AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕರು ಮಾತನಾಡಿದ್ದನ್ನು ಆಲಿಸಿ ಭರ್ಜರಿ ಡಾಟಾ ಸೃಷ್ಟಿ; ಬಜಾಜ್ ಫೈನಾನ್ಸ್​ಗೆ ಎಐ ಬಲ

Bajaj Finance implementing AI across its products lines: ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಬಜಾಜ್ ಫೈನಾನ್ಸ್ ತನ್ನ ಎಲ್ಲಾ ಸ್ತರಗಳಲ್ಲಿ ಎಐ ಅಳವಡಿಕೆ ಕೆಲಸ ಮಾಡುತ್ತಿದೆ. ಗ್ರಾಹಕರ ಸೇರ್ಪಡೆಯಿಂದ ಹಿಡಿದು ಲೋನ್ ಬ್ಯುಸಿನೆಸ್​ವರೆಗೆ ಎಐ ಅನ್ನು ಸಮರ್ಪಕವಾಗಿ ಬಳಸುವ ಪ್ರಯತ್ನ ಆಗುತ್ತಿದೆ. ಗ್ರಾಹಕರ ಧ್ವನಿ ಕರೆಗಳನ್ನು ಆಲಿಸಿ, ಸ್ಪೀಚ್​ನಿಂದ ಟೆಕ್ಸ್ಟ್​ ಆಗಿ ಪರಿವರ್ತಿಸಿ, ಅದರ ದತ್ತಾಂಶ ಬಳಸಿ ಹೊಸ ಲೋನ್ ಬ್ಯುಸಿನೆಸ್ ತರಲಾಗುತ್ತಿದೆ.

ಗ್ರಾಹಕರು ಮಾತನಾಡಿದ್ದನ್ನು ಆಲಿಸಿ ಭರ್ಜರಿ ಡಾಟಾ ಸೃಷ್ಟಿ; ಬಜಾಜ್ ಫೈನಾನ್ಸ್​ಗೆ ಎಐ ಬಲ
ಬಜಾಜ್ ಫೈನಾನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 13, 2026 | 6:38 PM

Share

ನವದೆಹಲಿ, ಫೆಬ್ರುವರಿ 13: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ (AI) ಮಾಡಬಹುದಾದ ಕೆಲಸಗಳು ಅಸೀಮ. ಕಾರ್ಪೊರೇಟ್ ಸಂಸ್ಥೆಗಳು ತರಾತುರಿಯಲ್ಲಿ ಎಐ ಅಳವಡಿಕೆಗೆ ಪ್ರಯತ್ನಿಸುತ್ತಿವೆ. ಎಐನಿಂದ ಬ್ಯುಸಿನೆಸ್​ಗೆ ಅದೆಷ್ಟು ಲಾಭವಾಗಬಹುದು ಎನ್ನುವ ಒಂದು ಸಣ್ಣ ನಿದರ್ಶನವನ್ನು ಬಜಾಜ್ ಫಿನಾನ್ಸ್ (Bajaj Finance) ತೋರಿಸಿದೆ. ಈ ಹಣಕಾಸು ಸಂಸ್ಥೆಯು ತನ್ನ ಅನೇಕ ಸೇವೆಗಳಿಗೆ ಎಐ ಅನ್ನು ಆದ್ಯತೆಯಾಗಿ ಅಳವಡಿಸುತ್ತಿದೆ. ಇದರ ಮೂರನೇ ಕ್ವಾರ್ಟರ್​ನ ಲಾಭ ಸಕಾರಾತ್ಮಕವಾಗಿರುವುದು ಮಾತ್ರವಲ್ಲ, ಎಐ ಪ್ರಯೋಗ ಫಲಗಳನ್ನು ಸ್ಪಷ್ಟವಾಗಿ ತೋರಿಸಿದೆ.

ಬಜಾಜ್ ಫಿನಾನ್ಸ್ ಸಂಸ್ಥೆಯ ಸೇಲ್ಸ್​ನಿಂದ ಹಿಡಿದು, ಸರ್ವಿಸ್, ಪಿಒಎಸ್ ವೆರಿಫಿಕೇಶನ್, ಡಾಕ್ಯುಮೆಂಟ್ ಪ್ರೋಸಸಿಂಗ್​ವರೆಗೆ ಒಬ್ಬ ಗ್ರಾಹಕರ ಪೂರ್ಣ ಲೈಫ್ ಸೈಕಲ್​ನಲ್ಲಿ ಎಐ ಅನ್ನು ಅಳವಡಿಸಲಾಗಿದೆ. ‘ಎಐ ಇನ್ನೋವೇಶನ್ ಆಯ್ತು, ಈಗ ಅದನ್ನು ಜಾರಿ ಮಾಡಿದ್ದೇವೆ. ಬ್ಯುಸಿನೆಸ್​ಗೆ ಅದರ ಫಲ ಹೇಗಿದೆ ಎಂಬುದನ್ನು ಗಮನಿಸುತ್ತಿದ್ದೇವೆ’ ಎಂದು ಬಜಾಜ್ ಫೈನಾನ್ಸ್​ನ ವೈಸ್ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಸಿಕ್ಕ ರೀತಿಯಲ್ಲೇ ಭಾರತದ ಜವಳಿಗೂ ಅಮೆರಿಕದಿಂದ ಸುಂಕ ವಿನಾಯಿತಿ: ಪೀಯೂಶ್ ಗೋಯಲ್

ಗ್ರಾಹಕರ ಧ್ವನಿ ಆಲಿಸಿ ಬ್ಯುಸಿನೆಸ್ ಕೊಡುವ ಎಐ

ಗ್ರಾಹಕರ ದತ್ತಾಂಶವನ್ನು ಬಳಸಿ ಏನೆನ್ನೆಲ್ಲಾ ಮಾಡಬಹುದು ಎನ್ನುವುದನ್ನು ಬಜಾಜ್ ಫೈನಾನ್ಸ್ ತೋರಿಸಿಕೊಟ್ಟಿದೆ. ಗ್ರಾಹಕರು ಮಾತನಾಡಿರುವ ಕರೆಯಲ್ಲಿನ ಧ್ವನಿಯನ್ನು ಪಠ್ಯವಾಗಿ ಪರಿವರ್ತಿಸುವ ಕೆಲಸ ಮಾಡಿದ ಎಐ. ಈ ದತ್ತಾಂಶವನ್ನು ವಿಶ್ಲೇಷಿಸಿ, ಗ್ರಾಹಕರಿಗೆ ಸೂಕ್ತವಾದ ಉತ್ಪನ್ನಗಳನ್ನು ಆಫರ್ ಮಾಡಲು ಸಂಸ್ಥೆಗೆ ಸಾಧ್ಯವಾಗಿದೆ. ಬರೋಬ್ಬರಿ 5.2 ಲಕ್ಷ ಗ್ರಾಹಕರ ಮಾತುಗಳನ್ನು ಕೇಳಿಸಿಕೊಂಡು ದತ್ತಾಂಶ ರೂಪಿಸಲಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಗ್ರಾಹಕರಿಗೆ ಕಸ್ಟಮರ್ ಕೇರ್ ಸಿಬ್ಬಂದಿ ಕರೆ ಮಾಡಿ ಮಾತನಾಡಿದ ಸಂದರ್ಭದಲ್ಲಿ ಅವರ ಅನುಮತಿ ಮೇರೆಗೆ ಧ್ವನಿ ರೆಕಾರ್ಡ್ ಮಾಡಲಾಗಿರುತ್ತದೆ. ಅಂಥ ಕರೆಗಳಲ್ಲಿನ ಧ್ವನಿಯನ್ನು ಎಐ ಮೂಲಕ ಪಠ್ಯವಾಗಿ ಪರಿವರ್ತಿಸಲಾಗುತ್ತದೆ. ಗ್ರಾಹಕರು ಬೇಡವೆಂದರೆ ಕಾಲ್ ರೆಕಾರ್ಡ್ ಅನುಮತಿಯನ್ನು ನಿರಾಕರಿಸುವ ಆಯ್ಕೆ ಇರುತ್ತದೆ.

ಬಜಾಜ್ ಫೈನಾನ್ಸ್ ಸಂಸ್ಥೆಯ ಎಐ ಕಾಲ್ ಸೆಂಟರ್ ಮೂಲಕ 1,600 ಕೋಟಿ ರೂಗೂ ಅಧಿಕ ಮೊತ್ತದಷ್ಟು ಸಾಲ ವಿತರಣೆ ಮಾಡಲಾಗಿದೆ. ಇದರಲ್ಲಿ ಕರೆಗಳನ್ನು ಬಳಸಿ ತೆಗೆದ ದತ್ತಾಂಶದಿಂದ ಹೆಚ್ಚುವರಿ 325 ಕೋಟಿ ರೂನಷ್ಟು ಲೋನ್ ಬ್ಯುಸಿನೆಸ್ ಸೃಷ್ಟಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: ಎಐ ಕಲಿಯಿರಿ, ಇಲ್ಲವಾ ಕೆಲಸ ಬಿಟ್ಟುಹೋಗಿ; ಉದ್ಯೋಗಿಗಳಿಗೆ ಗೂಗಲ್​ನಿಂದ ವಾಲಂಟರಿ ಎಕ್ಸಿಟ್ ಪ್ಯಾಕೇಜ್​ಗಳ ಆಫರ್

ಇದಷ್ಟೇ ಅಲ್ಲದೆ, ಬಜಾಜ್ ಫೈನಾನ್ಸ್ ವಿವಿಧ ಸ್ತರಗಳಲ್ಲಿ ಎಐ ಅಳವಡಿಕೆ ಮಾಡುತ್ತಿದೆ. ಕಚೇರಿಯಲ್ಲಿ ಮತ್ತು ಪಿಒಎಸ್ ಸೆಂಟರ್​ಗಳಲ್ಲಿ ಗ್ರಾಹಕರ ಚಹರೆಯನ್ನು ದಾಖಲಿಸಿ ಎಐ ಮೂಲಕ ಗುರುತು ಪತ್ತೆ ಮಾಡುವ ಮತ್ತು ಗುರುತು ಖಚಿತಪಡಿಸುವ ಕೆಲಸ ಮಾಡಲಾಗುತ್ತಿದೆ. ಜನರಲ್ ಎಸ್ಸೆಮ್ಮೆಸ್ ಕಳುಹಿಸುವ ಬದಲು ಪ್ರತೀ ಗ್ರಾಹಕರಿಗೆ ಏನು ಅಗತ್ಯವಿದೆಯೋ ಅದನ್ನು ಎಐ ಮೂಲಕ ಗ್ರಹಿಸಿ ಮೆಸೇಜ್ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ ಸದ್ಯ 11 ಎಐ ಟೆಕ್ಸ್ಟ್ ಬೋಟ್​​ಗಳು ಸಕ್ರಿಯವಾಗಿವೆ. ಪ್ರೊಮೋಶನಲ್ ವಿಡಿಯೋಗಳು, ಬ್ಯಾನರ್​ಗಳನ್ನು ಎಐ ಮೂಲಕ ರಚಿಸಲಾಗುತ್ತಿರುವುದು ಸೇರಿದಂತೆ ಇನ್ನೂ ಹಲವು ಕಾರ್ಯಗಳನ್ನು ಬಜಾಜ್ ಫೈನಾನ್ಸ್ ಎಐ ಮೂಲಕ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್