Kichcha Sudeep: ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಸುದೀಪ್​; ಈ ವಾರವೂ ಬಿಗ್​ ಬಾಸ್​ಗೆ ಕಿಚ್ಚ ಗೈರು

Bigg Boss Kannada: ಒಂದು ವಾರ ಕಳೆದ ಬಳಿಕವಾದರೂ ಸುದೀಪ್​ ಅವರು ಬಿಗ್​ ಬಾಸ್​ ವೇದಿಕೆಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂಥ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್​ಗೆ ಈಗ ಬೇಸರ ಆಗಿದೆ.

Kichcha Sudeep: ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಸುದೀಪ್​; ಈ ವಾರವೂ ಬಿಗ್​ ಬಾಸ್​ಗೆ ಕಿಚ್ಚ ಗೈರು
ಕಿಚ್ಚ ಸುದೀಪ್
Follow us
ಮದನ್​ ಕುಮಾರ್​
| Updated By: Digi Tech Desk

Updated on:Apr 23, 2021 | 10:40 AM

ನಟ ಕಿಚ್ಚ ಸುದೀಪ್​ ಅವರು ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ರಾಜ್ಯಾದ್ಯಂತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ವಿವಿಧ ಬಗೆಯ ಪೂಜೆ ಸಲ್ಲಿಸುತ್ತಿದ್ದಾರೆ. ಚಿಕಿತ್ಸೆ ಮತ್ತು ಅಭಿಮಾನಿಗಳ ಹಾರೈಕೆಯ ಫಲವಾಗಿ ಸುದೀಪ್​ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಆರೋಗ್ಯದಲ್ಲಿ ವ್ಯತ್ಯಯ ಆಗಿದ್ದರಿಂದ ಸುದೀಪ್​ ಅವರು ಕಳೆದ ವಾರದ ಬಿಗ್​ ಬಾಸ್​ ವೀಕೆಂಡ್​ ಎಪಿಸೋಡ್​ಗಳನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಒಂದು ವಾರ ಕಳೆದ ಬಳಿಕವಾದರೂ ಅವರು ಬಿಗ್​ ಬಾಸ್​ ವೇದಿಕೆಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂಥ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್​ಗೆ ಈಗ ಬೇಸರ ಆಗಿದೆ. ಈ ವಾರ ಕೂಡ ಕಿಚ್ಚ ಬಿಗ್​ ಬಾಸ್​ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅವರೇ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

‘ಈ ವಾರದ ಬಿಗ್​ ಬಾಸ್​ ವೀಕೆಂಡ್​ ಎಪಿಸೋಡ್​ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಗಂಟೆಗಟ್ಟಲೆ ವೇದಿಕೆಯಲ್ಲಿ ನಿಂತು, ಎಲ್ಲ ಸ್ಪರ್ಧಿಗಳಿಗೆ ನ್ಯಾಯ ಒದಗಿಸುವುದಕ್ಕೂ ಮುನ್ನ ನನಗೆ ಇನ್ನಷ್ಟು ವಿಶ್ರಾಂತಿ ಬೇಕಿದೆ. ಇದು ಒಂದು ಕಷ್ಟದ ನಿರ್ಧಾರ. ಶೂಟ್​ ರದ್ದು ಮಾಡಿ ಪರಿಸ್ಥಿತಿಯನ್ನು ಸುಲಭವಾಗಿಸಿದ ಕಲರ್ಸ್​ ಕನ್ನಡ ವಾಹಿನಿಗೆ ಧನ್ಯವಾದಗಳು’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ. ತಮಗಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.

ಕಳೆದ ವಾರ ಸುದೀಪ್​ ಅವರು ಬಿಗ್ ಬಾಸ್​ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಎಂದು ಗೊತ್ತಾದಾಗ ದೊಡ್ಮನೆಯ ಸದಸ್ಯರು ತೀವ್ರ ಬೇಸರ ಮಾಡಿಕೊಂಡಿದ್ದರು. ಕಿಚ್ಚನಿಗಾಗಿ ಕಣ್ಣೀರು ಹಾಕಿದ್ದರು. ಸುದೀಪ್​ಗಾಗಿ ಪ್ರೀತಿಯಿಂದ ಅಡುಗೆ ಮಾಡಿ ಕಳಿಸಿದ್ದರು. ಅಲ್ಲದೆ, ಅದರ ಜೊತೆಗೆ ಅಭಿಮಾನದಿಂದ ಒಂದು ಪತ್ರ ಕೂಡ ಬರೆದಿದ್ದರು. ಬಿಗ್​ ಬಾಸ್​ ಸ್ಪರ್ಧಿಗಳಿಂದ ಬಂದ ಆ ಪತ್ರವನ್ನು ನೋಡಿ ಸುದೀಪ್​ ಭಾವುಕರಾಗಿದ್ದರು.​

‘ನೀವು ಬರೆದ ಪತ್ರ ಓದಿದ್ದೇನೆ. ಪ್ರತಿಕ್ರಿಯಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಎಲ್ಲರಿಗೂ ಧನ್ಯವಾದಗಳು. ಸ್ವಲ್ಪ ಆರೋಗ್ಯ ಸರಿ ಇಲ್ಲ. ಆದಷ್ಟು ಬೇಗ ಗುಣವಾಗುವ ಭರವಸೆ ಇದೆ. ನೀವು ಕಳಿಸಿದ ಅಡುಗೆಯ ರುಚಿ ಸವಿದೆ. ತುಂಬಾ ಚೆನ್ನಾಗಿ ಮಾಡಿದ್ದೀರಿ. ಇಷ್ಟೊಂದು ಪ್ರೀತಿಯಿಂದ ನೀವು ಮಾಡಿ ಕಳಿಸಿದ್ದರ ಬಗ್ಗೆ ಪ್ರೀತಿ ಇದೆ. ನಾವು ಮಾಡುವ ಕೆಲವು ಕೆಲಸ ಸಾರ್ಥಕ ಅಂತ ಅನಿಸುತ್ತದೆ. ವೀಕೆಂಡ್​ ಎಪಿಸೋಡ್​ ಮಿಸ್​ ಮಾಡಲು ನನಗೂ ಇಷ್ಟ ಇಲ್ಲ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ’ ಎಂದು ಸುದೀಪ್​ ಹೇಳಿದ್ದರು. ಅವರ ಪತ್ನಿ ಪ್ರಿಯಾ ಕೂಡ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಇದನ್ನೂ ಓದಿ: Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

(Kichcha Sudeep will miss Bigg Boss Kannada 8 weekend episode due to health problems)

Published On - 9:21 am, Fri, 23 April 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್