Amazon Prime: ಅಮೆಜಾನ್ ಪ್ರೈಮ್ನಿಂದ ಭರ್ಜರಿ ಆಫರ್; ಶೇ 50ರಷ್ಟು ರಿಯಾಯಿತಿ ಜತೆ ಸಿಗುತ್ತದೆ ಸಬ್ಸ್ಕ್ರಿಪ್ಷನ್
ಅಮೆಜಾನ್ ಪ್ರೈಮ್ನಿಂದ ಶೇ 50ರಷ್ಟು ರಿಯಾಯಿತಿ ಸಿಗುವ ಆಫರ್ ಘೋಷಣೆ ಆಗಿದೆ. ಯಾರಿಗೆ ಸಿಗಲಿದೆ, ಷರತ್ತುಗಳೇನು ಇತ್ಯಾದಿ ಮಾಹಿತಿ ಈ ಲೇಖನದಲ್ಲಿದೆ.
18ರಿಂದ 24 ವರ್ಷದೊಳಗಿನ ಯುವ ಜನರಿಗಾಗಿ ಅಮೆಜಾನ್ ಪ್ರೈಮ್ನಿಂದ ಆಫರ್ ಪರಿಚಯಿಸಲಾಗಿದೆ. ಅರ್ಹ ಚಂದಾದಾರರಿಗೆ 3 ತಿಂಗಳು ಮತ್ತು 1 ವರ್ಷದ ಸಬ್ಸ್ಕ್ರಿಪ್ಷನ್ ಮೇಲೆ ಶೇ 50ರಷ್ಟು ರಿಯಾಯಿತಿ ನೀಡುತ್ತಿದೆ. ಇನ್ನೊಂದು ವಿಚಾರ ಏನೆಂದರೆ, ಈ ಆಫರ್ ಇರುವುದು ಆಂಡ್ರಾಯಿಡ್ ಆ್ಯಪ್ ಬಳಸುವವರಿಗೆ ಹಾಗೂ ಇತರ ಆಪರೇಟಿಂಗ್ ಸಿಸ್ಟಮ್ನ ಮೊಬೈಲ್ ಬ್ರೌಸರ್ ವರ್ಷನ್ಗೆ. ಐಒಎಸ್ಗೆ ಮೊಬೈಲ್ ಆ್ಯಪ್ ಮೂಲಕವಾಗಿ ಈ ಆಫರ್ ಪಡೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಐಫೋನ್ ಬಳಕೆದಾರರು ಮೊಬೈಲ್ ಬ್ರೌಸರ್ ಮೂಲ ಅಮೆಜಾನ್ ಆ್ಯಪ್ಗೆ ಲಾಗ್ ಇನ್ ಆಗಿ ರಿಡೀಮ್ ಮಾಡಿಕೊಳ್ಳಬಹುದು. ಒಂದು ವರ್ಷಕ್ಕೋ ಅಥವಾ 3 ತಿಂಗಳ ಅವಧಿಗೋ ಅರ್ಹ ಚಂದಾದಾರರು ಆಯ್ಕೆ ಮಾಡಿಕೊಂಡ ಮೇಲೆ ಒಂದೇ ಸಲಕ್ಕೆ ಪೂರ್ತಿ ಮೊತ್ತವನ್ನು ಕಟ್ಟಬೇಕು. ಅದು ಕ್ರಮವಾಗಿ 999 ರೂ. ಹಾಗೂ 329 ರೂ. ಆಗುತ್ತದೆ.
ಆ ನಂತರ ಅರ್ಹ ಬಳಕೆದಾರರಿಗೆ ಅಮೆಜಾನ್ನಿಂದ ರೂ. 500 ಅಥವಾ ರೂ. 165 ಕ್ಯಾಶ್ಬ್ಯಾಕ್ ಸಿಗುತ್ತದೆ; ಅದು ಕೂಡ ಅವರು ಯಾವ ಪ್ಲಾನ್ ಆರಿಸಿಕೊಂಡಿದ್ದಾರೆ ಎಂಬುದರ ಆಧಾರದಲ್ಲಿ. ಈ ಆಫರ್ ಅಮೆಜಾನ್ನ ಹೊಸ ಬಳಕೆದಾರರಿಗೆ ಅನ್ವಯಿಸುತ್ತದೆ. ಈಗ ಅರ್ಹ ವಯಸ್ಸಿನ ಕೆಟಗಿರಿಯೊಳಗೆ ಇರುವ ಸದ್ಯದ ಬಳಕೆದಾರರು ಈ ಆಫರ್ನ ಪಡೆಯುವುದು ಹೇಗೆ ಎಂಬುದರ ವಿವರ ಇಲ್ಲಿದೆ.
-ಮೊದಲಿಗೆ ಅಮೆಜಾನ್ ಪ್ರೈಮ್ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಮಾಹಿತಿಯೊಂದಿಗೆ ಸೈನ್ ಅಪ್ ಮಾಡಿ.
– ವಯಸ್ಸು ದೃಢೀಕರಣಕ್ಕೆ ಐ.ಡಿ. ಪ್ರೂಫ್- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಒಂದು ಸೆಲ್ಫಿ.
– ಬಳಕೆದಾರರು ಎಲೆಕ್ಟ್ರಾನಿಕ್ ವಿಧಾನದಲ್ಲಿ ಪಾವತಿ ಮಾಡಬೇಕು- ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಅಮೆಜಾನ್ ಪೇ ಬ್ಯಾಲೆನ್ಸ್ನೊಂದಿಗೆ.
ಒಂದು ಸಲ ಖಾತ್ರಿಯಾದ ಮೇಲೆ ಮುಂದಿನ 48 ಗಂಟೆಯೊಳಗಾಗಿ ರೂ. 500 ಅಥವಾ ರೂ. 165 ಗ್ರಾಹಕರ ಅಮೆಜಾನ್ ಪೇ ಬಾಕಿ ಖಾತೆಗೆ ಜಮೆ ಆಗುತ್ತದೆ. ಆರ್ಬಿಐನ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ಒಂದು ತಿಂಗಳ ಉಚಿತ ಸಬ್ಸ್ಕ್ರಿಪ್ಷನ್ ನೀಡುವುದನ್ನು ಅಮೆಜಾನ್ ನಿಲ್ಲಿಸಿದೆ. ಈಗೇನಿದ್ದರೂ 3 ತಿಂಗಳ ಅವಧಿಗೆ ರೂ. 329 ಹಾಗೂ ಒಂದು ವರ್ಷದ ಅವಧಿಗೆ ರೂ. 999ರ ಪ್ಲಾನ್ ಆರಿಸಿಕೊಳ್ಳಬೇಕು. ಏರ್ಟೆಲ್ ಬಳಕೆದಾರರಿಗೆ 349 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ನೊಂದಿಗೆ ಉಚಿತವಾಗಿ ಒಂದು ತಿಂಗಳ ಅವಧಿಗೆ ಪ್ರೈಮ್ ಸದಸ್ಯತ್ವ ದೊರೆಯುತ್ತದೆ. ಈ ಪ್ಲಾನ್ನಲ್ಲಿ ದಿನಕ್ಕೆ 2GB ಡೇಟಾ, 28 ದಿನಗಳ ವ್ಯಾಲಿಡಿಟಿ, ಅನಿಯಮಿತ ಕಾಲಿಂಗ್ ಸಿಗುತ್ತದೆ. ಇದರ ಜತೆಗೆ ಏರ್ಟೆಲ್ ಬಳಕೆದಾರರಿಗೆ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಬಳಸಲು ಅವಕಾಶ ಸಿಗುತ್ತದೆ.
ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಸಂಪರ್ಕಕ್ಕೆ ಈ ಹಂತಗಳನ್ನು ಅನುಸರಿಸಬೇಕು: – ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ತೆರೆಯಬೇಕು.
– ಎಕ್ಸ್ಪ್ಲೋರ್ ಫೀಡ್ ಎಂಬುದನ್ನು ಹುಡುಕಲು ಸ್ಕ್ರಾಲ್ ಡೌನ್ ಮಾಡಿ.
– ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಫ್ರೀ ಟ್ರಯಲ್ ಕಾರ್ಡ್ ಎಂಬುದು ಕಾಣಿಸುವ ತನಕ ಸ್ಕ್ರಾಲ್ ಮಾಡುತ್ತಿರಿ.
– ಕ್ಲೇಮ್ ನೌ- ಆ್ಯಕ್ಟಿವೇಟ್- ಆ್ಯಕ್ಟಿವೇಟ್ ನೌ ಆರಿಸಿ.
– ಟ್ರಯಲ್ ಆಫರ್ ಆ್ಯಕ್ಟಿವೇಷನ್ ಖಾತ್ರಿ ಮಾಡಿ.
– ಸಬ್ಸ್ಕ್ರಿಪ್ಷನ್ ಸಂಪರ್ಕಕ್ಕಾಗಿ ಪ್ರೈಮ್ ವಿಡಿಯೋ ಆ್ಯಪ್ ಡೌನ್ಲೋಡ್ ಮಾಡಿ.
(OTT platform Amazon announces 50% discount on subscription of 18 to 24 age group youth. Here is the complete details of the offer)