AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಸುದೀಪ್​ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್​ಗೆ ಕಿಚ್ಚ ಗೈರು

Bigg Boss Kannada: ಎರಡು ವಾರಗಳ ದೀರ್ಘ ಅನಾರೋಗ್ಯದ ಬಳಿಕ ಸುದೀಪ್​ ಚೇತರಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಕೊರೊನಾ ಹಾವಳಿ ಮಿತಿ ಮೀರುತ್ತಿದೆ. ಕೊವಿಡ್​ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ.

Kichcha Sudeep: ಸುದೀಪ್​ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್​ಗೆ ಕಿಚ್ಚ ಗೈರು
ಕಿಚ್ಚ ಸುದೀಪ್
ಮದನ್​ ಕುಮಾರ್​
|

Updated on: May 01, 2021 | 7:40 AM

Share

ಹಲವು ದಿನಗಳಿಂದ ನಟ ಕಿಚ್ಚ ಸುದೀಪ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಇತ್ತೀಚೆಗೆ ಅವರ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿತ್ತು. ತಾವು ಗುಣಮುಖ ಆಗಿರುವುದಾಗಿ ಸ್ವತಃ ಸುದೀಪ್ ಹೇಳಿದ್ದರು. ಇನ್ನೇನು ಅವರು ಈ ವಾರದ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆಲ್ಲ ಈಗ ತೀವ್ರ ನಿರಾಸೆ ಆಗಿದೆ. ಈ ವೀಕೆಂಡ್​ನಲ್ಲಿಯೂ ಸುದೀಪ್​ ಬಿಗ್​ ಬಾಸ್​ಗೆ ಗೈರಾಗಲಿದ್ದಾರೆ!

ಇದು ಗಾಸಿಪ್​ ಅಲ್ಲ. ಕಲರ್ಸ್​ ಕನ್ನಡ ವಾಹಿನಿಯೇ ಈ ಬಗ್ಗೆ ಮಾಹಿತಿ ನೀಡಿದೆ. ‘ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ’ ಎಂದು ತಿಳಿಸಲಾಗಿದೆ. ಇದು ಸಹಜವಾಗಿಯೇ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಎರಡು ವಾರಗಳ ದೀರ್ಘ ಅನಾರೋಗ್ಯದ ಬಳಿಕ ಸುದೀಪ್​ ಚೇತರಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಕೊರೊನಾ ಹಾವಳಿ ಮಿತಿ ಮೀರುತ್ತಿದೆ. ಕೊವಿಡ್​ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಸೂಕ್ತ ಚಿಕಿತ್ಸೆ ಸಿಗದೇ ಜನರು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಚಿತ್ರೀಕರಣ ನಡೆಸುವುದು ಸರಿಯಲ್ಲ. ಬಿಗ್​ ಬಾಸ್​ ಚಿತ್ರೀಕರಣದಲ್ಲಿ  ಸುದೀಪ್​ ಕೂಡ ಭಾಗಿ ಆಗುವಂತಿಲ್ಲ. ಈ ಎಲ್ಲ ಕಾರಣದಿಂದ ವೀಕೆಂಡ್ ಎಪಿಸೋಡ್​ನಲ್ಲಿ ಅವರು ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕಲರ್ಸ್​ ಕನ್ನಡ ವಾಹಿನಿ ನೀಡಿರುವ ಈ ಪ್ರಕಟಣೆಗೆ ಅಭಿಮಾನಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಸುದೀಪ್ ಅವರು ಪಂಚಾಯತಿ ಮಾಡದಿದ್ದರೆ ಮನೆಯಲ್ಲಿ ನಡೆಯುತ್ತಿರುವ ಭೇದಭಾವಗಳಿಗೆ ಮತ್ತು ತಾರತಮ್ಯಗಳಿಗೆ ಸರಿಯಾದ ಉತ್ತರ ಸಿಗುವುದಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ಕೆಲವರು ತಮಗೆ ಇಷ್ಟ ಬಂದಂತೆ ಆಟ ಆಡುತ್ತಿದ್ದಾರೆ. ಮೋಸದ ಆಟವನ್ನು ಆಡುತ್ತಿದ್ದಾರೆ. ಇದಕ್ಕೆ ಬಿಗ್​ ಬಾಸ್​ ಏನಾದರೂ ಮಾಡಬೇಕು’ ಎಂದು ವೀಕ್ಷಕರು ಮನವಿ ಮಾಡಿಕೊಂಡಿದ್ದಾರೆ.

ಬಿಗ್​ ಬಾಸ್​ನಲ್ಲಿ ಭಾಗವಹಿಸಬೇಕು ಎಂದು ಸುದೀಪ್​ ತುಂಬ ಕಾತರದಿಂದ ಕಾಯುತ್ತಿದ್ದರು. ‘ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಹಾರೈಕೆಗೆ ಧನ್ಯವಾದಗಳು. ನಾನೀಗ ಉತ್ತಮವಾಗಿದ್ದೇನೆ. ಈ ವಾರ ಬಿಗ್​ ಬಾಸ್​ನಲ್ಲಿ ಭಾಗವಹಿಸಲು ಕಾಯುತ್ತಿದ್ದೇನೆ’ ಎಂದು ಅವರು ಇತ್ತೀಚೆಗೆ ಟ್ವೀಟ್​ ಮಾಡಿದ್ದರು. ಆದರೆ ಪರಿಸ್ಥಿತಿ ಅದಕ್ಕೆಲ್ಲ ಅವಕಾಶ ಮಾಡಿಕೊಡುತ್ತಿಲ್ಲ. ಸುದೀಪ್​ ಇಲ್ಲದೆಯೂ ಬಿಗ್​ ಬಾಸ್​ನಲ್ಲಿ ಪ್ರತಿ ವಾರ ಎಲಿಮಿನೇಷನ್​ ಪ್ರಕ್ರಿಯೆ ಮುಂದುವರಿಯುತ್ತಿದೆ. ಕಳೆದ ವಾರ ರಾಜೀವ್​ ಔಟ್​ ಆಗಿದ್ದರು.

ಇದನ್ನೂ ಓದಿ: ಶುಭಾ ಬಳಿ ಇರುವ ಅಮೂಲ್ಯ ವಸ್ತು ಕದಿಯಲು ಸಂಬರಗಿ ಪ್ಲ್ಯಾನ್​; ಮಂಜು ಕೊಟ್ರು ಎಚ್ಚರಿಕೆ

Kichcha Sudeep: ಕಿಚ್ಚ ಸುದೀಪ್ ಆರೋಗ್ಯಕ್ಕಾಗಿ ವಿಡಿಯೋ ಮಾಡಿ ಪ್ರಾರ್ಥಿಸಿದ ಜಪಾನ್​ ಮಹಿಳೆ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?