AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2026: ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

Solar Eclipse 2026: ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ಅಕ್ಷತಾ ವರ್ಕಾಡಿ
|

Updated on:Feb 13, 2026 | 3:11 PM

Share

2026ರ ರಾಹುಗ್ರಸ್ತ ಸೂರ್ಯಗ್ರಹಣವು ಸಿಂಹ ರಾಶಿಯವರಿಗೆ ಕಳತ್ರ ಸ್ಥಾನದಲ್ಲಿ ಸಂಭವಿಸಲಿದೆ. ಇದು ಕುಟುಂಬದಲ್ಲಿ ಸಮಸ್ಯೆಗಳು, ಆರ್ಥಿಕ ನಷ್ಟಗಳು ಮತ್ತು ಆರೋಗ್ಯದಲ್ಲಿ ಏರುಪೇರು ತರಬಹುದು. ಆದರೆ ಗುರುಬಲ ಉತ್ತಮವಾಗಿದ್ದು, ವಿದೇಶ ಪ್ರಯಾಣ, ಮಕ್ಕಳಿಂದ ಶುಭ, ಶಿಕ್ಷಣ ಮತ್ತು ಹೂಡಿಕೆಯಲ್ಲಿ ಲಾಭ ನಿರೀಕ್ಷಿಸಬಹುದು. ಜಾಗ್ರತೆ, ಜಪತಪ ಮತ್ತು ದಾನದಿಂದ ದುಷ್ಪ್ರಭಾವಗಳನ್ನು ಕಡಿಮೆ ಮಾಡಬಹುದು.

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಸಿಂಹ ರಾಶಿಯವರ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಲಿದೆ. ಈ ಗ್ರಹಣವು ಸಿಂಹ ರಾಶಿಯ ಕಳತ್ರ ಸ್ಥಾನದಲ್ಲಿ, ಅಂದರೆ ಏಳನೇ ಮನೆಯಲ್ಲಿ ಸಂಭವಿಸಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮಖಾ, ಪುಬ್ಬಾ, ಉತ್ತರಾ ನಕ್ಷತ್ರದವರಿಗೆ ಈ ರಾಶಿಯ ಪ್ರಭಾವ ಇರುತ್ತದೆ. ಸಿಂಹ ರಾಶಿಯವರು ಈ ಅವಧಿಯಲ್ಲಿ ಹೆಚ್ಚು ಜಾಗರೂಕತೆ ವಹಿಸುವುದು ಅಗತ್ಯ.

ಗ್ರಹಣದ ಪ್ರಭಾವ ಅಷ್ಟು ಶುಭಕರವಾಗಿಲ್ಲ ಎನ್ನಲಾಗಿದೆ. ಗಂಡ-ಹೆಂಡತಿಯರ ನಡುವೆ ಜಗಳ, ಕುಟುಂಬದಲ್ಲಿ ಅನಗತ್ಯ ತೊಂದರೆಗಳು, ರಾಜಕೀಯ ಅಪವಾದಗಳು ಮತ್ತು ಕೆಲವರಿಗೆ ಸ್ಥಾನ ನಷ್ಟವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಸ್ವಲ್ಪ ನಷ್ಟಗಳು, ಆರೋಗ್ಯದಲ್ಲಿ ಏರುಪೇರು ಹಾಗೂ ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಶುಭಫಲವಿದ್ದರೂ, ಹೊಸ ಭೂಮಿ ಖರೀದಿಯಲ್ಲಿ ಎಚ್ಚರಿಕೆ ಅಗತ್ಯ. ವಿದೇಶ ಪ್ರಯಾಣ, ಮಕ್ಕಳಿಂದ ಸಂತೋಷ, ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಹಾಗೂ ಹೂಡಿಕೆಯಿಂದ ಲಾಭ ನಿರೀಕ್ಷಿಸಬಹುದು. ಗ್ರಹಣದ ದಿನ ಜಪತಪಗಳಿಗೆ ಪ್ರಾಶಸ್ತ್ಯ ನೀಡಿ, ನವಧಾನ್ಯ ಹಾಗೂ ಗೋಧಿ-ಬೆಲ್ಲ ದಾನ ಮಾಡುವುದು ಶುಭ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 13, 2026 03:11 PM