AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಸುದ್ದಿಗೋಷ್ಠಿ: ದೊಡ್ಮನೆ ಆಸ್ತಿ ವಿವಾದದಲ್ಲಿ ದರ್ಶನ್ ಹೆಸರು: ಸ್ಪಷ್ಟನೆ ನೀಡಿದ ಡಿ ಬಾಸ್

Darshan Press Meet: 'ಉಮಾಪತಿ ಕೇಸ್​ ಎಲ್ಲೆಲ್ಲೋ ಹೋಗ್​ ಬಂತು. ದೊಡ್ಮನೆ ಕಡೆ ತಿರುಗುತ್ತಿದೆ. ಜೋಗಿ ಪ್ರೇಮ್​ ಅವರಿಂದ ಉಮಾಪತಿ ಪರಿಚಯ. ಸಿನಿಮಾ ಮಾಡೋರಿಗೆ 70 ದಿನಗಳ ಮೇಲೆ ಹೆಚ್ಚು ಡೇಟ್​ ಕೊಡಲ್ಲ ಎಂದೆ. ನಂತರ ತರುಣ್​ ಬಂದ್ರು ಸಿನಿಮಾ ಮಾಡಿದ್ರು’ ಎಂದ್ರು ದರ್ಶನ್​.

ದರ್ಶನ್ ಸುದ್ದಿಗೋಷ್ಠಿ: ದೊಡ್ಮನೆ ಆಸ್ತಿ ವಿವಾದದಲ್ಲಿ ದರ್ಶನ್ ಹೆಸರು: ಸ್ಪಷ್ಟನೆ ನೀಡಿದ ಡಿ ಬಾಸ್
ಉಮಾಪತಿ, ದರ್ಶನ್​
TV9 Web
| Edited By: |

Updated on:Jul 17, 2021 | 5:44 PM

Share

ಮೈಸೂರಿನ ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ ಸಿಬ್ಬಂದಿ ಮೇಲೆ ದರ್ಶನ್​ ಹಲ್ಲೆ ನಡೆಸಿದ್ದಾರೆ ಎನ್ನುವ ಪ್ರಕರಣ ನಾನಾ ತಿರುವು ಪಡೆದುಕೊಂಡಿದೆ. ಆರೋಪ ಪ್ರತ್ಯಾರೋಪ ಮುಂದುವರಿಯುತ್ತಲೇ ಇದೆ. ‘ಹಲ್ಲೆಗೆ ಒಳಗಾದ ಸಿಬ್ಬಂದಿ ಬಡವ, ಹೀಗಾಗಿ ಅವರು ಸತ್ಯ ಹೇಳೋಕೆ ಹಿಂಜರಿಯುತ್ತಿದ್ದಾರೆ’ ಎಂದು ನಿರ್ದೇಶಕ ಇಂದ್ರಜಿತ್​ ಆರೋಪಿಸಿದ್ದರು. ಇದರ ಜತೆ, ದೊಡ್ಮನೆ ವಿವಾದದಲ್ಲಿ ದರ್ಶನ್​ ಹೆಸರು ಕೇಳಿ ಬಂದಿತ್ತು. ಇದಾದ ಬೆನ್ನಲ್ಲೇ ದರ್ಶನ್​ ಇಂದು (ಜುಲೈ 17) ತಮ್ಮ ಫಾರ್ಮ್​ಹೌಸ್​ನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ.

‘ಉಮಾಪತಿ ಕೇಸ್​ ಎಲ್ಲೆಲ್ಲೋ ಹೋಗ್​ ಬಂತು. ದೊಡ್ಮನೆ ಕಡೆ ತಿರುಗುತ್ತಿದೆ. ಜೋಗಿ ಪ್ರೇಮ್​ ಅವರಿಂದ ಉಮಾಪತಿ ಪರಿಚಯ. 100 ದಿನ ಡೇಟ್ಸ್​ ಕೇಳಿದ್ರು. ಸಿನಿಮಾ ಮಾಡೋರಿಗೆ 70 ದಿನಗಳ ಮೇಲೆ ಹೆಚ್ಚು ಡೇಟ್​ ಕೊಡಲ್ಲ ಎಂದೆ. ನಂತರ ತರುಣ್​ ಬಂದ್ರು ಸಿನಿಮಾ ಮಾಡಿದ್ರು’ ಎಂದ್ರು ದರ್ಶನ್​.

‘ನಂಗು ಉಮಾಪತಿಗೂ 2016ರಿಂದ ಪರಿಚಯ. ಪುನೀತ್​ ಆಸ್ತಿಯನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಉಮಾಪತಿ ಹೇಳಿದ್ದರು. ನಾನು ಅದನ್ನು ಕೊಡೋ ಆಲೋಚನೆ ಇದೆಯೇ ಅಂತ ಕೇಳ್ದೆ. ಓಕೆ ಅಂದ್ರು. ಈಗ ಅದನ್ನು ಕೊಡಲ್ಲ ಅಂತಿದಾರೆ. ಹಾಗಾದ್ರೆ ಇಷ್ಟು ವರ್ಷ ಬಾಡಿಗೆ ಯಾಕೆ ನಂಗೆ ತಂದು ಕೊಡ್ತಾ ಇದ್ರು? ಇದಕ್ಕೆ ಉಮಾಪತಿ ಉತ್ತರ ನೀಡಲಿ’ ಎಂದರು.

‘ನಮ್ಮ ತಂದೆ ಬಂದಿದ್ದು ದೊಡ್ಮನೆಯಿಂದ. 100 ವರ್ಷ ಹೋದ್ರು ದೊಡ್ಮನೆ ಅಂದ್ರೆ ದೊಡ್ಮನೆಯೇ. ನಮ್ಮ ತಂದೆ ಅಲ್ಲಿಂದಲೇ ಬಂದವರು. ನಾನು ಮೊದಲು ಕೆಲಸ ಮಾಡಿದ್ದು ಅಲ್ಲಿಯೇ. ಲ್ಯಾಂಬೋರ್ಗಿನಿ ಉರುಸ್​ ಪುನೀತ್​ ಹತ್ರಾನೂ ಇದೆ. ನನ್ನ ಬಳಿಯೂ ಇದೆ’ ಎಂದಿದ್ದಾರೆ ದರ್ಶನ್​.

ಇದನ್ನೂ ಓದಿ:

‘ನಿಮ್ಮ ಪಯಣ ನರಕವಾಗಲಿ’: ಇಂದ್ರಜಿತ್​ ಫೋಟೋ ಇಟ್ಟು ಶ್ರದ್ಧಾಂಜಲಿ ಕೋರಿದ ದರ್ಶನ್​ ಅಭಿಮಾನಿಗಳು

ದರ್ಶನ್- ಉಮಾಪತಿ ಭಿನ್ನಾಭಿಪ್ರಾಯಕ್ಕೆ ಆಸ್ತಿ ವಿಚಾರ ಕಾರಣವೇ?; ಉಮಾಪತಿ ಹೇಳಿದ್ದೇನು?

Published On - 5:21 pm, Sat, 17 July 21