AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ಆದಿಪುರುಷ್​ಗಾಗಿ ಬಾಡಿ ಬೆಳೆಸಲು ಸ್ಟಿರಾಯ್ಡ್​ ಬಳಸಿದ್ದಾರಾ ಪ್ರಭಾಸ್​? ಸಹನಟ ತೆರೆದಿಟ್ಟ ಸತ್ಯ ಇಲ್ಲಿದೆ

Adipurush: ಬಾಡಿ ಬಿಲ್ಡ್​ ಮಾಡಲು ಪ್ರಭಾಸ್​ ಯಾವ ಮಾರ್ಗ ಅನುಸರಿಸುತ್ತಿದ್ದಾರೆ? ಡಯೆಟ್​ ಯಾವ ರೀತಿ ಇದೆ ಎಂಬ ಬಗ್ಗೆ ಕೌತುಕ ಮನೆ ಮಾಡಿದೆ. ಈ ಬಗ್ಗೆ ಆದಿಪುರುಷ್​ ಸಿನಿಮಾದ ಇನ್ನೋರ್ವ ನಟ ಸನ್ನಿ​ ಸಿಂಗ್​ ಮಾತನಾಡಿದ್ದಾರೆ.

Prabhas: ಆದಿಪುರುಷ್​ಗಾಗಿ ಬಾಡಿ ಬೆಳೆಸಲು ಸ್ಟಿರಾಯ್ಡ್​ ಬಳಸಿದ್ದಾರಾ ಪ್ರಭಾಸ್​? ಸಹನಟ ತೆರೆದಿಟ್ಟ ಸತ್ಯ ಇಲ್ಲಿದೆ
ಪ್ರಭಾಸ್​ - ಸನ್ನಿ ಸಿಂಗ್​
Follow us
ಮದನ್​ ಕುಮಾರ್​
|

Updated on: May 22, 2021 | 8:15 AM

ಬಾಹುಬಲಿ ಸಿನಿಮಾಗಾಗಿ ಹಲವು ವರ್ಷಗಳನ್ನು ಮೀಸಲಿಟ್ಟಿದ್ದ ಟಾಲಿವುಡ್ ನಟ​ ಪ್ರಭಾಸ್​ ಅವರು ಈಗ ಬೇಗ ಬೇಗ ಸಿನಿಮಾ ಮಾಡುತ್ತಿದ್ದಾರೆ. ಬ್ಯಾಕ್​ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಂಡು ಅವುಗಳ ಶೂಟಿಂಗ್​ ಮುಗಿಸುತ್ತಿದ್ದಾರೆ. ಒಂದೊಂದು ಸಿನಿಮಾದಲ್ಲಿ ಅವರಿಗೆ ಒಂದೊಂದು ರೀತಿಯ ಗೆಟಪ್​ಗಳಿವೆ. ಸದ್ಯ ಪ್ರಭಾಸ್​ ಕೈಯಲ್ಲಿ ರಾಧೆ ಶ್ಯಾಮ್​, ಆದಿಪುರುಷ್​, ಸಲಾರ್​ ಮುಂತಾದ ಸಿನಿಮಾಗಳಿವೆ. ಈ ಎಲ್ಲ ಪ್ರಾಜೆಕ್ಟ್​ಗಳ ಮೇಲೂ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದಿಪುರುಷ್​ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರ ಮಾಡುತ್ತಿರುವುದು ವಿಶೇಷ. ಅದಕ್ಕಾಗಿ ಅವರು ಭರ್ಜರಿಯಾಗಿ ಬಾಡಿ ಬಿಲ್ಡ್​ ಮಾಡುತ್ತಿದ್ದಾರೆ.

ಮೊದಲೇ ಹೇಳಿದಂತೆ ಪ್ರಭಾಸ್​ ನಟನೆಯ ಎಲ್ಲ ಸಿನಿಮಾಗಳ ಕೆಲಸಗಳು ವೇಗವಾಗಿ ಸಾಗುತ್ತಿವೆ. ಎಲ್ಲ ಪಾತ್ರಗಳಿಗಾಗಿಯೂ ಅವರು ಬೇಗ ಬೇಗ ಸಿದ್ಧರಾಗುತ್ತಿದ್ದಾರೆ. ಆದಿಪುರುಷ್​ ಚಿತ್ರಕ್ಕಾಗಿ ಅವರು ಕಟ್ಟುಮಸ್ತಾಗಿ ಬಾಡಿ ಬೆಳೆಸುತ್ತಿದ್ದು, ಆ ಬಗ್ಗೆಯೂ ಅಭಿಮಾನಿಗಳಿಗೆ ಕುತೂಹಲ ಇದೆ. ಬಾಡಿ ಬಿಲ್ಡ್​ ಮಾಡಲು ಪ್ರಭಾಸ್​ ಯಾವ ಮಾರ್ಗ ಅನುಸರಿಸುತ್ತಿದ್ದಾರೆ? ಡಯೆಟ್​ ಯಾವ ರೀತಿ ಇದೆ ಎಂಬ ಬಗ್ಗೆಯೂ ಕೌತುಕ ಮನೆ ಮಾಡಿದೆ. ಈ ಬಗ್ಗೆ ಈ ಸಿನಿಮಾದ ಇನ್ನೋರ್ವ ನಟ ಸನ್ನಿ​ ಸಿಂಗ್​ ಮಾತನಾಡಿದ್ದಾರೆ.

‘ಈ ಸಿನಿಮಾಗಾಗಿ ನಾವು ಕಠಿಣ ಡಯೆಟ್​ ಮಾಡುತ್ತಿದ್ದೇವೆ. ಶೇ.50 ಕಾರ್ಬ್ಸ್​ ಹಾಗೂ ಶೇ.50 ಪ್ರೋಟೀನ್​ ಸೇವಿಸುತ್ತಿದ್ದೇವೆ. ಪ್ರತಿ ದಿನ 15 ಅಥವಾ 10 ಮೊಟ್ಟೆ ತಿನ್ನುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ಮತ್ತು ಪ್ರಭಾಸ್​ ಕಟ್ಟುಮಸ್ತಾಗಿ ಕಾಣಬೇಕಿದೆ. ಪಾತ್ರಕ್ಕೆ ಅದು ಅನಿವಾರ್ಯವಾಗಿದೆ. ಯಾವುದೇ ಸ್ಟಿರಾಯ್ಡ್​ ಅಥವಾ ಸಪ್ಲಿಮೆಂಟ್​ಗಳನ್ನು ನಾವು ಬಳಸುತ್ತಿಲ್ಲ. ತುಂಬ ನ್ಯಾಚುರಲ್​ ಆಗಿ ಬಾಡಿ ಬೆಳೆಸುತ್ತಿದ್ದೇವೆ’ ಎಂದು ಸನ್ನಿ ಸಿಂಗ್​ ಹೇಳಿದ್ದಾರೆ. ಈ ಚಿತ್ರದಲ್ಲಿ ಅವರು ಲಕ್ಷ್ಮಣನ ಪಾತ್ರ ಮಾಡುತ್ತಿದ್ದಾರೆ.

‘ತಾನಾಜಿ: ದಿ ಅನ್​ಸಂಗ್​ ವಾರಿಯರ್​’ ಸಿನಿಮಾ ಮೂಲಕ ಭಾರಿ ಯಶಸ್ಸು ಪಡೆದ ನಿರ್ದೇಶಕ ಓಂ ರಾವುತ್​ ಅವರು ‘ಆದಿಪುರುಷ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ರಾಮನಾಗಿ ಪ್ರಭಾಸ್​ ನಟಿಸಿದರೆ, ಸೀತೆಯಾಗಿ ಕೃತಿ ಸನೋನ್​ ಕಾಣಿಸಿಕೊಳ್ಳಲಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​ ಅಭಿನಯಿಸುತ್ತಿದ್ದಾರೆ. ಇನ್ನೂ ಹಲವು ಕಲಾವಿದರ ಹೆಸರು ಕೇಳಿಬರುತ್ತಿದೆ. ಆದರೆ ಆ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಇದೊಂದು ಪೌರಾಣಿಕ ಸಿನಿಮಾ ಆಗಿರುವುದರಿಂದ ಪ್ರಭಾಸ್​ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಲಾಕ್​ಡೌನ್​ನಿಂದಾಗಿ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿದೆ.

ಇದನ್ನೂ ಓದಿ:

ಬಯಲಾಯ್ತು ಪ್ರಭಾಸ್​-ಪ್ರಶಾಂತ್​ ನೀಲ್​ ‘ಸಲಾರ್’ ಚಿತ್ರದ ಇನ್ನೊಂದು ಸೀಕ್ರೆಟ್​

ಬಿಗ್ ಬಾಸ್​ ಸ್ಪರ್ಧಿಗೆ ಖ್ಯಾತ ತೆಲುಗು ನಟ ಪ್ರಭಾಸ್​ ಜತೆ ನಟಿಸೋ ಅವಕಾಶ

ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್