AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್​ ಕೆರಿಯರ್​ ನಾಶ ಮಾಡಿ ಬೀದಿಗೆ ತರುತ್ತೇನೆ; ಪ್ರತಿಜ್ಞೆ ಮಾಡಿದ ಕಮಾಲ್ ಖಾನ್​

‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್’​ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ನೀಡಿದ ಆರೋಪ ಹೊರಿಸಿ ಕಮಾಲ್​ ಖಾನ್​ ವಿರುದ್ಧ ಸಲ್ಲು ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಸಲ್ಮಾನ್​ ಖಾನ್​ ಕೆರಿಯರ್​ ನಾಶ ಮಾಡಿ ಬೀದಿಗೆ ತರುತ್ತೇನೆ; ಪ್ರತಿಜ್ಞೆ ಮಾಡಿದ ಕಮಾಲ್ ಖಾನ್​
ಸಲ್ಮಾನ್​ ಖಾನ್​, ಕಮಾಲ್​ ಆರ್​. ಖಾನ್​
ರಾಜೇಶ್ ದುಗ್ಗುಮನೆ
|

Updated on:May 31, 2021 | 8:00 PM

Share

ಸಲ್ಮಾನ್​ ಖಾನ್​ ಹಾಗೂ ಕಮಾಲ್​ ಖಾನ್​ ನಡುವೆ ಹೊತ್ತಿಕೊಂಡಿರುವ ದ್ವೇಷದ ಜ್ವಾಲೆ ಸದ್ಯಕ್ಕೆ ಆರುವ ರೀತಿ ಕಾಣುತ್ತಿಲ್ಲ. ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್’​ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ನೀಡಿದ ಆರೋಪ ಹೊರಿಸಿ ಕಮಾಲ್​ ಖಾನ್​ ವಿರುದ್ಧ ಸಲ್ಲು ಮಾನನಷ್ಟ ಮೊಕದ್ದಮೆ ಹೂಡಿದ್ದರು ಎನ್ನಲಾಗಿತ್ತು. ಈಗ ಸಲ್ಲು ಕೆರಿಯರ್​ ನಾಶ ಮಾಡುವ ಪ್ರತಿಜ್ಞೆಯನ್ನು ಕಮಾಲ್​ ಮಾಡಿದ್ದಾರೆ.

ಇತ್ತೀಚೆಗೆ ಟ್ವೀಟ್​ ಒಂದನ್ನು ಮಾಡಿದ್ದ ಕಮಾಲ್​, ‘ಅವರು ಅನೇಕರ ಕೆರಿಯರ್​ ನಾಶ ಮಾಡಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಯಾರಾದರೂ ಅವರ ವಿರುದ್ಧ ಮಾತನಾಡಿದರೆ ಅಂಥವರ ವೃತ್ತಿಜೀವನ ಕೊನೆಯಾದಂತೆ. ಈ ಬಾರಿ ಹಾಗಲ್ಲ. ನಾನೇ ಸಲ್ಮಾನ್​ ಖಾನ್​ ಕೆರಿಯರ್​ ನಾಶ ಮಾಡುತ್ತೇನೆ ಮತ್ತು ಅವರನ್ನು ಬೀದಿಗೆ ತರುತ್ತೇನೆ’ ಎಂದು ಹೇಳಿದ್ದಾರೆ.

ಇಂದು, ಕಮಾಲ್​ ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ ಗೂಂಡಾ ನಿಮಗೆ ಫೈಟ್​ ಮಾಡುವ ತಾಕತ್ತಿದ್ದರೆ ಎದುರು ಬಂದು ಮಾಡಿ. ಸಣ್ಣಪುಟ್ಟ ಸಿಂಗರ್​ ಹಾಗೂ ಕಷ್ಟಪಡುತ್ತಿರುವ ನಟಿಯರ ಹಿಂದೆ ನಿಂತು ಹೋರಾಡ ಬೇಡಿ. ನಾನು ನಿಮ್ಮ ಕೆರಿಯರ್​ ನಾಶ ಮಾಡಿ ಟಿವಿ ಆ್ಯಕ್ಟರ್​ ಆಗಿ ಮಾಡುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಇದು ಅಸಾಧ್ಯವಾದ ಮಾತು ಎಂದು ಅನೇಕರು ಹೇಳಿಕೊಂಡಿದ್ದಾರೆ. ಸಲ್ಮಾನ್​ ಖಾನ್​ ಎಂಬುದು ಬಾಲಿವುಡ್​ನಲ್ಲಿ ಬ್ರ್ಯಾಂಡ್​ ಆಗಿದೆ. ಇನ್ನು ಹಲವು ವರ್ಷ ಕಳೆದರೂ ಸಲ್ಮಾನ್​ ಖಾನ್​ ಚಿತ್ರಕ್ಕೆ ಹಣ ಹೂಡೋಕೆ ನಿರ್ಮಾಪಕರು ಮುಂದೆ ಬರುತ್ತಾರೆ. ಹೀಗಾಗಿ, ಕಮಾಲ್​ ಹಾಕುವ ಧಮ್ಕಿಗಳು ಕೆಲಸ ಮಾಡುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಟ್ವೀಟ್​ ಮಾಡಿದ್ದ ಕಮಾಲ್, ‘ಒಂದೊಮ್ಮೆ ನಿರ್ಮಾಪಕರು ಹಾಗೂ ನಟರು ತಮ್ಮ ಸಿನಿಮಾಗಳ ವಿಮರ್ಶೆ ಮಾಡಬೇಡಿ ಎಂದು ಹೇಳಿದರೆ ಅಂಥ ಸಿನಿಮಾವನ್ನು ನಾನೆಂದೂ ವಿಮರ್ಶೆ ಮಾಡಿಲ್ಲ. ಆದರೆ, ಇಂದಿನಿಂದ ಈ ವ್ಯಕ್ತಿ ನನ್ನನ್ನು ಕೇಳಿಕೊಳ್ಳಲಿ ಅಥವಾ ಕಾಲಿಗೇ ಬೀಳಲಿ. ನಾನು ಅವರ ಸಿನಿಮಾ ವಿಮರ್ಶೆ ಮಾಡಿಯೇ ಮಾಡುತ್ತೇನೆ’ ಎಂದಿದ್ದಾರೆ. ಈ ಮೂಲಕ ಸಲ್ಲು ವಿರುದ್ಧ ಕಮಾಲ್​ ಜಿದ್ದಿಗೆ ಬಿದ್ದಿದ್ದರು.

ಇದನ್ನೂ ಓದಿ: ಕಮಾಲ್​ ಖಾನ್​ ಮೇಲೆ ಸಲ್ಲು ಮಾನನಷ್ಟ ಮೊಕದ್ದಮೆ ಹಾಕಲು ರಾಧೆ ವಿಮರ್ಶೆ ಕಾರಣವಲ್ಲ; ಮತ್ತೇನು?

 

Published On - 7:46 pm, Mon, 31 May 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More