AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯಲಾಯ್ತು ಪ್ರಭಾಸ್​-ಪ್ರಶಾಂತ್​ ನೀಲ್​ ‘ಸಲಾರ್’ ಚಿತ್ರದ ಇನ್ನೊಂದು ಸೀಕ್ರೆಟ್​

ಆದಿಪುರುಷ್​ ಚಿತ್ರದಲ್ಲಿ ಪ್ರಭಾಸ್​ ರಾಮನ ಅವತಾರ ತಾಳಿದ್ದಾರೆ. ಈ ಸಿನಿಮಾದ ಪೋಸ್ಟರ್​ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು, ರಾಧೆ ಶ್ಯಾಮ್​ ಚಿತ್ರದಲ್ಲಿ ಲವರ್​ ಬಾಯ್​ ಆಗಿ ಪ್ರಭಾಸ್​ ಕಾಣಿಸಿಕೊಳ್ಳಲಿದ್ದಾರೆ.

ಬಯಲಾಯ್ತು ಪ್ರಭಾಸ್​-ಪ್ರಶಾಂತ್​ ನೀಲ್​ ‘ಸಲಾರ್’ ಚಿತ್ರದ ಇನ್ನೊಂದು ಸೀಕ್ರೆಟ್​
ನಟ ಪ್ರಭಾಸ್
ರಾಜೇಶ್ ದುಗ್ಗುಮನೆ
| Edited By: |

Updated on: May 18, 2021 | 7:21 AM

Share

ಪ್ರಭಾಸ್​ ಏಕಕಾಲಕ್ಕೆ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮೂರು ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನ. ಹೀಗಾಗಿ, ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಬಹು ನಿರೀಕ್ಷಿತ ಸಲಾರ್​ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎನ್ನುವ ವಿಚಾರ ರಿವೀಲ್​ ಆಗಿದೆ.

ಆದಿಪುರುಷ್​ ಚಿತ್ರದಲ್ಲಿ ಪ್ರಭಾಸ್​ ರಾಮನ ಅವತಾರ ತಾಳಿದ್ದಾರೆ. ಈ ಸಿನಿಮಾದ ಪೋಸ್ಟರ್​ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು, ರಾಧೆ ಶ್ಯಾಮ್​ ಚಿತ್ರದಲ್ಲಿ ಲವರ್​ ಬಾಯ್​ ಆಗಿ ಪ್ರಭಾಸ್​ ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಹೆಗ್ಡೆ ಅವರ ಜತೆಗಿನ ಕಾಂಬಿನೇಷನ್​ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈಗ ಸಲಾರ್​ ಸಿನಿಮಾದಲ್ಲಿ ಪ್ರಭಾಸ್​ ಪಾತ್ರ ಹೇಗಿದೆ ಎನ್ನುವ ವಿಚಾರ ರಿವೀಲ್​ ಆಗಿದೆ.

ಮೂಲಗಳ ಪ್ರಕಾರ ಪ್ರಭಾಸ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತಿದೆ. ಸೇನಾಧಿಕಾರಿ​ ಆಗಿ ಒಂದರಲ್ಲಿ ಕಾಣಿಸಿಕೊಂಡರೆ, ಮತ್ತೊಂದು ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಹಾಗೆಯೇ ಉಳಿದುಕೊಂಡಿದೆ.

ಈಗಾಗಲೇ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳು ಸೇನೆಯ ಕಥೆಯ ಹಿನ್ನೆಲೆ ಆಧರಿಸಿ ಬಂದಿವೆ. ಈ ಸಾಲಿಗೆ ಸಲಾರ್​ ಕೂಡ ಸೇರಿಕೊಳ್ಳುತ್ತಿದೆ. ಅಂದಹಾಗೆ, ಇಡೀ ಸಿನಿಮಾದಲ್ಲಿ ಸೇನಾಧಿಕಾರಿ ಪಾತ್ರ ತುಂಬಾನೇ ಹೈಲೈಟ್​ ಆಗಲಿದೆಯಂತೆ. ಸಾಕಷ್ಟು ಆ್ಯಕ್ಷನ್​ ಕೂಡ ಇರಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಸಲಾರ್​ ಸಿನಿಮಾ 2014ರಲ್ಲಿ ತೆರೆಕಂಡ ಉಗ್ರಂ ಚಿತ್ರದ ರಿಮೇಕ್​ ಎಂದು ಹೇಳಲಾಗಿತ್ತು. ಇದನ್ನು ಸಂಗೀತ ನಿರ್ದೇಶಕ ರವಿ ಬಸ್ರೂಸ್​ ಖಚಿತಪಡಿಸಿದ್ದರು. ಆದರೆ, ಈಗ ಕೇಳಿ ಬರುತ್ತಿರುವ ಹೊಸ ಅಪ್​ಡೇಟ್​ಗಳು ಸಾಕಷ್ಟು ಕುತೂಹಲ ಹಾಗೂ ಅಚ್ಚರಿ ಮೂಡಿಸುತ್ತಿವೆ.

ಮೂಲಗಳ ಪ್ರಕಾರ ಸಲಾರ್​ ಸಿನಿಮಾ ತುಂಬಾನೇ ಅದ್ದೂರಿಯಾಗಿ ಸಿದ್ಧಗೊಳ್ಳುತ್ತಿದೆಯಂತೆ. ಇದೇ ಕಾರಣಕ್ಕೆ, ಸಿನಿಮಾದ ಬಜೆಟ್​ 150 ಕೋಟಿ ರೂಪಾಯಿ ತಲುಪಿದೆ. ಅಲ್ಲದೆ, ಕೆಜಿಎಫ್​ನಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಸಲಾರ್​ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದರಿಂದ ಇವರು ದೊಡ್ಡ ಮೊತ್ತದ ಸಂಭಾವನೆ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾ ಬಜೆಟ್​ ಹಿರಿದಾಗಿದೆ.

ಇದನ್ನೂ ಓದಿ: ಕೆಜಿಎಫ್ 2-ಸಲಾರ್​ಗೂ ಇದೆ ಲಿಂಕ್​; ವಿಶೇಷ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ನೀಲ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್