ನಾಳೆ ವರ್ಷದ ಕೊನೆಯ ರಾಹುಗ್ರಸ್ತ ಚಂದ್ರಗ್ರಹಣ, ಮಧ್ಯಾಹ್ನ 1 ಗಂಟೆ 3 ನಿಮಿಷಕ್ಕೆ ಆರಂಭ..
ನವೆಂಬರ್ 30ರಂದು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರಲ್ಲಿ ಸಂಭವಿಸ್ತಿರೋ ಕೊನೆಯ ಚಂದ್ರಗ್ರಹಣ. ಇದನ್ನು ಛಾಯಾ ಚಂದ್ರಗ್ರಹಣ ಅಂತಲೂ ಕರೆಯಲಾಗುತ್ತೆ. ಈ ವರ್ಷದಲ್ಲಿ ಈಗಾಗ್ಲೇ 3 ಚಂದ್ರಗ್ರಹಣ ಸಂಭವಿಸಿದ್ದು ಇದು 4ನೇ ಚಂದ್ರಗ್ರಹಣವಾಗಿದೆ.

ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಅಡ್ಡ ಬರುವ ಖಗೋಳ ಪ್ರಕ್ರಿಯೆಯನ್ನೇ ಚಂದ್ರಗ್ರಹಣ ಎನ್ನಲಾಗುತ್ತೆ. ಜ್ಯೋತಿಷ್ಯವಲಯದ ಪ್ರಕಾರ, ರಾಹು, ಚಂದ್ರನನ್ನು ಆವರಿಸುವ ಕಾರಣ ಇದನ್ನು ರಾಹುಗ್ರಸ್ತ ಚಂದ್ರಗ್ರಹಣ ಅಂತಾ ಹೇಳಲಾಗುತ್ತೆ. ಈ ಖಗೋಳ ವಿದ್ಯಮಾನವು ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಸಂಭವಿಸ್ತಿದೆ.
ಈ ಚಂದ್ರಗ್ರಹಣವನ್ನು ಛಾಯಾ ಚಂದ್ರಗ್ರಹಣ, ಪೆನಂಬ್ರಲ್ ಚಂದ್ರಗ್ರಹಣ ಹಾಗೂ ರಾಹುಗ್ರಸ್ತ ಚಂದ್ರಗ್ರಹಣ ಅಂತೆಲ್ಲಾ ಕರೆಯಲಾಗುತ್ತೆ. ಈ ಚಂದ್ರಗ್ರಹಣದ ಸಂದರ್ಭದಲ್ಲಿ ಚಂದ್ರ ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿರ್ತಾನೆ. ಈ ಚಂದ್ರಗ್ರಹಣ ನಮ್ಮಲ್ಲಿ ಗೋಚರಿಸಲ್ಲ. ಯಾಕಂದ್ರೆ ಚಂದ್ರಗ್ರಹಣವಾಗುವ ಸಮಯದಲ್ಲಿ ಭಾರತದಲ್ಲಿ ಸೂರ್ಯೋದಯವಾಗಿರುತ್ತೆ.
ಚಂದ್ರಗ್ರಹಣ ಗೋಚರ ಸಮಯ: ಗ್ರಹಣ ಸ್ಪರ್ಶ ಕಾಲ- ಮಧ್ಯಾಹ್ನ 1.02 ಗ್ರಹಣ ಮಧ್ಯ ಕಾಲ- ಮಧ್ಯಾಹ್ನ 3.12 ಗ್ರಹಣ ಮೋಕ್ಷ ಕಾಲ- ಸಂಜೆ 5.20
ಈ ಚಂದ್ರಗ್ರಹಣ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಹಾಗೂ ದಕ್ಷಿಣ ಅಮೆರಿಕಾಗಳಲ್ಲಿ ಗೋಚರವಾಗಲಿದೆ. ಆದ್ರೆ ಈ ಚಂದ್ರಗ್ರಹಣ ಗೋಚರವಾಗುವ ಸಮಯದಲ್ಲಿ ಭಾರತದಲ್ಲಿ ಸೂರ್ಯೋದಯವಾಗಿರುತ್ತೆ. ಹೀಗಾಗಿ ನಮ್ಮಲ್ಲಿ ಚಂದ್ರಗ್ರಹಣ ಆಚರಣೆಯ ಅವಶ್ಯಕತೆ ಇಲ್ಲ. ಆದ್ರೆ ಗ್ರಹಣದ ಪ್ರಭಾವ ಮಾತ್ರ ಇದ್ದೇ ಇರುತ್ತೆ ಅಂತಾ ಹೇಳಲಾಗ್ತಿದೆ.
ಅನೇಕ ಅವಘಡಗಳಿಗೆ ಕಾರಣವಾಗುತ್ತಾ ಈ ಗ್ರಹಣ: ವಿಜ್ಞಾನದ ಪ್ರಕಾರ, ಚಂದ್ರಗ್ರಹಣ ಎನ್ನುವಂತದ್ದು ಸೌರಮಂಡಲದಲ್ಲಿ ನಡೆಯುವ ಒಂದು ಪ್ರಕ್ರಿಯೆ. ಇದ್ರಿಂದ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಜ್ಯೋತಿಷ್ಯದ ಪ್ರಕಾರ, ಈ ಗ್ರಹಣ ಅನೇಕ ಅವಘಡಗಳಿಗೆ ಕಾರಣವಾಗುತ್ತೆ ಎನ್ನಲಾಗ್ತಿದೆ.
ಜ್ಯೋತಿಷಿಗಳ ಲೆಕ್ಕಾಚಾರದ ಪ್ರಕಾರ, ಈ ಬಾರಿಯ ರಾಹುಗ್ರಸ್ತ ಚಂದ್ರಗ್ರಹಣದ ಪ್ರಭಾವದಿಂದಾಗಿ ಜಲಕಂಟಕಗಳು ಹೆಚ್ಚಾಗುತ್ತವೆ. ಪ್ರವಾಹ ಭೀತಿಯು ಹೆಚ್ಚಾಗುತ್ತೆ. ಚಂಡಮಾರುತಗಳು ಹೆಚ್ಚಾಗುತ್ತವೆಯಂತೆ.
ಜ್ಯೋತಿಷಿಗಳ ಲೆಕ್ಕಾಚಾರದ ಪ್ರಕಾರ, ರಾಹುಗ್ರಸ್ತ ಚಂದ್ರಗ್ರಹಣದ ಪ್ರಭಾವದಿಂದಾಗಿ ಶೀತಗಾಳಿಯು ಹೆಚ್ಚಾಗುತ್ತೆ. ಅದರಿಂದ ಜ್ವರಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳಲಿವೆ. ಇದೇ ಸಮಯದಲ್ಲಿ ಕೊರೊನಾದ ಎರಡನೇ ಅಲೆಯ ಎಚ್ಚರಿಕೆಯ ಮಾತುಗಳು ಆತಂಕವನ್ನು ಸೃಷ್ಟಿಮಾಡಿವೆ.




