ಪ್ರಭಾಸ್​, ಸೈಫ್​ ಅಲಿ ಖಾನ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಯಾವ ಪಾತ್ರ?

ಪ್ರಭಾಸ್​, ಸೈಫ್​ ಅಲಿ ಖಾನ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಯಾವ ಪಾತ್ರ?
ಆದಿಪುರುಷ್​ ಚಿತ್ರದ ಪೋಸ್ಟರ್​ - ಕಿಚ್ಚ ಸುದೀಪ್​

Adipurush: ಈ ಹಿಂದೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಕಿಚ್ಚ ಸುದೀಪ್​ ಅವರು ವಿಶೇಷ ಪಾತ್ರಗಳನ್ನು ಮಾಡಿದ್ದುಂಟು. ಈಗ ಪ್ರಭಾಸ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಸುದೀಪ್​ ಒಂದು ಅಥಿತಿ ಪಾತ್ರ ಮಾಡುತ್ತಾರೆಂಬ ಬಗ್ಗೆ ಕೆಲವೆಡೆ ವರದಿ ಆಗಿದೆ.

Madan Kumar

| Edited By: Rajesh Duggumane

May 06, 2021 | 4:25 PM

ಪ್ರಭಾಸ್​ ನಟನೆಯ ಆದಿಪುರುಷ್​ ಚಿತ್ರದ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗೆ ಕಾರಣ ಹಲವು. ಖ್ಯಾತ ನಿರ್ದೇಶಕ ಓಂ ರಾವುತ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರಾಮನಾಗಿ ಪ್ರಭಾಸ್​ ಕಾಣಿಸಿಕೊಂಡರೆ, ರಾವಣನ ಪಾತ್ರಕ್ಕೆ ಸೈಫ್​ ಅಲಿ ಖಾನ್​ ಬಣ್ಣ ಹಚ್ಚುತ್ತಿದ್ದಾರೆ. ಈಗ ಈ ಚಿತ್ರತಂಡಕ್ಕೆ ಕಿಚ್ಚ ಸುದೀಪ್​ ಕೂಡ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಅವರು ರಾವಣನ ತಮ್ಮ ವಿಭೀಷಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಹಲವು ದಿನಗಳ ಹಿಂದೆಯೇ ಆದಿಪುರುಷ್​ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಿತ್ತು. ಆದರೆ ಕೊರೊನಾ ವೈರಸ್​ ಹರಡುತ್ತಿರುವ ಕಾರಣ ಚಿತ್ರೀಕರಣಕ್ಕೆ ಈಗ ಬ್ರೇಕ್​ ಹಾಕಲಾಗಿದೆ. ಪಾತ್ರವರ್ಗದ ಕಾರಣಕ್ಕಾಗಿ ಈ ಸಿನಿಮಾ ಹೆಚ್ಚು ಹೈಪ್​ ಪಡೆದುಕೊಳ್ಳುತ್ತಿದೆ. ಸುದೀಪ್ ಅವರು ವಿಭೀಷಣನ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂಬ ಗುಸುಗುಸು ಕೇಳಿಬಂದಿದೆಯಾದರೂ ಆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಪರಭಾಷೆಯಲ್ಲಿ ಸುದೀಪ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಹಿಂದೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಅವರು ವಿಶೇಷ ಪಾತ್ರಗಳನ್ನು ಮಾಡಿದ್ದಾರೆ. ಪ್ರಭಾಸ್​ ನಟನೆಯ ಬಾಹುಬಲಿ ಚಿತ್ರದಲ್ಲಿ ಸುದೀಪ್​ ಅವರು ಅಸ್ಲಮ್​ ಖಾನ್​ ಎಂಬ ಚಿಕ್ಕ ಪಾತ್ರವನ್ನು ಮಾಡಿದ್ದರು. ಈಗ ಮತ್ತೆ ಪ್ರಭಾಸ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಅಥಿತಿ ಪಾತ್ರ ಮಾಡುವ ಬಗ್ಗೆ ಕೆಲವೆಡೆ ವರದಿ ಆಗಿದೆ. ಈ ಕುರಿತಂತೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಯಾವಾಗ ಹೊರಬರಬಹುದು ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ಅಜಯ್​ ದೇವಗನ್​ ನಟನೆಯ ‘ತಾನಾಜಿ: ದಿ ಅನ್​ ಸಂಗ್​ ವಾರಿಯರ್​’ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಪಡೆದಿರುವ ನಿರ್ದೇಶಕ ಓಂ ರಾವುತ್​ ಅವರು ಆದಿಪುರುಷ್​ಗೆ ಆ್ಯಕ್ಷನ್​-ಕಟ್​ ಹೇಳುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ಫೆಬ್ರವರಿಯಲ್ಲಿ ಈ ಚಿತ್ರದ ಶೂಟಿಂಗ್​ ನಡೆಯುತ್ತಿರುವಾಗ ಅಗ್ನಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್​ ಯಾವುದೇ ಸಾವು ನೋವು ಆಗಿರಲಿಲ್ಲ.

ಇದನ್ನೂ ಓದಿ:

 Kichcha Sudeep: ಸುದೀಪ್​ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್​ಗೆ ಕಿಚ್ಚ ಗೈರು

Prabhas: ಪ್ರಭಾಸ್​ ಮನೆಗೆ ಬಂತು ದುಬಾರಿ ಲ್ಯಾಂಬೋರ್ಗಿನಿ! ಬೆಲೆ ಕೇಳಿ ಸುಸ್ತಾದ ಫ್ಯಾನ್ಸ್​

Follow us on

Related Stories

Most Read Stories

Click on your DTH Provider to Add TV9 Kannada