ನಿನ್ನ ಚರಿತ್ರೆ, ಸಂಸ್ಕೃತಿ ಬಗ್ಗೆ ಗೊತ್ತಿದೆ, ಈಗ ಹೇಳಲಾ?; ಪ್ರಶಾಂತ್​ ಮಾತಿಗೆ ಅತ್ತ ನಿಧಿ ಸುಬ್ಬಯ್ಯ

Prashanth Sambargi - Nidhi Subbaiah: ಕಳೆದ ವಾರ ಮಾತನಾಡಿದ್ದ ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಮನೆಯಲ್ಲಿ ಬೆಂಕಿ ಹಚ್ಚುವ ಸೂಚನೆ ನೀಡಿದ್ದರು. ಇದಕ್ಕೆ ತಕ್ಕಂತೆ ಇಬ್ಬರೂ ಸ್ಟ್ರೆಟಜಿ ಮಾಡಿಕೊಂಡಂತೆ ಕಾಣುತ್ತಿದೆ.

ನಿನ್ನ ಚರಿತ್ರೆ, ಸಂಸ್ಕೃತಿ ಬಗ್ಗೆ ಗೊತ್ತಿದೆ, ಈಗ ಹೇಳಲಾ?; ಪ್ರಶಾಂತ್​ ಮಾತಿಗೆ ಅತ್ತ ನಿಧಿ ಸುಬ್ಬಯ್ಯ
ನಿಧಿ ಸುಬ್ಬಯ್ಯ - ಪ್ರಶಾಂತ್​ ಸಂಬರಗಿ
Follow us
| Updated By: Digi Tech Desk

Updated on:Apr 23, 2021 | 9:20 AM

ಪ್ರಶಾಂತ್​ ಸಂಬರಗಿ ಅಡುಗೆ ಮನೆ ವಿಚಾರದಲ್ಲಿ ತುಂಬಾನೇ ಚರ್ಚೆ ಆಗುತ್ತಿದ್ದಾರೆ. ಆರಂಭದಲ್ಲಿ ತುಪ್ಪ ತಿಂದ ವಿಚಾರಕ್ಕೆ ಭಾರೀ ಸುದ್ದಿಯಾಗಿದ್ದರು. ತುಪ್ಪಾ ತಿಂದಿದ್ದೇ ತಪ್ಪಾ ಎಂದು ಪುಸ್ತಕ ಬರೆಯುತ್ತೇನೆ ಎಂದು ಕೂಡ ಹೇಳಿದ್ದರು. ಇದಾದ ನಂತರ ಸಾಕಷ್ಟು ಬಾರಿ ಅವರ ವಿರುದ್ಧ ಆರೋಪಗಳು ಕೇಳಿ ಬರುತ್ತಲೇ ಇದ್ದವು. ಈಗ ಮೊಟ್ಟೆ ವಿಚಾರದಲ್ಲಿ ನಡೆದ ಜಗಳದಲ್ಲಿ ಮನೆ ರಣರಂಗವಾಗಿದೆ.

ಕಳೆದ ವಾರ ಮಾತನಾಡಿದ್ದ ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಮನೆಯಲ್ಲಿ ಬೆಂಕಿ ಹಚ್ಚುವ ಸೂಚನೆ ನೀಡಿದ್ದರು. ಇದಕ್ಕೆ ತಕ್ಕಂತೆ ಇಬ್ಬರೂ ಸ್ಟ್ರೆಟಜಿ ಮಾಡಿಕೊಂಡಂತೆ ಕಾಣುತ್ತಿದೆ. ಈ ವಾರ ಬಿಗ್​ ಬಾಸ್​ ಮನೆಯಲ್ಲಿ ಬೆಂಕಿ ಹತ್ತಿಕೊಂಡಿದೆ.

ಬಿಗ್​ ಬಾಸ್ ಸೌಲಭ್ಯಗಳನ್ನು ಕಿತ್ತುಕೊಂಡಿದ್ದಾರೆ. ಹೀಗಾಗಿ, ಗ್ಯಾಸ್​ ಇಲ್ಲದೆ ಅಡುಗೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಮೊಟ್ಟೆಯನ್ನು ಓವನ್​ನಲ್ಲಿ ಇಟ್ಟು ಬೇಯಿಸೋಕೆ ಮನೆ ಮಂದಿ ಮುಂದಾಗಿದ್ದರು. ನಿಧಿ ಹಾಗೂ ಪ್ರಶಾಂತ್​ ಇಬ್ಬರೂ ಸೇರಿ ಮೊಟ್ಟೆ ಬೇಯಿಸಿದರು. ಆದರೆ, ಅದು ಒಡೆದೇ ಹೋಯಿತು. ಇದನ್ನು ನಾನು ಟ್ರೈಲ್​ ನೋಡ್ತೀನಿ ಎಂದು ಪ್ರಶಾಂತ್​ ತಿಂದರು.

ಇದಾದ ನಂತರ ಮತ್ತೊಮ್ಮೆ ಪ್ರಶಾಂತ್​ ಮೊಟ್ಟೆ ತಿನ್ನೋಕೆ ಮುಂದಾದರು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಯಿತು. ಮನೆಯವರ ಜತೆ ನಿಧಿ ಈ ಬಗ್ಗೆ ಅಪಸ್ವರ ತೆಗೆದರು. ಆಗ ಪ್ರಶಾಂತ್​ ಸಂಬರಗಿ ತೀರಾ ಖಾಸಗಿ ವಿಚಾರಗಳನ್ನು ತೆಗೆದು ಮಾತನಾಡಿದರು.

ನೀನು ಒಡೆದು ಹಾಕಿದ ಮೊಟ್ಟೆಯನ್ನು ನಾನು ಬಳಿದುಕೊಂಡು ತಿಂದಿದ್ದೇನೆ. ನಾನು ನಿನ್ನ ವಿಚಾರಕ್ಕೆ ಬಂದಿಲ್ಲ. ನೀನು ನನ್ನ ವಿಚಾರಕ್ಕೆ ಬರಬೇಡ. ನಿನ್ನ ಚರಿತ್ರೆ, ಸಂಸ್ಕೃತಿ ಬಗ್ಗೆ ಗೊತ್ತಿದೆ, ಈಗ ಹೇಳಲಾ ಎಂದು ಪದೇಪದೇ ಒತ್ತಿ ಹೇಳಿದರು. ಇದಕ್ಕೆ ನಿಧಿ ಅತ್ತೇಬಿಟ್ಟರು.

ಕಳೆದವಾರ ಪ್ರಶಾಂತ್​, ನಾನು ಕೂಡ ಹಾಗೇ. ಪಾಪ ಅನ್ನೋದಲ್ಲ ಇನ್ಮುಂದೆ ಇರಲ್ಲ. ಮೊದಲಿನ ಆಟಕ್ಕೆ ಮರಳುತ್ತೇನೆ ಎಂದಿದ್ದರು. ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ, ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡ್ಕೋಳಿ; ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ನಿಧಿ

Published On - 7:13 am, Fri, 23 April 21

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ