ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ, ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡ್ಕೋಳಿ; ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ನಿಧಿ

Chakravarthy Chandrachud: ಟಾಸ್ಕ್​​ನಲ್ಲಿ ರಾಜೀವ್​ ಪಾಲ್ಗೊಂಡ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಅಸಮಧಾನ ಹೊರ ಹಾಕಿದರು.

ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ, ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡ್ಕೋಳಿ; ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ನಿಧಿ
ನಿಧಿ ಸುಬ್ಬಯ್ಯ
Follow us
ರಾಜೇಶ್ ದುಗ್ಗುಮನೆ
|

Updated on: Apr 22, 2021 | 10:36 PM

ಮನೆಯಲ್ಲಿ ಸ್ಪರ್ಧಿಗಳು ಬಳಕೆ ಮಾಡುವ ವಸ್ತುಗಳ ಮೌಲ್ಯವನ್ನು ತಿಳಿಸುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಬಿಗ್​ ಬಾಸ್​ ಹಿಂದಕ್ಕೆ ಪಡೆದಿದೆ. ಇದರಿಂದ ಮನೆಯ ಸದಸ್ಯರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಶುಭಾ ಪೂಂಜಾ ಸೇರಿದಂತೆ ಅನೇಕರು ಬಿಗ್​ ಬಾಸ್​ಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದರ ಜತೆಗೆ ಅವರಿಗೆ ಮನೆಯಲ್ಲಿರುವ ವಸ್ತುಗಳ ಮೌಲ್ಯ ನಿಧಾನವಾಗಿ ತಿಳಿಯುತ್ತಿದೆ. ಈ ಮಧ್ಯೆ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳವೇ ನಡೆದುಹೋಗಿದೆ.

ಬಿಗ್​ ಬಾಸ್​ ಮನೆಯಲ್ಲಿ ನೀಡುವ ಟಾಸ್ಕ್​ ಗೆಲ್ಲಬೇಕು ಎನ್ನುವ ಕಾರಣಕ್ಕೆ ದೈಹಿಕವಾಗಿ ಬಲಾಢ್ಯರಾದ ಮಂಜು ಪಾವಗಡ, ರಾಜೀವ್​ ಹಾಗೂ ಅರವಿಂದ್​ ಟಾಸ್ಕ್​ನಲ್ಲಿ ಪಾಲ್ಗೊಂಡಿದ್ದಾರೆ. ಐದು ಟಾಸ್ಕ್​ಗಳ ಪೈಕಿ ಮೂರು ಟಾಸ್ಕ್​ನಲ್ಲಿ ಇವರೇ ಆಟವಾಡಿದ್ದಾರೆ. ಇದನ್ನು ಬಿಗ್​ ಬಾಸ್​ ಗಮನಿಸಿದ್ದಾರೆ. ಅಲ್ಲದೆ, ಈ ಮೂವರಿಗೆ ಮಾತ್ರ ಗ್ಯಾಸ್​ ಸೌಲಭ್ಯ ಸಿಗುತ್ತಿದೆ. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಗುತ್ತಿದೆ.

ಟಾಸ್ಕ್​​ನಲ್ಲಿ ರಾಜೀವ್​ ಪಾಲ್ಗೊಂಡ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಅಸಮಧಾನ ಹೊರ ಹಾಕಿದರು. ಈ ಬಗ್ಗೆ ಮಾತನಾಡಿದ ಚಕ್ರವರ್ತಿ, ಬೆಳಗ್ಗೆ ನಾನು ಟಾಸ್ಕ್​ನಲ್ಲಿ ಪಾಲ್ಗೊಳ್ಳುತ್ತೇನೆ ಎಂದೆ. ಆಗ ನಿಧಿ ನಾನು ಬೇಡ ರಾಜೀವ್​ ಪಾಲ್ಗೊಳ್ಳಲಿ ಎಂದರು. ಈ ವಿಚಾರಕ್ಕೆ ನನಗೆ ಬೇಸರ ಆಯ್ತು ಎಂದರು. ಆಗ ನಿಧಿ ಸಿಟ್ಟಾದರು.

ನಾನು ಹಾಗೆ ಹೇಳಲೇ ಇಲ್ಲ. ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತಾಡಬೇಡಿ ಎಂದು ಸಿಟ್ಟಾದರು. ಈ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್​ ಕೂಡ ಸಿಟ್ಟಾದರು. ನಾನು ಹೇಳಿದ್ದು ಸುಳ್ಳು ಎನ್ನುವುದಾದರೆ ನನ್ನ ಚಪ್ಪಲ್ಲಿ ಕೊಡ್ತೇನೆ. ಹೊಡೆದುಬಿಡಿ ಎಂದರು. ನೀವು ಹೇಳಿದ್ದು ಸಂಪೂರ್ಣ ಸುಳ್ಳು. ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡೆದುಕೊಳ್ಳಿ ಎಂದು ನಿಧಿ ಸಿಟ್ಟಾದರು. ಈ ವಿಚಾರದ ಬಗ್ಗೆ ಮನೆಯಲ್ಲಿ ದೊಡ್ಡ ಜಗಳವೇ ನಡೆದುಹೋಗಿದೆ.

ಇದನ್ನೂ ಓದಿ: Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

ಮಂಜು-ಅರವಿಂದ್​ ಸ್ಟ್ರಾಂಗ್​​ ಎಂದು ಒಪ್ಪಿಕೊಂಡ ಬಿಗ್​ಬಾಸ್​ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್