ಮಂಜು-ಅರವಿಂದ್​ ಸ್ಟ್ರಾಂಗ್​​ ಎಂದು ಒಪ್ಪಿಕೊಂಡ ಬಿಗ್​ಬಾಸ್​ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ

ಮನೆಯಲ್ಲಿ ಸ್ಪರ್ಧಿಗಳು ಬಳಕೆ ಮಾಡುವ ವಸ್ತುಗಳ ಮೌಲ್ಯವನ್ನು ತಿಳಿಸುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇದರಿಂದ ಮನೆಯ ಸದಸ್ಯರು ಕಷ್ಟ ಅನುಭವಿಸುತ್ತಿದ್ದಾರೆ.

ಮಂಜು-ಅರವಿಂದ್​ ಸ್ಟ್ರಾಂಗ್​​ ಎಂದು ಒಪ್ಪಿಕೊಂಡ ಬಿಗ್​ಬಾಸ್​ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ
ಅರವಿಂದ್​
Follow us
| Updated By: ಮದನ್​ ಕುಮಾರ್​

Updated on: Apr 22, 2021 | 5:07 PM

ಬಿಗ್​ ಬಾಸ್​ ಮನೆಯಲ್ಲಿ ಪ್ರತಿ ಸ್ಪರ್ಧಿಯೂ ತಾವು ಸ್ಟ್ರಾಂಗ್​ ಎಂದು ಪ್ರೂವ್​ ಮಾಡಬೇಕು. ಇಲ್ಲವಾದರೆ ಅಂಥ ಸ್ಪರ್ಧಿ ವೀಕ್ಷಕರಿಂದ ಕಡಿಮೆ ವೋಟ್​ ಪಡೆದು ಮನೆಯಿಂದ ಹೊರಹೋಗುತ್ತಾರೆ. ಹೀಗಾಗಿ ಎಲ್ಲಾ ಟಾಸ್ಕ್​​ಗಳಲ್ಲಿ ತಮ್ಮನ್ನು ಹೈಲೈಟ್​ ಮಾಡಿಕೊಳ್ಳೋಕೆ ​ಮನೆಯವರು ಆದ್ಯತೆ ನೀಡುತ್ತಾರೆ. ಆದರೆ, ಈ ಬಾರಿ ಹಾಗಾಗಿಲ್ಲ. ಮಂಜು ಪಾವಗಡ, ಅರವಿಂದ್ ಕೆಪಿ ಹಾಗೂ ರಾಜೀವ್​ ಸ್ಟ್ರಾಂಗ್​ ಎಂದು ಮನೆ ಮಂದಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಬಿಗ್​ ಬಾಸ್​ ಶಿಕ್ಷೆ ನೀಡಿದ್ದಾರೆ!

ಮನೆಯಲ್ಲಿ ಸ್ಪರ್ಧಿಗಳು ಬಳಕೆ ಮಾಡುವ ವಸ್ತುಗಳ ಮೌಲ್ಯವನ್ನು ತಿಳಿಸುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇದರಿಂದ ಮನೆಯ ಸದಸ್ಯರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಶುಭಾ ಪೂಂಜಾ ಸೇರಿದಂತೆ ಅನೇಕರು ಬಿಗ್​ ಬಾಸ್​ಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದರ ಜತೆಗೆ ಅವರಿಗೆ ಮನೆಯಲ್ಲಿರುವ ವಸ್ತುಗಳ ಮೌಲ್ಯ ನಿಧಾನವಾಗಿ ತಿಳಿಯುತ್ತಿದೆ.

ಬಿಗ್​ ಬಾಸ್ ನೀಡುವ ಪ್ರತಿ ಸೌಲಭ್ಯಗಳನ್ನು ಟಾಸ್ಕ್​ ಮೂಲಕ ಪಡೆದುಕೊಳ್ಳಬೇಕು. ಇದನ್ನು ಸ್ಪರ್ಧಿಗಳು ಸವಾಲಾಗಿ ಸ್ವೀಕರಿಸಿದ್ದಾರೆ. ಯಾವುದು ಹೆಚ್ಚು ಮುಖ್ಯ. ಯಾವುದು ಮುಖ್ಯವಲ್ಲ ಎಂದು ವಿಂಗಡಿಸಿ ಟಾಸ್ಕ್​ ಸ್ವೀಕರಿಸುತ್ತಿದ್ದಾರೆ. ಈ ಮಧ್ಯೆ, ಸ್ಪರ್ಧಿಗಳು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ನೀಡುವ ಟಾಸ್ಕ್​ ಗೆಲ್ಲಬೇಕು ಎನ್ನುವ ಕಾರಣಕ್ಕೆ ದೈಹಿಕವಾಗಿ ಬಲಾಢ್ಯರಾದ ಮಂಜು ಪಾವಗಡ, ರಾಜೀವ್​ ಹಾಗೂ ಅರವಿಂದ್​ ಟಾಸ್ಕ್​ನಲ್ಲಿ ಹೆಚ್ಚೆಚ್ಚು ಪಾಲ್ಗೊಂಡಿದ್ದಾರೆ. ಐದು ಟಾಸ್ಕ್​ಗಳ ಪೈಕಿ ಮೂರು ಟಾಸ್ಕ್​ನಲ್ಲಿ ಇವರೇ ಆಟವಾಡಿದ್ದಾರೆ. ಇದನ್ನು ಬಿಗ್​ ಬಾಸ್​ ಗಮನಿಸಿದ್ದಾರೆ. ಅಲ್ಲದೆ, ಶಿಕ್ಷೆ ಕೂಡ ಘೋಷಣೆ ಮಾಡಿದ್ದಾರೆ.

ಐದರಲ್ಲಿ ಮೂರು ಟಾಸ್ಕ್​​ಅನ್ನು ರಾಜೀವ್​, ಮಂಜು ಹಾಗೂ ಅರವಿಂದ್​ ಆಡಿರುವುದರಿಂದ ಅವರೇ ಸ್ಟ್ರಾಂಗ್​ ಎಂದು ಮನೆಯವರು ಒಪ್ಪಿಕೊಂಡಂತೆ ಆಗಿದೆ. ಹೀಗಾಗಿ, ಗ್ಯಾಸ್​ಅನ್ನು ಈ ಮೂವರು ಮಾತ್ರ ಬಳಕೆ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಶಾಕ್​ ಆಗಿದ್ದಾರೆ.

ಇದನ್ನೂ ಓದಿ:  Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ