AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Feb 13, 2026 | 4:00 PM

Share

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ರೈತ ಮಂಜುನಾಥ್ ಪತ್ನಿಯ ಒಡವೆ ಅಡವಿಟ್ಟು, ಲಕ್ಷಾಂತರ ಬಂಡವಾಳ ಹಾಕಿ ಬೆಳೆಸಿದ 300ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ದುಷ್ಕರ್ಮಿಗಳು ರಾತ್ರೋ ರಾತ್ರಿ ನಾಶ ಮಾಡಿದ್ದಾರೆ. ಫಸಲಿಗೆ ಬರಬೇಕಿದ್ದ ಸಮಯದಲ್ಲಿ ಆದ ಈ ಘಟನೆ ರೈತನಿಗೆ ಅಘಾತ ತಂದಿದೆ. ಹಳೆಯ ದ್ವೇಷವೇ ಕಾರಣ ಎನ್ನಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ

ಚಿಕ್ಕಬಳ್ಳಾಪುರ,ಫೆ.13: ಹೆಂಡತಿಯ ಒಡವೆಯನ್ನು ಅಡವಿಟ್ಟು, ಹಗಲು ರಾತ್ರಿ ಕಷ್ಟಪಟ್ಟು ಸುಂದರವಾದ ಬಾಳೆ ತೋಟ ಬೆಳೆಸಿದ್ದ ರೈತನಿಗೆ ಅದೇ ಜೀವನಕ್ಕೆ ಆಸರೆಯಾಗಿತ್ತು. 300ಕ್ಕೂ ಹೆಚ್ಚು ಬಾಳೆ ಗಿಡಗಳು ಇಲ್ಲಿದ್ದವು, ಅದು ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ರಾತ್ರೋ ರಾತ್ರಿ ಬಾಳೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಬಳಗೆರೆ ಗ್ರಾಮದ ಮಂಜುನಾಥ್ ಹಾಗೂ ನಂದಿನಿ ದಂಪತಿಗೆ ಸೇರಿದ ತೋಟದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬಾಳೆ ಗಿಡ ಹಾಕಿದ್ದರು. ಇನ್ನೇನು ಎರಡು ತಿಂಗಳು ಆಗಿದ್ರೆ, ಬಾಳೆ ಗೊನೆ ಬಿಟ್ಟು ಫಸಲು ಕೈಗೆ ಬರಬೇಕಿತ್ತು. ಅಷ್ಟರಲ್ಲೆ ದುಷ್ಕರ್ಮಿಗಳು ರಾತ್ರೋ ರಾತ್ರಿ ಎಲ್ಲವನ್ನು ನಾಶ ಮಾಡಿದ್ದಾರೆ. ಇನ್ನು ಈ ಕೃತ್ಯವನ್ನು ಹಳೆಯ ದ್ವೇಷಕ್ಕೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ