ಬಿಗ್​ ಬಾಸ್​ ಸ್ಪರ್ಧಿ ನಿಧಿ ಸುಬ್ಬಯ್ಯ ವೈವಾಹಿಕ ಜೀವನದ ಬಗ್ಗೆ ಕೊನೆಗೂ ಸಿಕ್ತು ಸ್ಪಷ್ಟನೆ

ಇತ್ತೀಚೆಗೆ ನಿಧಿ ಲೈವ್​ ಬಂದಿದ್ದರು. ಈ ವೇಳೆ ನಿಮ್ಮ ಮದುವೆ ಮತ್ತು ನಂತರದ ವೈವಾಹಿಕ ಜೀವನದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಲಿಲ್ಲ ಏಕೆ ಎನ್ನುವ ಪ್ರಶ್ನೆ ಬಂತು. ಆಗ ನಿಧಿ ಎಲ್ಲದಕ್ಕೂ ಉತ್ತರಿಸಿದರು.

ಬಿಗ್​ ಬಾಸ್​ ಸ್ಪರ್ಧಿ ನಿಧಿ ಸುಬ್ಬಯ್ಯ ವೈವಾಹಿಕ ಜೀವನದ ಬಗ್ಗೆ ಕೊನೆಗೂ ಸಿಕ್ತು ಸ್ಪಷ್ಟನೆ
ನಿಧಿ ಸುಬ್ಬಯ್ಯ
Follow us
ರಾಜೇಶ್ ದುಗ್ಗುಮನೆ
|

Updated on:May 16, 2021 | 6:16 PM

ನಟಿ ನಿಧಿ ಸುಬ್ಬಯ್ಯ ಬಿಗ್​ ಬಾಸ್​ ಮನೆ ಪ್ರವೇಶಿಸಿ 11 ವಾರ ಇದ್ದರು. ಬಿಗ್​ ಬಾಸ್​ ಅರ್ಧಕ್ಕೆ ನಿಂತ ನಂತರದಲ್ಲಿ ಅವರು ಮನೆಯಿಂದ ಹೊರ ಬಂದಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು. ನಿಧಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ತಮ್ಮ ತಂದೆಗೆ ಕ್ಯಾನ್ಸರ್​ ಆಗಿತ್ತು ಎಂಬಿತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದರು. ಆದರೆ, ಅವರು ಎಲ್ಲಿಯೂ ಮದುವೆ ಆಗಿದ್ದ ವಿಚಾರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರ ಆ ಬಗ್ಗೆ ನಿಧಿ ಮೌನ ಮುರಿದರು.

ಯೋಗರಾಜ್​ ಭಟ್​ ನಟನೆಯ ಪಂಚರಂಗಿ ಸಿನಿಮಾ ನಿಧಿ ಸುಬ್ಬಯ್ಯಗೆ ಹಿಟ್​ ತಂದುಕೊಟ್ಟಿತ್ತು. ಇದಾದ ನಂತರ ನಿಧಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್​ ಅಂಗಳದಲ್ಲೂ ನಿಧಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಲವೇಶ್​ ಹೆಸರಿನ ಉದ್ಯಮಿಯನ್ನು ನಿಧಿ ಪ್ರೀತಿಸುತ್ತಿದ್ದರು. 2017ರಲ್ಲಿ ವಿರಾಜಪೇಟೆಯ ಖಾಸಗಿ ರೆಸಾರ್ಟ್​ನಲ್ಲಿ ಇವರು ಮದುವೆ ಕೂಡ ಆಗಿದ್ದರು. ನಂತರ ನಿಧಿ ಪತಿ ಜತೆ ವಿದೇಶಕ್ಕೆ ಹಾರಿದ್ದರು ಎನ್ನಲಾಗಿತ್ತು. ಈ ಅವಧಿಯಲ್ಲಿ ನಿಧಿ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದರು. ಕೊನೆಗೆ ಪತಿಯಿಂದ ನಿಧಿ ದೂರವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ನಿಧಿ ಉತ್ತರಿಸಿದ್ದಾರೆ.

ಇತ್ತೀಚೆಗೆ ನಿಧಿ ಲೈವ್​ ಬಂದಿದ್ದರು. ಈ ವೇಳೆ ನಿಮ್ಮ ಮದುವೆ ಮತ್ತು ನಂತರದ ವೈವಾಹಿಕ ಜೀವನದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಲಿಲ್ಲ ಏಕೆ ಎನ್ನುವ ಪ್ರಶ್ನೆ ಬಂತು. ಆಗ ನಿಧಿ ಎಲ್ಲದಕ್ಕೂ ಉತ್ತರಿಸಿದರು. ‘ಇದಕ್ಕೆ ಹೇಗೆ ಉತ್ತರ ನೀಡಲಿ. ನಿಜ ಜೀವನದಲ್ಲಿ ಏನಾದರೂ ಕೆಟ್ಟದ್ದು ಆಗಿದೆ ಎಂದರೆ ಅದರ ಬಗ್ಗೆ ಹೇಳಿಕೊಂಡು ಸಹಾನುಭೂತಿ ಪಡೆಯಬೇಕು ಎಂಬ ಉದ್ದೇಶ ನನ್ನದಲ್ಲ’ ಎಂದು ಅವರು ಮಾತು ಆರಂಭಿಸಿದರು.

‘ನಾನು ಮದುವೆ ಆಗಿದ್ದೆ. ಆದರೆ, 10 ತಿಂಗಳು ಮಾತ್ರ ಸಂಸಾರ ಮಾಡಿದೆವು. ಅದಕ್ಕಿಂತಲೂ ಮುಂದೆ ನಮ್ಮ ದಾಂಪತ್ಯ ಜೀವನ ನಡೆದಿಲ್ಲ. ಅಮ್ಮನ ಬಳಿಯೂ ನಾನು ಈ ವಿಚಾರ ಚರ್ಚೆ ಮಾಡಲ್ಲ. ಅದನ್ನು ಅಲ್ಲಿಗೆ ಬಿಟ್ಟು ಜೀವನದ ಜೊತೆ ಮುಂದೆ ಸಾಗೋಣ ಅನ್ನೋದು ನನ್ನ ಪಾಲಿಸಿ. ಅದಕ್ಕೆ ನಾನು ಅದರ ಬಗ್ಗೆ ಅಲ್ಲಿ ಮಾತನಾಡಲಿಲ್ಲ’ ಎಂದು ನಿಧಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ನಿನ್ನ ಚರಿತ್ರೆ, ಸಂಸ್ಕೃತಿ ಬಗ್ಗೆ ಗೊತ್ತಿದೆ, ಈಗ ಹೇಳಲಾ?; ಪ್ರಶಾಂತ್​ ಮಾತಿಗೆ ಅತ್ತ ನಿಧಿ ಸುಬ್ಬಯ್ಯ

Published On - 6:14 pm, Sun, 16 May 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ