ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್​ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್​ ಖಾನ್​?

ಚಿತ್ರೀಕರಣದ ಸಂದರ್ಭದಲ್ಲಿ ಕತ್ರಿನಾ ಕೈಫ್​ ಜೊತೆ ಸಲ್ಮಾನ್​ ಖಾನ್​ ಅವರು ತಮ್ಮ ಲಿಮಿಟ್​ ಮೀರಿ ವರ್ತಿಸಿದ್ದರು ಎಂದು ವರದಿ ಆಗಿತ್ತು. ಈ ಘಟನೆ ಬಗ್ಗೆ ಕೇಳಿದ ಎಲ್ಲರಿಗೂ ಅಚ್ಚರಿ ಆಗಿತ್ತು.

ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್​ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್​ ಖಾನ್​?
ಸಲ್ಮಾನ್​ ಖಾನ್​ - ಕತ್ರಿನಾ ಕೈಫ್​
TV9kannada Web Team

| Edited By: Madan Kumar

Jun 18, 2021 | 9:37 AM

ಒಂದು ಕಾಲದಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಡೇಟಿಂಗ್​ ಮಾಡುತ್ತಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಅವರಿಬ್ಬರ ಸಂಬಂಧ ಮುಂದುವರಿಯಲಿಲ್ಲ. ಹಾಗಂತ ಅದು ಅವರ ಸಿನಿಮಾ ಕೆರಿಯರ್​ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹಲವು ಸಿನಿಮಾಗಳಲ್ಲಿ ಕತ್ರಿನಾ ಮತ್ತು ಸಲ್ಮಾನ್​ ಖಾನ್​ ಜೊತೆಯಾಗಿ ನಟಿಸಿದರು. ಒಮ್ಮೆ ಚಿತ್ರೀಕರಣದ ಸಂದರ್ಭದಲ್ಲಿ ಕತ್ರಿನಾ ಕೈಫ್​ ಜೊತೆ ಸಲ್ಮಾನ್​ ಖಾನ್​ ಅವರು ತಮ್ಮ ಲಿಮಿಟ್​ ಮೀರಿ ವರ್ತಿಸಿದ್ದರು ಎಂದು ವರದಿ ಆಗಿತ್ತು. ಈ ಘಟನೆ ಬಗ್ಗೆ ಕೇಳಿದ ಎಲ್ಲರಿಗೂ ಅಚ್ಚರಿ ಆಗಿತ್ತು. ಕತ್ರಿನಾ ಕೈಫ್​ಗೆ ಸಲ್ಮಾನ್ ಖಾನ್​ ಹೊಡೆದಿದ್ದರು ಎಂಬ ಗುಸುಗುಸು ಜೋರಾಗಿ ಹಬ್ಬಿತ್ತು.

ಅದು 2011-12ರ ಸಮಯ. ‘ಏಕ್​ ಥಾ ಟೈಗರ್​’ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಆಗಿತ್ತು ಎನ್ನಲಾದ ಘಟನೆ. ಚಿತ್ರೀಕರಣದ ಸೆಟ್​ನಲ್ಲಿ ಹೀರೋಯಿನ್​ ಕತ್ರಿನಾ ಕೈಫ್​ಗಾಗಿ ಸಲ್ಮಾನ್​ ಖಾನ್​ ಕಾಯುತ್ತ ಕುಳಿತ್ತಿದ್ದರು. ಮೇಕಪ್​ ಮತ್ತು ಕಾಸ್ಟ್ಯೂಮ್​ನೊಂದಿಗೆ ರೆಡಿಯಾಗಲು ಸಮಯ ತೆಗೆದುಕೊಂಡ ಕತ್ರಿನಾ ಕೈಫ್​ ಅವರು ನಂತರ ತಮ್ಮ ವ್ಯಾನಿಟಿ ವ್ಯಾನ್​ನಿಂದ ಹೊರಬಂದರು. ಅವರನ್ನು ನೋಡಿದ ಸಲ್ಮಾನ್​ ಖಾನ್​ಗೆ ಶಾಕ್​ ಆಯಿತು. ಅದಕ್ಕೆ ಕಾರಣ ಕತ್ರಿನಾ ಧರಿಸಿದ್ದ ಬಟ್ಟೆ.

ಅಗತ್ಯಕ್ಕಿಂತಲೂ ಅತಿಯಾಗಿ ಮೈ ಕಾಣುವಂತಹ ಬಟ್ಟೆಯನ್ನು ಕತ್ರಿನಾ ಕೈಫ್​ ಧರಿಸಿದ್ದರಂತೆ. ಅದು ಸಲ್ಮಾನ್​ ಖಾನ್​ಗೆ ಕಿಂಚಿತ್ತೂ ಇಷ್ಟ ಆಗಲಿಲ್ಲ. ಯಾಕೆ ಇಂಥ ಕಾಸ್ಟ್ಯೂಮ್​ ಎಂದು ಕೇಳಿದ್ದಕ್ಕೆ ನಿರ್ದೇಶಕರ ಕಡೆಗೆ ಕತ್ರಿನಾ ಕೈ ತೋರಿಸಿದರು. ಆ ಉತ್ತರದಿಂದ ಸಮಾಧಾನ ಆಗದ ಸಲ್ಲು, ಕತ್ರಿನಾಗೆ ಹೊಡೆದಿದ್ದರು ಎಂದು ಖಾಸಗಿ ಮ್ಯಾಗಜಿನ್​ ವರದಿ ಮಾಡಿತ್ತು. ಆ ಸಂದರ್ಭದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಪಕ್ಕದಲ್ಲೇ ನಟಿ ಕರೀನಾ ಕಪೂರ್​ ಅವರು ‘ಹೀರೋಯಿನ್​’ ಚಿತ್ರಕ್ಕಾಗಿ ಶೂಟಿಂಗ್​ ಮಾಡುತ್ತಿದ್ದರು. ಅವರು ಬಂದು ಕತ್ರಿನಾ ಮತ್ತು ಸಲ್ಮಾನ್​ ನಡುವಿನ ಹೊಡೆದಾಟವನ್ನು ನಿಲ್ಲಿಸಿದರು ಎನ್ನಲಾಗಿತ್ತು. ಹೀಗೆ ನಡೆದಿದ್ದು ನಿಜ ಎಂದು ಪ್ರತ್ಯಕ್ಷದರ್ಶಿಗಳು ಕೂಡ ಹೇಳಿದ್ದಾರೆ ಎಂದು ಆ ಖಾಸಗಿ ಮ್ಯಾಗಜಿನ್​ ಪ್ರಕಟಿಸಿತ್ತು. ನಂತರ ಅದು ಬರೀ ಗಾಸಿಪ್​ ಎಂಬ ವಾದ ಕೂಡ ಕೇಳಿಬಂತು.

ಇದನ್ನೂ ಓದಿ:

ಸಲ್ಮಾನ್​ ಖಾನ್​ ಕೆರಿಯರ್​ ನಾಶ ಮಾಡಿ ಬೀದಿಗೆ ತರುತ್ತೇನೆ; ಪ್ರತಿಜ್ಞೆ ಮಾಡಿದ ಕಮಾಲ್ ಖಾನ್​

ಥಿಯೇಟರ್​ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್​ ಖಾನ್​ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada