ವಿಕ್ರಾಂತ್​ ರೋಣ ಚಿತ್ರದಲ್ಲಿ ಕಿಚ್ಚನ ಜೊತೆ ಕಿಚ್ಚು ಹೆಚ್ಚಿಸಿದ ಜಾಕ್ವೆಲಿನ್​ ಫರ್ನಾಂಡಿಸ್

Jacqueline Fernandez | Kichcha Sudeep: ಜಾಕ್ವೆಲಿನ್​ ಫರ್ನಾಂಡಿಸ್​ ಅವರ ಕಾರ್ಯವೈಖರಿಗೆ ಕಿಚ್ಚ ಸುದೀಪ್​ ಮೆಚ್ಚುಗೆ ಸೂಚಿಸಿದ್ದಾರೆ. ಬಾಲಿವುಡ್​ ನಟಿಯ ಆಗಮನದಿಂದಾಗಿ ವಿಕ್ರಾಂತ್​ ರೋಣ ಚಿತ್ರಕ್ಕೆ ಹೊಸ ಮೆರುಗು ಸಿಕ್ಕಾಂತಾಗಿದೆ.

ವಿಕ್ರಾಂತ್​ ರೋಣ ಚಿತ್ರದಲ್ಲಿ ಕಿಚ್ಚನ ಜೊತೆ ಕಿಚ್ಚು ಹೆಚ್ಚಿಸಿದ ಜಾಕ್ವೆಲಿನ್​ ಫರ್ನಾಂಡಿಸ್
ಅನೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 17, 2021 | 1:28 PM

ಕಿಚ್ಚ ಸುದೀಪ್​ ನಟಿಸುತ್ತಿರುವ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಕೊರೊನಾ ವೈರಸ್​ನಿಂದ ಉಂಟಾದ ಅಡ್ಡಿ ಆತಂಕ ಏನೇ ಇದ್ದರೂ ಕೂಡ ಬಹಳ ಬೇಗ ಚಿತ್ರೀಕರಣ ಮುಗಿಸಲಾಗಿದೆ. ಕೊವಿಡ್​ ಎರಡನೇ ಅಲೆ ಆರಂಭ ಆಗುವುದಕ್ಕೂ ಮುನ್ನ ಮಾತಿನ ಭಾಗದ ಶೂಟಿಂಗ್​ ಮುಕ್ತಾಯ ಮಾಡಿಕೊಂಡಿದ್ದ ತಂಡ, ಕೇವಲ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿತ್ತು. ಈಗ ಅದನ್ನೂ ಪೂರ್ಣಗೊಳಿಸಲಾಗಿದೆ. ಆ ಹಾಡಿನಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಡ್ಯಾನ್ಸ್ ಮಾಡಿರುವುದು ವಿಶೇಷ.

ಬಾಲಿವುಡ್​ನಲ್ಲಿ ಸಖತ್​ ಫೇಮಸ್​ ಆಗಿರುವ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಇದೇ ಮೊದಲ ಬಾರಿಗೆ ‘ವಿಕ್ರಾಂತ್​ ರೋಣ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತಾಗಿದೆ. ಅವರಿಗೆ ಚಿತ್ರದ ನಿರ್ದೇಶಕ ಅನೂಪ್​ ಭಂಡಾರಿ ಸ್ವಾಗತ ಕೋರಿದ್ದಾರೆ. ‘ಜಾಕ್ವೆಲಿನ್​ ಅವರೇ ನಿಮಗೆ ಚಂದನವನಕ್ಕೆ ಸ್ವಾಗತ. ನಿಮ್ಮ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿತು. ನಿಮ್ಮ ಪಾತ್ರದ ಹೆಸರು ಮತ್ತು ಫಸ್ಟ್​ಲುಕ್​ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರೇಕ್ಷಕರಿಗೆ ಇದು ಖಂಡಿತ ಇಷ್ಟವಾಗಲಿದೆ ಎಂಬ ನಂಬಿಕೆ ನನಗಿದೆ. ಡಬ್ಬಿಂಗ್​ ಸ್ಟುಡಿಯೋದಲ್ಲಿ ಮತ್ತೆ ಭೇಟಿ ಆಗೋಣ. ಅಲ್ಲಿಯವರೆಗೆ ಸ್ವಲ್ಪ ಜೋಪಾನ’ ಎಂದು ಅನೂಪ್​ ಭಂಡಾರಿ ಟ್ವೀಟ್​ ಮಾಡಿದ್ದಾರೆ.

ಜಾಕ್ವೆಲಿನ್​ ಫರ್ನಾಂಡಿಸ್​ ಅವರ ಕಾರ್ಯವೈಖರಿಗೆ ಸುದೀಪ್​ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ‘ಈ ಹಾಡು ಮತ್ತು ಸಿನಿಮಾಗೆ ಎನರ್ಜಿ ತುಂಬಿದ್ದಕ್ಕಾಗಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಧನ್ಯವಾದಗಳು’ ಎಂದು ಸುದೀಪ್​ ಹೇಳಿದ್ದಾರೆ. ಬಾಲಿವುಡ್​ ನಟಿಯ ಆಗಮನದಿಂದಾಗಿ ವಿಕ್ರಾಂತ್​ ರೋಣ ಚಿತ್ರಕ್ಕೆ ಹೊಸ ಮೆರುಗು ಸಿಕ್ಕಾಂತಾಗಿದೆ.

ಚಿತ್ರೀಕರಣ ಮುಗಿದಿರುವುದಕ್ಕೆ ಇಡೀ ತಂಡಕ್ಕೆ ಕಿಚ್ಚ ಸುದೀಪ್​ ವಂದನೆಗಳನ್ನು ತಿಳಿಸಿದ್ದಾರೆ. ‘ಸಿನಿಮಾದ ಕೆಲಸ ಶುರು ಮಾಡಿದಾಗ ಯಾವ ಭಾವನೆ ಇತ್ತೋ ಅದೇ ಭಾವನೆಯೊಂದಿಗೆ ನಾವು ಕೆಲಸ ಮುಗಿಸುವುದು ತುಂಬ ವಿರಳ. ಸುತ್ತಮುತ್ತ ಇದ್ದ ಎಲ್ಲರೂ ತುಂಬ ಪಾಸಿಟಿವ್​ ಆಗಿದ್ದರು. ಅದಕ್ಕಾಗಿ ವಿಕ್ರಾಂತ್​ ರೋಣ ತಂಡದ ಎಲ್ಲರಿಗೂ ಧನ್ಯವಾದಗಳು’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.

ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಜೊತೆಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಿಚ್ಚ ಸುದೀಪ್​ ಜೊತೆ ನಿರೂಪ್​ ಭಂಡಾರಿ, ನೀತಾ ಅಶೋಕ್​ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆಗಸ್ಟ್​ 19ರಂದು ಈ ಸಿನಿಮಾ ವಿಶ್ವಾದ್ಯಂತ 3ಡಿ ವರ್ಷನ್​ನೊಂದಿಗೆ ಬಿಡುಗಡೆ ಆಗಲಿದೆ. ಚಿತ್ರಕ್ಕೆ ಬಿ. ಅಜನೀಶ್​ ಲೋಕನಾಥ್​ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ಸುದೀಪ್​ ನಟನೆಯ ವಿಕ್ರಾಂತ್​ ರೋಣ ಸಿನಿಮಾದ ಪೋಸ್ಟರ್​ ಕದ್ದ ಬಾಲಿವುಡ್; ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​

‘ವಿಕ್ರಾಂತ್​ ರೋಣ’ ಬಜೆಟ್​ ಎಷ್ಟು? ನಂಬರ್​ ಹೇಳುವ ಬದಲು ನಿರ್ದೇಶಕರು ಹೇಳಿದ್ದೇ ಬೇರೆ​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ