Vinay Rajkumar Birthday: ನಟ ವಿನಯ್ ರಾಜ್ಕುಮಾರ್ ಜನ್ಮದಿನಕ್ಕೆ ವಿಶೇಷ ವಿಡಿಯೋ ಮೂಲಕ ವಿಶ್ ಮಾಡಿದ ರಾಘಣ್ಣ
Happy Birthday Vinay Rajkumar: ವಿನಯ್ ರಾಜ್ಕುಮಾರ್ ಅವರಿಗೆ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡುತ್ತಿದ್ದಾರೆ. ಪುತ್ರನ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ಶುಭಕೋರಿದ್ದಾರೆ.
ಡಾ. ರಾಜ್ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಹೀರೋ ಆಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟ ನಟ ವಿನಯ್ ರಾಜ್ಕುಮಾರ್ ಅವರಿಗೆ ಇಂದು (ಮೇ 7) ಹುಟ್ಟುಹಬ್ಬ. ಕೊರೊನಾ ಹರಡುವ ಭೀತಿಯಲ್ಲಿ ಯಾವುದೇ ನಟರು ಕೂಡ ಈ ಸಂದರ್ಭದಲ್ಲಿ ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ, ವಿನಯ್ ರಾಜ್ಕುಮಾರ್ ಅವರಿಗೆ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕವೇ ವಿಶ್ ಮಾಡುತ್ತಿದ್ದಾರೆ.
ಪುತ್ರನ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ಶುಭಕೋರಿದ್ದಾರೆ. ಅಣ್ಣಾವ್ರ ಮಡಿಲಲ್ಲಿ ಆಡಿ ಬೆಳದವರು ವಿನಯ್. ಚಿಕ್ಕ ವಯಸ್ಸಿನಿಂದ ಹಿಡಿದು ತಾರುಣ್ಯದವರೆಗೆ ಡಾ. ರಾಜ್ ಜೊತೆಗೆ ಅವರು ಕಳೆದ ಅನೇಕ ಕ್ಷಣಗಳು ಫೋಟೋಗಳಲ್ಲಿ ಸೆರೆಯಾಗಿವೆ. ಆ ಫೋಟೋಗಳನ್ನೆಲ್ಲ ಒಳಗೊಂಡಿರುವ ಒಂದು ವಿಡಿಯೋವನ್ನು ರಾಘಣ್ಣ ಹಂಚಿಕೊಂಡಿದ್ದಾರೆ. ‘ಚಿನ್ನ ಎಂದೂ ನಗುತಿರು, ನನ್ನ ಸಂಗ ಬಿಡದಿರು..’ ಹಾಡಿನ ಹಿನ್ನೆಲೆಯಲ್ಲಿ ಪುತ್ರನಿಗೆ ಅವರು ವಿಶ್ ಮಾಡಿದ್ದಾರೆ.
ಆಕಸ್ಮಿಕ, ಅನುರಾಗದ ಅಲೆಗಳು, ಒಡಹುಟ್ಟಿದವರು, ಓಂ, ಹೃದಯ ಹೃದಯ ಮುಂತಾದ ಸಿನಿಮಾಗಳಲ್ಲಿ ವಿಜಯ್ ರಾಜ್ಕುಮಾರ್ ಅವರು ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಸಿನಿಮಾ ಕುಟುಂಬದಲ್ಲೇ ಬೆಳೆದ ಅವರು 2015ರಲ್ಲಿ ಹೀರೋ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ವಿನಯ್ ನಟನೆಯ ಮೊದಲ ಸಿನಿಮಾ ‘ಸಿದ್ಧಾರ್ಥ’. ಆ ಚಿತ್ರಕ್ಕೆ ಅವರು ಸೈಮಾ ಅವಾರ್ಡ್ ಪಡೆದುಕೊಂಡರು.
View this post on Instagram
ಹಲವು ಬಗೆಯ ಪಾತ್ರಗಳನ್ನು ವಿನಯ್ ಪ್ರಯತ್ನಿಸುತ್ತಿದ್ದಾರೆ. 2016ರಲ್ಲಿ ‘ರನ್ ಆ್ಯಂಟೊನಿ’ ಚಿತ್ರದಲ್ಲಿ ಅವರು ನಟಿಸಿದರು. 2018ರಲ್ಲಿ ಬಂದ ‘ಅನಂತು ವರ್ಸಸ್ ನುಸ್ರತ್’ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ ಸಿಕ್ಕಿತು. ಸದ್ಯ ವಿನಯ್ ನಟಿಸುತ್ತಿರುವ ಟೆನ್, ಪೆಪೆ ಮತ್ತು ಗ್ರಾಮಾಯಣ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಟೆನ್ ಚಿತ್ರದಲ್ಲಿ ಅವರು ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ:
ಡಾ. ರಾಜ್ ನಿಧನರಾದ ದಿನ ಆಕಾಶ ನೋಡಿಕೊಂಡು ದೇವರಿಗೆ ಬೈಯ್ದಿದ್ದ ಮೊಮ್ಮಗಳು ಧನ್ಯಾ!
ರಾಜ್ಕುಮಾರ್ ಕಿಡ್ನ್ಯಾಪ್ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್ಕ್ಲ್ಯೂಸಿವ್ ಸಂದರ್ಶನ
Published On - 9:15 am, Fri, 7 May 21