ಥಿಯೇಟರ್​ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್​ ಖಾನ್​ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ

Radhe Box Office Collection: ರಾಧೆ ಚಿತ್ರಕ್ಕೆ ಮೊದಲ ದಿನ 10,432 ರೂ. ಮಾತ್ರ ಕಲೆಕ್ಷನ್​ ಆಗಿದೆ. ಒಂದು ಕಾಲದಲ್ಲಿ ಚಿತ್ರಮಂದಿರಗಳಿಂದ ಬಹುಕೋಟಿ ಸಂಪಾದಿಸುತ್ತಿದ್ದ ಸಲ್ಮಾನ್​ ಖಾನ್​ ಸಿನಿಮಾ ಹೀಗೆ ಕೇವಲ 10 ಸಾವಿರ ಚಿಲ್ಲರೆ ಕಾಸು ಗಳಿಸುವಂತಾಗಿದ್ದು ಲಾಕ್​ಡೌನ್​ ಕಾರಣದಿಂದ.

ಥಿಯೇಟರ್​ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್​ ಖಾನ್​ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ
ಸಲ್ಮಾನ್ ಖಾನ್
Follow us
|

Updated on:May 22, 2021 | 10:02 AM

ಭಾರತೀಯ ಚಿತ್ರರಂಗದಲ್ಲಿ ಸಲ್ಮಾನ್​ ಖಾನ್​ ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಈಗಾಗಲೇ ಸಾಬೀತಾಗಿದೆ. ಅವರ ಸಿನಿಮಾಗಳು ಮೊದಲ ದಿನವೇ ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತವೆ. ಬಹುಕೋಟಿ ರೂಪಾಯಿ ಬಾಚಿಕೊಳ್ಳುತ್ತವೆ. ಆದರೆ ಇತ್ತೀಚೆಗೆ ತೆರೆಕಂಡ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಸಿನಿಮಾಗೆ ಕೆಲವು ವಿಘ್ನಗಳು ಎದುರಾದವು. ದೇಶದ ಹಲವು ಕಡೆಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿ ಇದ್ದಿದ್ದರಿಂದ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೆಚ್ಚು ಕಲೆಕ್ಷನ್​ ಮಾಡಲು ಸಾಧ್ಯವಾಗಿರಲಿಲ್ಲ. ಇಡೀ ದೇಶದಲ್ಲಿ ರಾಧೆ ರಿಲೀಸ್​ ಆಗಿದ್ದ ಮೂರು ಚಿತ್ರಮಂದಿರಗಳಲ್ಲಿ ಮಾತ್ರ.

ಬಹುತೇಕ ಕಡೆಗಳಲ್ಲಿ ಲಾಕ್​ಡೌನ್​ ಇದ್ದ ಕಾರಣ ರಾಧೆ ಚಿತ್ರತಂಡ ಓಟಿಟಿ ಮೊರೆ ಹೋಯಿತು. ಆದರ ನಡುವೆಯೂ ತ್ರಿಪುರದ ಮೂರು ಥಿಯೇಟರ್​ಗಳಲ್ಲಿ ರಾಧೆ ಬಿಡುಗಡೆ ಆಯಿತು. ಮೊದಲ ದಿನ ಮೂರು ಚಿತ್ರಮಂದಿರಗಳಿಂದ ಒಟ್ಟು 11 ಶೋಗಳು ಪ್ರದರ್ಶನ ಆಗಿವೆ. ಅವುಗಳಿಂದ ಮೊದಲ ದಿನ 10,432 ರೂ. ಮಾತ್ರ ಕಲೆಕ್ಷನ್​ ಆಗಿದೆ. ಒಂದು ಕಾಲದಲ್ಲಿ ಚಿತ್ರಮಂದಿರಗಳಿಂದ ಬಹುಕೋಟಿ ಸಂಪಾದಿಸುತ್ತಿದ್ದ ಸಲ್ಮಾನ್​ ಖಾನ್​ ಸಿನಿಮಾ ಹೀಗೆ ಕೇವಲ 10 ಸಾವಿರದಂತಹ ಚಿಲ್ಲರೆ ಕಾಸು ಗಳಿಸುವಂತಾಗಿದ್ದು ಲಾಕ್​ಡೌನ್​ ಕಾರಣದಿಂದ.

ತ್ರಿಪುರದಲ್ಲಿ ಕೂಡ ನೈಟ್​ ಕರ್ಫ್ಯೂ ಇದ್ದಿದ್ದರಿಂದ ಮಧ್ಯಾಹ್ನ 3 ಗಂಟೆಗೆ ಕೊನೇ ಶೋ ಇರುತ್ತಿತ್ತು. ಆದರೆ ಈ ಮೂರು ಚಿತ್ರಮಂದಿರಗಳಲ್ಲಿ ರಾಧೆ ಪ್ರದರ್ಶನ ಕಂಡಿದ್ದು ನಾಲ್ಕು ದಿನ ಮಾತ್ರ. 5ನೇ ದಿನಕ್ಕೆ ತ್ರಿಪುರದಲ್ಲೂ ಲಾಕ್​ಡೌನ್​ ಆರಂಭ ಆಗಿದ್ದರಿಂದ ರಾಧೆ ಅಂಗಡಿ ಮುಚ್ಚುವುದು ಅನಿವಾರ್ಯವಾಯಿತು. ಮೊದಲ ವೀಕೆಂಡ್​ ವೇಳೆಗೆ ಮೂರು ಚಿತ್ರಮಂದಿರದಿಂದ ಈ ಸಿನಿಮಾ ಗಳಿಸಿದ್ದು ಕೇವಲ 63 ಸಾವಿರ ರೂ. ಮಾತ್ರ ಎನ್ನುತ್ತಿವೆ ಮೂಲಗಳು.

ಚಿತ್ರಮಂದಿರದಲ್ಲಿ ರಾಧೆಗೆ ಹೀನಾಯ ಕಲೆಕ್ಷನ್​ ಆಗಿದೆ ನಿಜ. ಆದರೆ ಓಟಿಟಿಯಲ್ಲಿ ಭರ್ಜರಿ ಹಣ ಬಾಚಿಕೊಂಡಿದೆ. ಈದ್​ ಹಬ್ಬದ ಪ್ರಯುಕ್ತ ಮೇ 13ರಂದು ಜೀ5 ಒಡೆತನದ ಜೀ ಪ್ಲೆಕ್ಸ್​​ನಲ್ಲಿ ‘ರಾಧೆ ರಿಲೀಸ್​ ಆಗಿತ್ತು. ರಿಲೀಸ್​ ಆದ ಒಂದೇ ದಿನಕ್ಕೆ ಈ ಸಿನಿಮಾ 42 ಲಕ್ಷ ಬಾರೀ ವೀಕ್ಷಣೆ ಕಂಡಿದೆ. ಒಂದು ಬಾರಿ ಸಿನಿಮಾ ವೀಕ್ಷಿಸಬೇಕು ಎಂದರೆ 249 ರೂಪಾಯಿ ನೀಡಬೇಕು. ಅಂದರೆ, ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 108 ಕೋಟಿ ರೂಪಾಯಿ ಎಂದು ವರದಿ ಆಗಿದೆ.

ಇದನ್ನೂ ಓದಿ:

ತೌಕ್ತೆ ಚಂಡಮಾರುತದಿಂದ ಸಲ್ಮಾನ್​ ಖಾನ್​ಗೆ ಉಂಟಾಯ್ತು ದೊಡ್ಡ ನಷ್ಟ

ಲಾಕ್​ಡೌನ್​ ನಿಯಮ ಮೀರಿದ್ರೆ ರಾಧೆ ಚಿತ್ರವನ್ನು ಪದೇಪದೇ ತೋರಿಸಲಾಗುತ್ತದೆ; ಬೆಂಗಳೂರು ಸಿಟಿ ಪೊಲೀಸ್​ ಹೀಗೆ ಟ್ವೀಟ್​ ಮಾಡಿದ್ದು ನಿಜವೇ?

Published On - 9:41 am, Sat, 22 May 21

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು