ಅಮೆರಿಕಾ ಅಮೆರಿಕಾ ಚಿತ್ರಕ್ಕೆ 25 ವರ್ಷ; ನಾಗತಿಹಳ್ಳಿಗೆ ಈ ಅದ್ಭುತ ಕಥೆ ಹೊಳೆದಿದ್ದು ಹೇಗೆ?

TV9 Web
| Updated By: ಮದನ್​ ಕುಮಾರ್​

Updated on:Jun 18, 2021 | 10:00 AM

1996ರಲ್ಲಿ ಅಮೆರಿಕಾ ಅಮೆರಿಕಾ ಸಿನಿಮಾ ಬಿಡುಗಡೆ ಆಗಿತ್ತು. ತ್ರಿಕೋನ ಪ್ರೇಮಕಥೆಯ ಜೊತೆಗೆ ಭಾರತ ಮತ್ತು ಅಮೆರಿಕಾದ ನಡುವೆ ಇರುವ ಸಾಂಸ್ಕೃತಿಕ ವ್ಯತ್ಯಾಸದ ಕತೆಯನ್ನೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಹೇಳಿದ್ದರು.

ರಮೇಶ್​ ಅರವಿಂದ್​, ಹೇಮಾ ಪಂಚಮುಖಿ, ಅಕ್ಷಯ್​ ಆನಂದ್​ ನಟನೆಯ ‘ಅಮೆರಿಕಾ ಅಮೆರಿಕಾ’ ಸಿನಿಮಾ ಆ ಕಾಲಕ್ಕೆ ಸೂಪರ್​ ಹಿಟ್​ ಆಗಿತ್ತು. ಇಂದಿಗೂ ಕನ್ನಡ ಚಿತ್ರರಂಗದ ಎವರ್​​ಗ್ರೀನ್​ ಸಿನಿಮಾಗಳಲ್ಲಿ ಆ ಚಿತ್ರಕ್ಕೆ ಸ್ಥಾನ ಇದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಅವರ ಬತ್ತಳಿಕೆಯಿಂದ ಬಂದ ಆ ಸಿನಿಮಾ ತೆರೆಕಂಡು ಬರೋಬ್ಬರಿ 25 ವರ್ಷ ಕಳೆದಿದೆ. ಕಾಲು ಶತಮಾನ ಕಳೆದರೂ ಆ ಸಿನಿಮಾ ಇಂದಿಗೂ ಪ್ರಸ್ತುತವಾಗಿದೆ.

1996ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಒಂದು ತ್ರಿಕೋನ ಪ್ರೇಮಕಥೆಯ ಜೊತೆಗೆ ಭಾರತ ಮತ್ತು ಅಮೆರಿಕಾದ ನಡುವೆ ಇರುವ ಸಾಂಸ್ಕೃತಿಕ ವ್ಯತ್ಯಾಸದ ಕತೆಯನ್ನೂ ನಾಗತಿಹಳ್ಳಿ ಚಂದ್ರಶೇಖರ್​ ಅವರು ಹೇಳಿದ್ದರು. ಹಾಡುಗಳಂತೂ ಇಂದಿಗೂ ಕೇಳುಗರ ಫೇವರಿಟ್​ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿವೆ. ಈ ಸಿನಿಮಾ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್​ ಅವರು ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Sanchari Vijay: ಸಂಚಾರಿ ವಿಜಯ್ ಜೊತೆ ಸಿನಿಮಾ ಮಾಡಬೇಕಿತ್ತು ನಾಗತಿಹಳ್ಳಿ ಚಂದ್ರಶೇಖರ್​; ಆದರೆ ಆಗಿದ್ದೇ ಬೇರೆ

Kichcha sudeep: ಅಮೆರಿಕಾ ಅಮೆರಿಕಾ ಸಿನಿಮಾ ಕಿಚ್ಚ ಸುದೀಪ್​ ಕೈ ತಪ್ಪಿದ್ದೇಕೆ?

Published on: Jun 18, 2021 09:58 AM