Neena Gupta: ನನ್ನದು ಸಿಂಗಲ್​ ಪೇರೆಂಟ್​​ಹುಡ್​; ಹಾಗಂತ ರಿಚರ್ಡ್ಸ್​​​ ಜೊತೆ ನೀನಾ-ನಾನಾ ಎಂದು ಜಗಳಕ್ಕಿಳಿಯುವುದಿಲ್ಲ-ನೀನಾ ಗುಪ್ತಾ

Neena Gupta - Vivian Richards: ಅದು ನಿಜವಾದ ಪ್ರೇಮ. ಉಳಿದಿದ್ದೆಲ್ಲ... ಏನೂ ಅಲ್ಲ; ಅದು ಜಸ್ಟ್​ ಕಾಮವಷ್ಟೇ. ಮೊದಲಮೊದಲು ಕಾಮ.. ಆಮೇಲೆ ಅದು ಜಸ್ಟ್​ ಅಭ್ಯಾಸ ಆಗಿಬಿಡುತ್ತದೆ. ಆ ಮೇಲೆ ಪೋಷಕತ್ವ ಬೆಳೆಯುತ್ತಾ ಸಾಗುತ್ತದೆ. ನಾನು ನನ್ನದು.. ಎಂಬ ಕೇರ್​ ಟೇಕರ್​ ಆಗಿ ಪರಿವರ್ತನೆಯಾಗಿಬಿಡುತ್ತಾರೆ... ನನ್ನ ಪ್ರಕಾರ ಲವ್ವುಗಿವ್ವು ಅಂದ್ರೆ ಇಷ್ಟೇಯಾ ಎಂದು ನೀನಾ ಗುಪ್ತಾ ಸಂದರ್ಶನದ ವೇಳೆ ಜೋರಾಗಿ ನಕ್ಕು ಮೈ-ಮನ ಹಗುರ ಮಾಡಿಕೊಂಡಿದ್ದಾರೆ.

Neena Gupta: ನನ್ನದು ಸಿಂಗಲ್​ ಪೇರೆಂಟ್​​ಹುಡ್​; ಹಾಗಂತ ರಿಚರ್ಡ್ಸ್​​​ ಜೊತೆ ನೀನಾ-ನಾನಾ ಎಂದು ಜಗಳಕ್ಕಿಳಿಯುವುದಿಲ್ಲ-ನೀನಾ ಗುಪ್ತಾ
ನನ್ನದು ಸಿಂಗಲ್​ಪೇರೆಂಟ್​​ಹುಡ್​. ಹಾಗಂತ ವಿವಿಯನ್ ರಿಚರ್ಡ್ಸ್​​​ ಜೊತೆ ನೀನಾ-ನಾನಾ ಎಂದು ಜಗಳಕ್ಕಿಳಿಯುವುದಿಲ್ಲ
sadhu srinath

|

May 22, 2021 | 12:45 PM

ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡದ ದೈತ್ಯ ದಾಂಡಿಗ ಸರ್​ ಐಸಾಕ್​ ವಿವಿಯನ್​ ಅಲೆಕ್ಸಾಂಡರ್​ ರಿಚರ್ಡ್ಸ್​​​ ಮತ್ತು ಬಾಲಿವುಡ್​ ಮೋಹಕ ಚೆಲುವೆ ನೀನಾ ಗುಪ್ತಾರ ಮೋಹಕ ಕತೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಭಾರತ ಪ್ರವಾಸಕ್ಕೆಂದು ಬಂದು, ಅಬ್ಬರದ ಬ್ಯಾಟ್ಸ್​ಮನ್​ ರಿಚರ್ಡ್ಸ್​​​ ಮೈದಾನದಾಚೆಗೂ ತಮ್ಮ ಕರಾಮತ್ತು ತೋರಿದ್ದರು. ನಟಿ ನೀನಾ ಗುಪ್ತಾರ ಮೋಹಕ ಪಾಶದಲ್ಲಿ ಸಿಲುಕಿದರು. ಅದಕ್ಕೆ ಸಾಕ್ಷಿ ಎಂಬಂತೆ ಅವರಿಬ್ಬರಿಗೂ ಮುದ್ದಾದ ಮಗಳು ಇದ್ದಾಳೆ. ಹೆಸರು ಮಸಾಬಾ ಗುಪ್ತಾ ಅಂತಾ. ಅವರಿಬ್ಬರದು ಗುಪ್ತ್​ ಗುಪ್ತ್​ ಲವ್​ ಏನೂ ಆಗಿರಲಿಲ್ಲ. ಅವರಿಬ್ಬರ ನಡುವಿನ ಪ್ರೇಮಕ್ಕೆ ಸಾಕ್ಷಿಯಾಗಿ ಮಗಳು ಮಸಾಬಾ ಹುಟ್ಟಿದ ವೇಳೆ ಇಬ್ಬರೂ ನಾನೊಂದು ತೀರ ನೀನೊಂದು ತೀರಾ ಎಂದು ತಮ್ಮ ಬಾಳಿನಲ್ಲಿ ವಿರುದ್ಧ ದಿಕ್ಕುಗಳಲ್ಲಿ ಹರಿಯತೊಡಗಿದರು.

ಆದರೆ ಹಳೆಯ ಪ್ರೇಮವನ್ನು ಯಾರು ತಾನೆ ನಿರಾಕರಿಸಲು ಸಾಧ್ಯ ಅಲ್ಲವಾ!? ಹಾಗಾಗಿಯೇ ಒಂದಷ್ಟು ಮನಸ್ತಾಪಗಳ ನಂತರ ಬಹಳ ಕಾಲದ ನಂತರ ಬಾಲಿವುಡ್​ ಬೆಡಗಿ ನೀನಾ ಗುಪ್ತಾ ತನ್ನ ಹಳೆಯ ಪ್ರಿಯತಮನನ್ನು ನೆನಪಿಸಿಕೊಂಡಿದ್ದಾರೆ. ಅದೂ ಮಗಳಿಂದ, ಮಗಳಿಗಾಗಿ… ಹಾಗೆಲ್ಲ ನಾನು ನಮ್ಮ ಮುದ್ದಿನ ಕುವರಿ ಮಸಾಬಾ ಮನಸು ಘಾಸಿಗೊಳಿಸುವುದಿಲ್ಲ, ಅವಳ ಅಪ್ಪನ ಬಗ್ಗೆ ಅವಳ ಹೃದಯವನ್ನು ಬೆಚ್ಚಗೇ ಇಟ್ಟಿರುತ್ತೇನೆ. ಅವಳ ಅಪ್ಪನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳುವುದಿಲ್ಲ. ಏಕೆಂದ್ರೆ ನಾನೂ ವಿವಿಯನ್ ರಿಚರ್ಡ್ಸ್​​​ನನ್ನು ಪ್ರೀತಿಸಿದ್ದು ನಿಜವಲ್ಲವೇ? ಅವ ನನ್ನ ಪ್ರೇಮಿ, ಅವ ನನ್ನ ಗಂಡನಾಗಿದ್ದವ ಎಂದು ಹೃದಯಬಿಚ್ಚಿ ಮಾತನಾಡಿದ್ದಾರೆ ನೀನಾ!

ನನ್ನದು ಸಿಂಗಲ್ ​ಪೇರೆಂಟ್​​ಹುಡ್​. ಹಾಗಂತ ವಿವಿಯನ್ ರಿಚರ್ಡ್ಸ್​​​ ಜೊತೆ ನೀನಾ-ನಾನಾ ಎಂದು ಜಗಳಕ್ಕಿಳಿಯುವುದಿಲ್ಲ

Neena Gupta says she loved West Indian cricketer Vivian Richards so would never poison daughter Masaba thoughts about her dad 4

ವೆಸ್ಟ್​ ಇಂಡೀಸ್​ ಬ್ಯಾಟ್ಸ್​ಮನ್​ ವಿವಿಯನ್ ರಿಚರ್ಡ್ಸ್- ಬಾಲಿವುಡ್​ ಮೋಹಕ ಚೆಲುವೆ ನೀನಾ ಗುಪ್ತಾರ ಮೋಹಕ ಕತೆ

ವಿವಿಯನ್​ ರಿಚರ್ಡ್ಸ್ ನನ್ನ ಮೆಚ್ಚಿನ ಬ್ಯಾಟ್ಸ್​ಮನ್ ಸಹ. ಅವನ ಬಗ್ಗೆ ಗೌರವ ಇದೆ. ಹಾಗಾಗಿ ಮಗಳು ಮಸಾಬಾ ಮನಸಿನಲಿ ವಿಷ ಬೀಜ ಬಿತ್ತುವುದಿಲ್ಲ ಎಂದು ಮಾಧ್ಯಮ ಸಂದರ್ಶನದಲ್ಲಿ ತಮ್ಮ ಹಳೆಯ ಪ್ರೇಮವನ್ನು ಬೆಚ್ಚಗೆ ಮೆಲುಕು ಹಾಕಿದ್ದಾರೆ ನೀನಾ. ಪ್ರೇಮ ಅಷ್ಟು ಸುಲಭವಾಗಿ ದಿನ ರಾತ್ರಿಯಾಗುವಷ್ಟರಲ್ಲಿ ದ್ವೇಷವಾಗಿ ಪರಿವರ್ತನೆಯಾಗುವುದಿಲ್ಲ, ಅಲ್ವೇ? ಎಂದು ತುಂಟು ನಗೆ ಬೀರುತ್ತಾ ಮರುಪ್ರಶ್ನೆ ಹಾಕಿದ್ದಾರೆ ನೀನಾ!

ಅಂದಹಾಗೆ ಮಗಳು ಮಸಾಬಾ ಬೆಳೆದಿದ್ದೆಲ್ಲ ಹೆಚ್ಚಾಗಿ ಅಪ್ಪನ ಜೊತೆಯೇ.. ಆಮೇಲೆ ಅಮ್ಮನ ಮಡಿಲು ಸೇರಿದ್ದಳು. ಆದರೆ ಅಪ್ಪ-ಅಮ್ಮನಾಗಿ ನಾನು ಮತ್ತು ರಿಚರ್ಡ್ಸ್​ ಒಟ್ಟಿಗೇ ಮನೆ ಮಾಡಿರಲಿಲ್ಲ. ಆದರೂ ನಮ್ಮ ಮೂವರ ಮಧ್ಯೆ ಪರಸ್ಪರ ಪ್ರೀತಿ-ಗೌರವಗಳು ಮನೆ ಮಾಡಿವೆ ಎಂದಿರುವ ಬಾಲಿವುಡ್​ನ ಅಂದಿನ ಮಾದಕ ಚೆಲುವೆ ನೀನಾ ಗುಪ್ತಾ ಪ್ರೇಮ-ಪ್ರೀತಿ-ಕಾಮಕ್ಕೆ ಹಸಿಬಿಸಿ ವ್ಯಾಖ್ಯಾನ ನೀಡಿದ್ದಾರೆ.

ಹೆತ್ತವರು ಮತ್ತು ಮಕ್ಕಳ ಮಧ್ಯೆ ಇರುವುದು ಸಹಜ ಪ್ರೀತಿ. ಅದು ನಿಜವಾದ ಪ್ರೇಮ. ಉಳಿದಿದ್ದೆಲ್ಲ… ಏನೂ ಅಲ್ಲ; ಅದು ಜಸ್ಟ್​ ಕಾಮವಷ್ಟೇ. ಮೊದಲಮೊದಲು ಕಾಮ.. ಆಮೇಲೆ ಅದು ಜಸ್ಟ್​ ಅಭ್ಯಾಸ ಆಗಿಬಿಡುತ್ತದೆ. ಆ ಮೇಲೆ ಪೋಷಕತ್ವ ಬೆಳೆಯುತ್ತಾ ಸಾಗುತ್ತದೆ. ನಾನು, ನನ್ನದು.. ಎಂಬ ಕೇರ್​ ಟೇಕರ್​ ಆಗಿ ಪರಿವರ್ತನೆಯಾಗಿಬಿಡುತ್ತಾರೆ… ನನ್ನ ಪ್ರಕಾರ ಲವ್ವುಗಿವ್ವು ಅಂದ್ರೆ ಇಷ್ಟೇಯಾ ಎಂದು ನೀನಾ ಗುಪ್ತಾ ಸಂದರ್ಶನದ ವೇಳೆ ಜೋರಾಗಿ ನಕ್ಕು ಮೈ-ಮನ ಹಗುರ ಮಾಡಿಕೊಂಡಿದ್ದಾರೆ.

Neena Gupta says she loved West Indian cricketer Vivian Richards so would never poison daughter Masaba thoughts about her dad 1

ಮಗಳು ಮಸಾಬಾ ಬೆಳೆದಿದ್ದೆಲ್ಲ ಹೆಚ್ಚಾಗಿ ಅಪ್ಪನ ಜೊತೆಯೇ.. ಆ ಮೇಲೆ ಅಮ್ಮನ ಮಡಿಲು ಸೇರಿದ್ದಳು.

ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಬಿರುಗಾಳಿ ಬೀಸಿದ್ದ ನೀನಾ ಗುಪ್ತಾ ಈಗ ತಣ್ಣಗೆ ‘ಸರ್ದಾರ್​ ಕಾ ಗ್ರ್ಯಾಂಡ್​ಸನ್’ ಫಿಲ್ಮ್​​​ನಲ್ಲಿ ಸರ್ದಾರ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ, ಬಿಗ್​ ಬಿ ಅಮಿತಾಬ್​ ಬಚ್ಚನ್​ ಜತೆ ‘ಗುಡ್​ಬೈ’ ಎಂಬ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಜೊತೆಜೊತೆಗೆ ನೆಟ್​ಫ್ಲಿಕ್ಸ್​, ಅಮೆಜಾನ್ ಪ್ರೈಂ ವಿಡಿಯೋ ಕಾರ್ಯಕ್ರಮಗಳಲ್ಲಿಯೂ ನೀನಾ ಕಾಣಿಸಿಕೊಂಡಿದ್ದಾರೆ. ಮನೋಜ್​ ಬಾಜ್ಪಯಿ ಎಂಬ ಅಪ್ಪಟ ಆ್ಯಕ್ಟರ್​ ಜೊತೆಗೂ ಡಯಲ್​ 100 ಸಿನಿಮಾದಲ್ಲಿ ನೀನಾ ಮಿಂಚಲಿದ್ದಾರೆ.

ಇಷ್ಟೆಲ್ಲಾ ಪ್ರೇಮಕಾಮ ಲವ್ವುಗಿವ್ವು ಅನುಭವಿಸಿರುವ ನೀನಾ ಗುಪ್ತಾ ತಮ್ಮ ಜೀವನವನ್ನೇ ನಿರ್ಭಿಡೆಯಿಂದ ಒಂದು ಕಥಾಚಿತ್ರವನ್ನಾಗಿಸಿದ್ದಾರೆ. ‘ಸಚ್​ ಕಹೂ ತೋ’ ಎಂಬ ವಾಸ್ತವಗಳ ಕಥಾಹಂದರದ ಆ ಪುಸ್ತಕ ಜೂನ್​ 14ರಂದು ರಿಲೀಸ್​ ಆಗಲಿದೆ ಎಂದು ಪ್ರಕಾಶಕರಾದ ಪೆಂಗ್ವಿನ್ ಇಂಡಿಯಾ ಸಂಸ್ಥೆಯವರು ತಿಳಿಸಿದ್ದಾರೆ.

Neena Gupta says she loved West Indian cricketer Vivian Richards so would never poison daughter Masaba thoughts about her dad 3

ವಿವಿಯನ್ ರಿಚರ್ಡ್ಸ್​​​ ಜೊತೆಗಿನ ಪ್ರೇಮದ ಬಗ್ಗೆ ಸಂದರ್ಶನದ ವೇಳೆ ಜೋರಾಗಿ ನಕ್ಕು ಮೈ-ಮನ ಹಗುರ ಮಾಡಿಕೊಂಡ ನೀನಾ ಗುಪ್ತಾ

(Neena Gupta says she loved West Indian cricketer Vivian Richards so would never poison daughter Masaba thoughts about her dad)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada