ಕ್ಯೂರಿಯಾಸಿಟಿ ಹೆಚ್ಚಿಸಿದ ನೂತನ ಚಿತ್ರ ‘ಆದಿಪುರುಷ್’ ಅವತಾರದಲ್ಲಿ ಬರ್ತಿದ್ದಾರೆ ಪ್ರಭಾಸ್, ರಾಮನಿಗೆ ಸೀತೆ ಯಾರು ಗೊತ್ತಾ?

ಬಾಹುಬಲಿ, ಸಾಹೋ ನಂತರ ಪ್ರಭಾಸ್ ಆದಿಪುರುಷ್ ಸಿನಿಮಾದ ಮೂಲಕ ಮೋಡಿ ಮಾಡೋಕೆ ಭರ್ಜರಿ ಪ್ಲಾನ್ ಮಾಡಿದ್ದಾರೆ. ಅಂದ ಹಾಗೆ ಪ್ರಭಾಸ್ ಜೊತೆ ಸ್ಕ್ರೀನ್ ಶೇರ್ ಮಾಡೋ ಕುರಿತು ಹಲವು ನಟಿಯರ ಹೆಸರು ತಳುಕು ಹಾಕಿಕೊಂಡಿತ್ತು. ಸದ್ಯ ಸೀತೆ ಅವತಾರ ತಾಳೋ ನಾಯಕಿ ಹೆಸರು ಹೊರ ಬಂದಿದೆ.

ಕ್ಯೂರಿಯಾಸಿಟಿ ಹೆಚ್ಚಿಸಿದ ನೂತನ ಚಿತ್ರ ‘ಆದಿಪುರುಷ್’ ಅವತಾರದಲ್ಲಿ ಬರ್ತಿದ್ದಾರೆ ಪ್ರಭಾಸ್, ರಾಮನಿಗೆ ಸೀತೆ ಯಾರು ಗೊತ್ತಾ?
ಆದಿಪುರುಷ್
Follow us
ಆಯೇಷಾ ಬಾನು
|

Updated on:Nov 29, 2020 | 11:04 AM

ಬಾಹುಬಲಿ ಸಿನಿಮಾ ಮೂಲಕ ಪ್ರಭಾಸ್ ಮೋಡಿ ಮಾಡಿದ ನಂತರವಂತೂ ಅವರ ಎಲ್ಲಾ ಸಿನಿಮಾಗಳ ಅಪ್ ಡೇಟ್ಸ್ ಗಳಿಗಾಗಿ ದೊಡ್ಡ ಅಭಿಮಾನಿ ಬಳಗವೇ ಕಾದು ಕೂರುವಂತಹ ಕ್ಯೂರಿಯಾಸಿಟಿ ಸೃಷ್ಟಿಯಾಗಿದೆ. ಸದ್ಯ ಆದಿಪುರುಷ್ ಸಿನಿಮಾದಲ್ಲಿ ನಟಿಸ್ತಿರೋ ಪ್ರಭಾಸ್, ಸಿನಿಮಾಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಜನವರಿ ನಂತ್ರ ಆದಿಪುರುಷ್ ಸಿನಿಮಾದಲ್ಲಿ ರಾಮನ ಅವತಾರಕ್ಕೆ ಮೇಕಪ್ ಹಾಕೋಕೆ ರೆಡಿಯಾಗಿದ್ದಾರೆ ಎನ್ನಲಾಗ್ತಿದೆ.

ಒಂದು ಕಡೆ ಪ್ರಭಾಸ್ ರಾಮನಾಗೋದು ಜೊತೆಗೆ ಸೈಪ್ ಅಲಿಖಾನ್ ಲಂಕಾಧಿತಿ ರಾವಣನ ಅವತಾರ ತಾಳೋಕೆ ಕೂಡ ರೆಡಿಯಾಗ್ತಿದ್ದಾರೆ. ಇದೆಲ್ಲದರ ಜೊತೆಗೆ ಪ್ರಭಾಸ್ ಜೊತೆ ಸೊಂಟ ಬಳುಕಿಸೋ ನಟಿ ಯಾರು. ಈ ಭಾರಿ ರಾಮನಿಗೆ ಸೀತೆ ಆಗೋದ್ಯಾರು ಅನ್ನೋ ಲೆಕ್ಕಾಚಾರದಲ್ಲಿ ಹಲವು ನಟಿಯರ ಹೆಸರು ಕೇಳಿ ಬಂದಿವೆ. ಮೊದಮೊದಲು ಅನುಷ್ಕಾ ಶೆಟ್ಟಿ, ಅನುಷ್ಕಾ ಶರ್ಮಾ ಹೆಸರಿನ ಜೊತೆಗೆ ಕೀರ್ತಿ ಸುರೇಶ್ ಸ್ಕ್ರೀನ್ ಶೇರ್ ಮಾಡ್ತಾರೆ ಎನ್ನಲಾಗಿತ್ತು.

ರಾಮನಿಗೆ ಸೀತೆ ಆಗಿ ಕಮಾಲ್ ಮಾಡ್ತಾರಾ ಕೃತಿ ಸನೂನ್: ಆದ್ರೀಗ ಅದೆಲ್ಲದಕ್ಕೂ ಬ್ರೇಕ್ ಹಾಕಿರೋ ಚಿತ್ರತಂಡ ಸೀತೆ ಅವತಾರದಲ್ಲಿ ಕಾಣಿಸಿಕೊಳ್ಳೋದು ನಟಿ ಕೃತಿ ಸನೂನ್ ಅನ್ನೋ ಮಾಹಿತಿ ಹೊರ ಹಾಕಿದೆ. ಸದ್ಯ ಕೃತಿ ಕೂಡ ಒಂದೊಳ್ಳೆ ಅವಕಾಶ ಅಂದ್ಕೊಂಡು ಆದಿಪುರುಷ್‌ಗೆ ಗ್ರೀನ್ ಸಿಗ್ನಲ್‌ ನೀಡಿದ್ದಾರಂತೆ. ಓಂ ರಾವುತ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ಕೃತಿ ಸನೂನ್ ಜನವರಿಯಲ್ಲಿ ಆದಿಪುರುಷ್ ಅಡ್ಡಕ್ಕೆ ಎಂಟ್ರಿ ಕೊಡಲಿದ್ದಾರಂತೆ.

ಒಟ್ಟಿನಲ್ಲಿ ಪ್ರಬಾಸ್ ಜೊತೆ ನಾಯಕಿಯಾಗೋದ್ಯಾರು ಅನ್ನೋದಕ್ಕೆ ಸದ್ಯ ಉತ್ತರ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿಂದ ಸಿನಿಮಾ ಸೌಂಡ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Published On - 6:55 am, Sun, 29 November 20

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ