ಮದರಂಗಿ ಅಳಿಸಿಲ್ಲ.. ಮದುವೆಯ ಕನಸು ನನಸಾಗಿಲ್ಲ.. 2 ದಿನದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಚಿರನಿದ್ರೆಗೆ ಜಾರಿದ್ದಾಳೆ

ಮದರಂಗಿ ಅಳಿಸಿಲ್ಲ.. ಮದುವೆಯ ಕನಸು ನನಸಾಗಿಲ್ಲ.. 2 ದಿನದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಚಿರನಿದ್ರೆಗೆ ಜಾರಿದ್ದಾಳೆ

ಆಕೆ ಸುಂದರ ಚೆಲುವೆ.. ಎಂಬಿಎ ಓದಿಕೊಂಡಿದ್ದ ಆಕೆ, ಜೀವನದಲ್ಲಿ ಸಾವಿರಾರು ಕನಸು ಹೊತ್ತು ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ಲು. ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರೆಬೇಕಿದ್ದ ಆ ಯುವತಿ ಅನುಮಾನಾಸ್ಪದವಾಗಿ ಸಾವಿನ ಮನೆ ಸೇರಿದ್ದಾಳೆ.

Ayesha Banu

|

Nov 29, 2020 | 11:09 AM

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಕದುರುಗೆರೆ ನಿವಾಸಿಯಾದ 23 ವರ್ಷದ ರೇಖಾ, ಸಾವಿರಾರು ಕನಸುಗಳನ್ನ ಹೊತ್ತಿದ್ಲು. ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಜೀವನವನ್ನ ಕಟ್ಟಿಕೊಳ್ಳುವ ಕನಸು ಹೊತ್ತಿಕೊಂಡಿದ್ದ ಈ ಯುವತಿಯ ಬದುಕಿನಲ್ಲಿ ವಿಧಿ ಆಟವಾಡಿದೆ. ಹೊಸಬಾಳಿನ ಹೊಸ್ತಿಲು ತುಳಿಯ ಬೇಕಿದ್ದ ಈಕೆ ಸಾವಿನ ಮನೆಯ ಹೊಸ್ತಿಲು ತುಳಿದಿದ್ದಾಳೆ.

ಹೊಸ ಕನಸು ಕಂಡ ಯುವತಿ ಬಾಳಲ್ಲಿ ವಿಧಿಯಾಟ! ನೂತನ ಜೀವನಕ್ಕೆ ಹೆಜ್ಜೆ ಇಡಲು ಸಿದ್ದವಾಗಿದ್ದ ಈ ರೇಖಾಳಿಗೆ ಎರಡು ದಿನಗಳ ಹಿಂದೆ ನೆಲಮಂಗಲದ ಯುವಕನ ಜೊತೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ನಂತರ ಇಬ್ಬರು ಅನ್ಯೋನ್ಯವಾಗಿಯೇ ಮಾತನಾಡುತ್ತಿದ್ದರು. ಆದ್ರೆ ಅದೇನಾಯ್ತೋ ಏನೋ ನಿನ್ನೆ ಮಧ್ಯಾಹ್ನನದ ವೇಳೆಗೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿಕೊಂಡು ಈ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ಆತ್ಮಹತ್ಯೆ ಹಿಂದೆ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಹುಡುಗ ಹುಡುಗಿಯ ನಡುವೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಪ್ರಕರಣದ ಸತ್ಯಾಸತ್ಯೆಗೆ ಮುಚ್ಚಿಹಾಕಲು ರಾಜಕೀಯ ಮುಖಂಡರ ಪ್ರಭಾವ ಬಳಸಿದ್ದಾರೆ ಎನ್ನಲಾಗಿದೆ. ಆದ್ರೆ ಹೊಟ್ಟೆ ನೋವಿನಿಂದ ನೇಣಿಗೆ ಶರಣಾಗಿದ್ದಾಳೆಂದು ಯುವತಿಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಒಟ್ಟಾರೆ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆದ್ರೆ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ ಸೂಸೈಡ್ ಮಾಡ್ಕೊಂಡಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ. ಇದಕ್ಕೆ ತನಿಖೆ ನಂತರವೇ ಉತ್ತರ ಸಿಗಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada