾನು ಕರೆ ಮಾಡಿದ್ದೆ. ಆಗ ದರ್ಶನ್ ಅವರು ಯಾರೋ ಒಬ್ಬರನ್ನು ಕಳಿಸಿದ್ದರು. ಆನಂತರವೇ ನನ್ನನ್ನು ಪಬ್ ಒಳಗೆ ಬಿಟ್ಟಿದ್ದರು. ಆದರೆ ಲಾಕ್ಡೌನ್ ವೇಳೆ ಅರುಣಾ ಕುಮಾರಿಗೆ ಪ್ರವೇಶ ಹೇಗೆ ನೀಡಲಾಗಿತ್ತು ಎಂಬುದನ್ನು ಅವರು ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆಯ ನಂತರವೇ ಸತ್ಯ ಹೊರಬರಲಿದೆ. ನಾನು ಅದರಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ದರ್ಶನ್- ಉಮಾಪತಿ ಭಿನ್ನಾಭಿಪ್ರಾಯಕ್ಕೆ ಆಸ್ತಿ ವಿಚಾರ ಕಾರಣವೇ?; ಉಮಾಪತಿ ಹೇಳಿದ್ದೇನು?
ಇದನ್ನೂ ಓದಿ: ಸಲ್ಲುಗೆ ಕತ್ರಿನಾ ಮೇಲೆ ಇನ್ನೂ ಲವ್ ಇದೆ ಎಂಬುದಕ್ಕೆ ಈ ಪೋಸ್ಟ್ ಸಾಕ್ಷಿ; ಫ್ಯಾನ್ಸ್ ಹೇಳೋದೇನು?
(umapathy srinivasa gowda clarifies there is no confusion on property issue with darshan)