AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಸುಷ್ಮಾ ಚಕ್ರೆ
|

Updated on:Feb 13, 2026 | 3:12 PM

Share

Seva Teerth : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಫೆಬ್ರವರಿ 13) ದೆಹಲಿಯ ಪ್ರಧಾನ ಮಂತ್ರಿ ಕಚೇರಿ (ಪಿಎಂಒ)ಯ ಹೊಸ ಕಟ್ಟಡ ಸಂಕೀರ್ಣದ ಹೆಸರನ್ನು "ಸೇವಾ ತೀರ್ಥ" ಎಂದು ಅನಾವರಣಗೊಳಿಸಿದರು. ಪ್ರಧಾನಿ ಮೋದಿ ಇಂದು ಹೊಸ ಪ್ರಧಾನಿ ಕಚೇರಿಗೆ ಸ್ಥಳಾಂತರಗೊಂಡಿದ್ದಾರೆ. ಇದರರ್ಥ ಪ್ರಧಾನ ಮಂತ್ರಿ ಕಚೇರಿಯ ವಿಳಾಸ ಶಾಶ್ವತವಾಗಿ ಬದಲಾಗಿದೆ. ಪ್ರಧಾನಿ ಮೋದಿಯವರ ಕಚೇರಿಯು ಈಗ ಸೇವಾ ತೀರ್ಥದಲ್ಲಿದ್ದು, ಇತರ ಹಲವಾರು ಸಚಿವಾಲಯಗಳ ಕಚೇರಿಗಳು ಕೂಡ ಇಲ್ಲಿರುತ್ತದೆ.

ನವದೆಹಲಿ, ಫೆಬ್ರವರಿ 13: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ದೆಹಲಿಯ ನೂತನ ಪ್ರಧಾನಮಂತ್ರಿ ಕಚೇರಿಯ ಕಾಂಪ್ಲೆಕ್ಸ್​​ನ ಹೆಸರನ್ನು ಉದ್ಘಾಟಿಸಿದರು. ಈ ಕಟ್ಟಡಕ್ಕೆ ಸೇವಾ ತೀರ್ಥ (Seva Teerth) ಎಂದು ಹೆಸರಿಡಲಾಗಿದೆ. ಈ ಹೆಸರಿನ ಕೆಳಗೆ ನಾಗರಿಕ ದೇವೋ ಭವ (ಪ್ರಜೆಗಳೇ ದೇವರು) ಎಂದು ಕೂಡ ಬರೆಯಲಾಗಿದೆ. ಈ ಮೂಲಕ ಪ್ರಧಾನಮಂತ್ರಿ ಕಚೇರಿಗೆ ಶಾಶ್ವತವಾಗಿ ಹೊಸ ವಿಳಾಸ ಸಿಕ್ಕಂತಾಗಿದೆ. ಈ ಹೊಸ ಕಟ್ಟಡ ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಕ್ಯಾಬಿನೆಟ್ ಸಚಿವಾಲಯವನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 13, 2026 03:06 PM