AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ ಸ್ಪರ್ಧಿಗೆ ಖ್ಯಾತ ತೆಲುಗು ನಟ ಪ್ರಭಾಸ್​ ಜತೆ ನಟಿಸೋ ಅವಕಾಶ

ರಾಮಾಯಣದಲ್ಲಿ ರಾವಣನ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾವಣನಿಗೆ ಇಂದ್ರಜಿತ್​ ಹೆಸರಿನ ಮಗ ಇರುತ್ತಾನೆ. ಈ ಪಾತ್ರಕ್ಕೆ ಸಿದ್ಧಾರ್ಥ್​ ಜೀವ ತುಂಬಲಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್​ ಸ್ಪರ್ಧಿಗೆ ಖ್ಯಾತ ತೆಲುಗು ನಟ ಪ್ರಭಾಸ್​ ಜತೆ ನಟಿಸೋ ಅವಕಾಶ
ಆದಿಪುರುಷ್
ರಾಜೇಶ್ ದುಗ್ಗುಮನೆ
| Edited By: |

Updated on: May 16, 2021 | 5:17 PM

Share

ಬಿಗ್​ ಬಾಸ್​ ಮನೆ ಹೊಕ್ಕಿ ಬಂದ ನಂತರದಲ್ಲಿ ಸಾಕಷ್ಟು ಸ್ಪರ್ಧಿಗಳ ಲಕ್​ ಬದಲಾಗಿದೆ. ಅದರಲ್ಲೂ ವಿನ್​ ಆದ ಸ್ಪರ್ಧಿಗಳ ಅದೃಷ್ಟವಂತೂ ಸಾಕಷ್ಟು ಬದಲಾಗಿದೆ. ದೊಡ್ಮನೆ ಹೋಗಿ ಬಂದ ಅನೇಕರಿಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದೆ. ಈಗ ಹಿಂದಿ ಬಿಗ್​ ಬಾಸ್​ ಸೀಸನ್​ 13 ವಿನ್ನರ್​ ಸಿದ್ಧಾರ್ಥ್​ ಶುಕ್ಲಗೂ ಅದೃಷ್ಟ ಕೈ ಹಿಡಿದಿದೆ. ಪ್ರಭಾಸ್​ ನಟನೆಯ ಆದಿಪುರುಷ್​ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸಿದ್ಧಾರ್ಥ್​ ಕಾಣಿಸಿಕೊಳ್ಳಲಿದ್ದಾರಂತೆ.

ಆದಿಪುರುಷ್​ ಚಿತ್ರ ರಾಮಾಯಣ ಆಧರಿಸಿ ಸಿದ್ಧಗೊಳ್ಳುತ್ತಿರುವ ಚಿತ್ರ. ಈ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್​ ಕಾಣಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ತಂಡ ಪ್ರಭಾಸ್​ ಅವರ ರಾಮನ ಲುಕ್​ ರಿಲೀಸ್​ ಮಾಡಿತ್ತು. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಸಿಕ್ಕಿದೆ.  ​

ರಾಮಾಯಣದಲ್ಲಿ ರಾವಣನ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾವಣನಿಗೆ ಇಂದ್ರಜಿತ್​ ಹೆಸರಿನ ಮಗ ಇರುತ್ತಾನೆ. ಈ ಪಾತ್ರಕ್ಕೆ ಸಿದ್ಧಾರ್ಥ್​ ಜೀವ ತುಂಬಲಿದ್ದಾರೆ ಎನ್ನಲಾಗಿದೆ. ಹಿಂದಿ ಟಿವಿ ಸೀರಿಯಲ್​ಗಳ ಮೂಲಕ ಸಿದ್ಧಾರ್ಥ್​ ಹೆಚ್ಚು ಚಿರಪರಿಚಿತರಾಗಿದ್ದಾರೆ. ಹಮ್ಟಿ ಶರ್ಮಾ ಕಿ ದುಲ್ಹನಿಯಾ ಸಿನಿಮಾದಲ್ಲಿ ಸಿದ್ಧಾರ್ಥ್​ ಮುಖ್ಯಭೂಮಿಕೆ ನಿರ್ವಹಿಸಿದ್ದರು.

ಆದಿಪುರುಷ್​ ಚಿತ್ರದ ಕಲಾವರ್ಗ ತುಂಬಾ ದೊಡ್ಡದಿದೆ. ದಿನ ಕಳೆದಂತೆ ಹೊಸ ಹೊಸ ಕಲಾವಿದರು ಸಿನಿಮಾ ತಂಡ ಸೇರಿಕೊಳ್ಳುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ರಾಮಾಯಣದ ಒಂದು ಭಾಗವನ್ನು ಆಧಾರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ.

ಬಾಹುಬಲಿ ಸಿನಿಮಾ ತೆರೆಕಂಡ ನಂತರದಲ್ಲಿ ಪ್ರಭಾಸ್​ ಸ್ಟಾರ್​​ಗಿರಿ ದೊಡ್ಡದಾಗಿದೆ. ಅವರಿಗೆ ಬಾಲಿವುಡ್​ನಿಂದಲೂ ಆಫರ್​ ಬರುತ್ತಿವೆ. ಸದ್ಯ, ಪ್ರಭಾಸ್​ ಮೂರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಮತ್ತೊಂದು ಸಿನಿಮಾವನ್ನು ಅವರು ಸೈಲೆಂಟ್​ ಆಗಿ ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಇತ್ತೀಚೆಗೆ ಕೇಳಿ ಬಂದಿತ್ತು.

ಇದನ್ನೂ ಓದಿ: ಕ್ಯೂರಿಯಾಸಿಟಿ ಹೆಚ್ಚಿಸಿದ ನೂತನ ಚಿತ್ರ ‘ಆದಿಪುರುಷ್’ ಅವತಾರದಲ್ಲಿ ಬರ್ತಿದ್ದಾರೆ ಪ್ರಭಾಸ್, ರಾಮನಿಗೆ ಸೀತೆ ಯಾರು ಗೊತ್ತಾ?

ಪ್ರಭಾಸ್​, ಸೈಫ್​ ಅಲಿ ಖಾನ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಯಾವ ಪಾತ್ರ?

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More