ಸಲ್ಲುಗೆ ಕತ್ರಿನಾ ಮೇಲೆ ಇನ್ನೂ ಲವ್​ ಇದೆ ಎಂಬುದಕ್ಕೆ ಈ ಪೋಸ್ಟ್​ ಸಾಕ್ಷಿ; ಫ್ಯಾನ್ಸ್​ ಹೇಳೋದೇನು?

Katrina Kaif Birthday: ನಟ ವಿಕ್ಕಿ ಕೌಶಲ್​ ಜೊತೆಯಲ್ಲಿ ಕತ್ರಿನಾ ಕೈಫ್​ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರು ಜೊತೆಯಾಗಿ ಓಡಾಡುವುದು ಜಾಸ್ತಿ ಆಗಿದೆ. ಈ ಜೋಡಿ ಬಗ್ಗೆ ಬಿಟೌನ್​ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ.

ಸಲ್ಲುಗೆ ಕತ್ರಿನಾ ಮೇಲೆ ಇನ್ನೂ ಲವ್​ ಇದೆ ಎಂಬುದಕ್ಕೆ ಈ ಪೋಸ್ಟ್​ ಸಾಕ್ಷಿ; ಫ್ಯಾನ್ಸ್​ ಹೇಳೋದೇನು?
ರಷ್ಯಾಗೆ ಹೊರಟ ಸಲ್ಮಾನ್​ ಖಾನ್​-ಕತ್ರಿನಾ ಕೈಫ್​; ಏನಿದು ಸಮಾಚಾರ?
TV9kannada Web Team

| Edited By: Madan Kumar

Jul 17, 2021 | 12:42 PM

2003ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಕತ್ರಿನಾ ಕೈಫ್ (Katrina Kaif) ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಜು.16ರಂದು ಅವರಿಗೆ ಜನ್ಮದಿನ. 38ನೇ ವಸಂತಕ್ಕೆ ಕಾಲಿಟ್ಟಿರುವ ಈ ಚೆಲುವೆಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಅವುಗಳ ನಡುವೆ ಹೆಚ್ಚು ಗಮನ ಸೆಳೆದಿರುವುದು ಸಲ್ಮಾನ್​ ಖಾನ್​ (Salman Khan) ಮಾಡಿರುವ ವಿಶ್​. ಒಂದು ಕಾಲದಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ನಡುವೆ ಸಿಕ್ಕಾಪಟ್ಟೆ ಆಪ್ತತೆ ಇತ್ತು. ಇಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂದೇ ಹೇಳಲಾಗಿತ್ತು. ಈಗ ತಮ್ಮ ಮಾಜಿ ಪ್ರಿಯತಮೆಯ ಹುಟ್ಟುಹಬ್ಬಕ್ಕೆ ಸಲ್ಲು ತುಂಬ ಪ್ರೀತಿಯಿಂದ ಶುಭ ಹಾರೈಸಿದ್ದಾರೆ.

‘ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಆರೋಗ್ಯ, ಐಶ್ವರ್ಯಾ ನಿಮ್ಮದಾಗಲಿ ಎಂದು ಬಹಳ ಪ್ರೀತಿ ಮತ್ತು ಗೌರವದಿಂದ ಹಾರೈಸುತ್ತೇನೆ’ ಎಂದು ಸೋಶಿಯಲ್​ ಮೀಡಿಯಾ ಮೂಲಕ ಸಲ್ಮಾನ್​ ಖಾನ್​ ವಿಶ್​ ಮಾಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳಿಗೆ ಸಖತ್​ ಖುಷಿ ಆಗಿದೆ. ‘ಅತ್ತಿಗೆಗೆ ಅಣ್ಣ ಶುಭಕೋರಿದ್ದಾರೆ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ.

ಭಾರತ್​, ಟೈಗರ್​ ಜಿಂದಾ ಹೈ, ಏಕ್​ ಥಾ ಟೈಗರ್​, ಪಾರ್ಟ್ನರ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಬ್ಯಾಕ್​ ಟು ಬ್ಯಾಕ್​ ಕೆಲಸ ಮಾಡಿದರು. ಸಲ್ಲು ಬಳಗದಲ್ಲಿ ಕತ್ರಿನಾ ಗುರುತಿಸಿಕೊಂಡರು. ಇನ್ನೇನು ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದುಕೊಳ್ಳುತ್ತಿರುವಾಗಲೇ ಕತ್ರಿನಾ ಮನಸ್ಸು ಬೇರೆಡೆಗೆ ವಾಲಿತು.

ಸದ್ಯ ಬಾಲಿವುಡ್​ ನಟ, ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಸಿನಿಮಾ ಖ್ಯಾತಿಯ ವಿಕ್ಕಿ ಕೌಶಲ್​ ಜೊತೆಯಲ್ಲಿ ಕತ್ರಿನಾ ಕೈಫ್​ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರು ಜೊತೆಯಾಗಿ ಓಡಾಡುವುದು ಜಾಸ್ತಿ ಆಗಿದೆ. ಈ ಜೋಡಿ ಬಗ್ಗೆ ಬಿಟೌನ್​ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ. ಆದರೆ ಅವರಿಬ್ಬರು ನೇರವಾಗಿ ಯಾವುದನ್ನೂ ಒಪ್ಪಿಕೊಂಡಿಲ್ಲ. ಪ್ರಸ್ತುತ ಕತ್ರಿನಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಅಕ್ಷಯ್​ ಕುಮಾರ್​ ಜೊತೆ ನಟಿಸಿರುವ ‘ಸೂರ್ಯವಂಶಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆದರೆ ಕೊರೊನಾ ವೈರಸ್​ ಕಾರಣದಿಂದ ಅದರ ರಿಲೀಸ್​ ದಿನಾಂಕ ಮುಂದೂಡಲಾಗಿದೆ. ಫೋನ್​ ಭೂತ್​, ಟೈಗರ್​ 3 ಮುಂತಾದ ಸಿನಿಮಾಗಳಲ್ಲಿ ಕತ್ರಿನಾ ಕೈಫ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್​ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್​ ಖಾನ್​?

32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada