ಕಮಾಲ್​ ಖಾನ್​ ಮೇಲೆ ಸಲ್ಲು ಮಾನನಷ್ಟ ಮೊಕದ್ದಮೆ ಹಾಕಲು ರಾಧೆ ವಿಮರ್ಶೆ ಕಾರಣವಲ್ಲ; ಮತ್ತೇನು?

ಮದನ್​ ಕುಮಾರ್​

|

Updated on: May 28, 2021 | 8:14 AM

Kamaal R Khan: ಪ್ರಚಾರದ ಆಸೆಗಾಗಿ ಕಮಾಲ್​ ಆರ್​. ಖಾನ್​ ಅವರು ಇದನ್ನೆಲ್ಲ ಮಾಡಿದ್ದಾರೆ ಎಂದು ಸಲ್ಲು ಪರ ವಕೀಲರು ಹೇಳಿದ್ದಾರೆ. ಈಗಾಗಲೇ ಅನೇಕ ಬಾರಿ ವಿವಾದ ಮಾಡಿಕೊಂಡಿರುವ ಕಮಾಲ್​ ಖಾನ್​ಗೆ ಇದೆಲ್ಲ ಹೊಸದೇನೂ ಅಲ್ಲ.

ಕಮಾಲ್​ ಖಾನ್​ ಮೇಲೆ ಸಲ್ಲು ಮಾನನಷ್ಟ ಮೊಕದ್ದಮೆ ಹಾಕಲು ರಾಧೆ ವಿಮರ್ಶೆ ಕಾರಣವಲ್ಲ; ಮತ್ತೇನು?
ಸಲ್ಮಾನ್​ ಖಾನ್​, ಕಮಾಲ್​ ಆರ್​. ಖಾನ್​
Follow us

‘ರಾಧೆ: ಯುವರ್​ ಮೋಸ್ಟ್​ ವಾಂಡೆಟ್​ ಭಾಯ್​’ ಸಿನಿಮಾ ರಿಲೀಸ್​ ಆದಾಗಿನಿಂದ ನಟ ಸಲ್ಮಾನ್​ ಖಾನ್​ ಹಲವು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಈ ಚಿತ್ರಕ್ಕೆ ವಿಮರ್ಶಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಲಿಲ್ಲ. ಪ್ರೇಕ್ಷಕರು ಕೂಡ ರಾಧೆಯನ್ನು ಹೊಗಳಲಿಲ್ಲ. ಮೊದಲ ದಿನ ಭರ್ಜರಿ ಹಣ ಗಳಿಸಿದ್ದು ಬಿಟ್ಟರೆ ಬೇರೆ ಎಲ್ಲ ಆಯಾಮದಲ್ಲೂ ಈ ಸಿನಿಮಾ ಸೋಲಿನ ಹಾದಿ ಹಿಡಿಯಿತು. ರಾಧೆ ಸರಿಯಿಲ್ಲ ಎಂದು ಅನೇಕ ಬಗೆಯ ಮೀಮ್​ಗಳನ್ನು ಹರಿಬಿಡಲಾಯಿತು. ಜನರು ತಮ್ಮ ವಿಮರ್ಶೆಯನ್ನು ಮುಕ್ತವಾಗಿ ಹೇಳಿದರು. ಅದೇ ರೀತಿ ವಿವಾದಾತ್ಮಕ ನಟ ಕಮಾಲ್​ ಆರ್​. ಖಾನ್​ ಕೂಡ ರಾಧೆಯನ್ನು ತೆಗಳಿದ್ದರು. ಹಾಗಾಗಿ ಅವರ ಮೇಲೆ ಸಲ್ಮಾನ್​ ಖಾನ್​ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಆ ವಿಚಾರಕ್ಕೆ ಈಗ ಬೇರೆ ಟ್ವಿಸ್ಟ್​ ಸಿಕ್ಕಿದೆ.

ತಾವು ರಾಧೆ ಸಿನಿಮಾವನ್ನು ನಿಷ್ಠುರವಾಗಿ ವಿಮರ್ಶೆ ಮಾಡಿದ್ದಕ್ಕಾಗಿಯೇ ಸಲ್ಮಾನ್​ ಖಾನ್​ ಅವರು ತಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದು ಕಮಾಲ್​ ಖಾನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಅದು ದೊಡ್ಡ ಸುದ್ದಿ ಆಗಿತ್ತು ಕೂಡ. ಆದರೆ ಈ ಮಾನನಷ್ಟ ಮೊಕದ್ದಮೆಗೆ ಕಾರಣ ಬೇರೆಯೇ ಇದೆ ಎಂಬುದನ್ನು ಸಲ್ಮಾನ್​ ಖಾನ್​ ಪರ ವಕೀಲರು ಈಗ ಬಹಿರಂಗ ಪಡಿಸಿದ್ದಾರೆ.

‘ಹಲವು ದಿನಗಳಿಂದ ಸಲ್ಮಾನ್​ ಖಾನ್​ ಅವರ ಮೇಲೆ ಕಮಾಲ್​ ಖಾನ್​ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಬಂದಿದ್ದಾರೆ. ಸಲ್ಮಾನ್​ ಖಾನ್​ ಭ್ರಷ್ಟಾಚಾರಿ. ಅವರ ಬೀಯಿಂಗ್​ ಹ್ಯೂಮನ್​ ಬ್ರಾಂಡ್​ ಮೂಲಕ ಮೋಸ ಮಾಡಲಾಗುತ್ತಿದೆ. ಮನಿ ಲಾಂಡರಿಂಗ್​​ ಮಾಡಲಾಗುತ್ತಿದೆ. ಸಲ್ಮಾನ್​ ಖಾನ್​ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ದರೋಡೆಕೋರರು ಇದ್ದಾರೆ ಎಂದೆಲ್ಲ ಕಮಾಲ್​ ಖಾನ್​ ಮಾತನಾಡಿದ್ದಾರೆ. ಹಾಗಾಗಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ’ ಎಂದು ಸಲ್ಮಾನ್​ ಪರ ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪ್ರಚಾರದ ಆಸೆಗಾಗಿ ಕಮಾಲ್​ ಆರ್​. ಖಾನ್​ ಅವರು ಇದನ್ನೆಲ್ಲ ಮಾಡಿದ್ದಾರೆ ಎಂದು ಸಲ್ಲು ಪರ ವಕೀಲರು ಹೇಳಿದ್ದಾರೆ. ಈಗಾಗಲೇ ಅನೇಕ ಬಾರಿ ವಿವಾದ ಮಾಡಿಕೊಂಡಿರುವ ಕಮಾಲ್​ ಖಾನ್​ಗೆ ಇದೆಲ್ಲ ಹೊಸದೇನೂ ಅಲ್ಲ. ಒಟ್ಟಿನಲ್ಲಿ ರಾಧೆ ಸಿನಿಮಾವನ್ನು ವಿಮರ್ಶೆ ಮಾಡಿದ್ದಕ್ಕೂ ಈ ಮಾನನಷ್ಟ ಮೊಕದ್ದಮೆಗೂ ಯಾವುದೇ ಸಂಬಂದ ಇಲ್ಲ ಎಂಬುದು ಬಯಲಾಗಿದೆ. ರಾಧೆ ಸಿನಿಮಾ ತಮಗೆ ಇಷ್ಟ ಆಗಿಲ್ಲ ಎಂದು ಸಲ್ಮಾನ್​ ಖಾನ್​ ಅವರ ತಂದೆ ಸಲೀಮ್​ ಖಾನ್​ ಅವರೇ ಇತ್ತೀಚೆಗೆ ಹೇಳಿದ್ದರು. ಮೇ 13ರಂದು ಈದ್​ ಪ್ರಯುಕ್ತ ಬಿಡುಗಡೆ ಆದ ಈ ಚಿತ್ರ ಸಲ್ಲು ವೃತ್ತಿಜೀವನದ ಕಳಪೆ ಸಿನಿಮಾಗಳಲ್ಲೊಂದು ಎಂಬ ಹಣೆಪಟ್ಟೆ ಕಟ್ಟಿಕೊಂಡಿದೆ.

ಇದನ್ನೂ ಓದಿ:

ಸಲ್ಮಾನ್​ ಖಾನ್​ ತಂದೆಗೇ ಇಷ್ಟವಾಗಿಲ್ಲ ರಾಧೆ; ಸಿನಿಮಾ ನೋಡಿದ ಸಲೀಮ್​ ಖಾನ್​ ಹೇಳಿದ್ದೇನು?

ಥಿಯೇಟರ್​ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್​ ಖಾನ್​ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ

ತಾಜಾ ಸುದ್ದಿ

Related Stories

Click on your DTH Provider to Add TV9 Kannada