‘ನಿಮ್ಮ ಪಯಣ ನರಕವಾಗಲಿ’: ಇಂದ್ರಜಿತ್​ ಫೋಟೋ ಇಟ್ಟು ಶ್ರದ್ಧಾಂಜಲಿ ಕೋರಿದ ದರ್ಶನ್​ ಅಭಿಮಾನಿಗಳು

ಮೈಸೂರಿನಲ್ಲಿರುವ ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್ ಸಿಬ್ಬಂದಿ ಗಂಗಾಧರ್ ಅವರ ಮೇಲೆ ದರ್ಶನ್​ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಗಾಧರ್​ ಕಣ್ಣಿಗೆ ಗಾಯವಾಗಿದೆ ಎಂಬಿತ್ಯಾದಿ ಗಂಭೀರ ಆರೋಪ ಇಂದ್ರಜಿತ್​ ಕಡೆಯಿಂದ ಬಂದಿತ್ತು.

‘ನಿಮ್ಮ ಪಯಣ ನರಕವಾಗಲಿ’: ಇಂದ್ರಜಿತ್​ ಫೋಟೋ ಇಟ್ಟು ಶ್ರದ್ಧಾಂಜಲಿ ಕೋರಿದ ದರ್ಶನ್​ ಅಭಿಮಾನಿಗಳು
TV9kannada Web Team

| Edited By: Rajesh Duggumane

Jul 17, 2021 | 4:11 PM

ನಟ ದರ್ಶನ್​ ಅಭಿಮಾನಿ ಬಳಗದ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ದರ್ಶನ್​ ಬಗ್ಗೆ ಯಾರೇ ಆರೋಪ ಮಾಡಿದರೂ ಅದನ್ನು ಅಭಿಮಾನಿಗಳು ಸಹಿಸುವುದೇ ಇಲ್ಲ. ಈ ಮೊದಲು ಈ ರೀತಿಯ ಸಾಕಷ್ಟು ಘಟನೆಗಳು ನಡೆದಿವೆ. ಈಗ ದರ್ಶನ್​ ಬಗ್ಗೆ ಗಂಭೀರ ಆರೋಪ ಮಾಡಿದ ನಿರ್ದೇಶಕ/ಪತ್ರಕರ್ತ ಇಂದ್ರಜಿತ್ ಲಂಕೇಶ್​ ಬಗ್ಗೆ ದಚ್ಚು ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

ಮೈಸೂರಿನಲ್ಲಿರುವ ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್ ಸಿಬ್ಬಂದಿ ಗಂಗಾಧರ್ ಅವರ ಮೇಲೆ ದರ್ಶನ್​ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಗಾಧರ್​ ಕಣ್ಣಿಗೆ ಗಾಯವಾಗಿದೆ ಎಂಬಿತ್ಯಾದಿ ಗಂಭೀರ ಆರೋಪ ಇಂದ್ರಜಿತ್​ ಕಡೆಯಿಂದ ಬಂದಿತ್ತು. ಆದರೆ, ದರ್ಶನ್​, ಹೋಟೆಲ್​ ಮಾಲೀಕ ಸಂದೇಶ್​ ಇದನ್ನು ಅಲ್ಲಗಳೆದಿದ್ದರು. ಶುಕ್ರವಾರ (ಜುಲೈ 16) ಹೇಳಿಕೆ ನೀಡಿದ್ದ ಗಂಗಾಧರ್​ ಅವರು ಸ್ವತಃ ಈ ಆರೋಪವನ್ನು ಅಲ್ಲಗಳೆದಿದ್ದರು.

ಇಷ್ಟೆಲ್ಲ ಬೆಳವಣಿಗೆ ನಂತರವೂ ಇಂದ್ರಜಿತ್​ ಸುಮ್ಮನೆ ಕೂತಿಲ್ಲ. ಒಂದಾದ ಮೇಲೆ ಒಂದರಂತೆ ಪ್ರೆಸ್​ಮೀಟ್​ ನಡೆಸಿದ್ದಾರೆ. ಗಂಗಾಧರ್​ ಬಡವ. ಇದೆಲ್ಲವನ್ನು ಎದುರಿಸುವ ಶಕ್ತಿ ಅವರಲ್ಲಿ ಇಲ್ಲ. ಈ ಕಾರಣಕ್ಕೆ ಅವರು ಮುಂದೆ ಬರೋಕೆ ಹೆದರುತ್ತಿದ್ದಾರೆ. ಇಂಥವರಿಗೆ ನಾವು ಧ್ವನಿಯಾಗಬೇಕು ಎಂದು ಇಂದ್ರಜಿತ್​ ಕರೆ ನೀಡಿದ್ದರು. ಜತೆಗೆ ಮೇರು ನಟ ಹೇಗಿರಬೇಕು ಎಂಬುದನ್ನು ರಾಜ್​ಕುಮಾರ್​ ಅವರನ್ನು ನೋಡಿ ದರ್ಶನ್​ ಕಲಿಯಲಿ ಎಂದು ಕಿವಿಮಾತು ಹೇಳಿದ್ದರು.

ಈ ಎಲ್ಲಾ ಬೆಳವಣಿಗೆಯಿಂದ ದರ್ಶನ್​ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇಂದ್ರಜಿತ್​ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆಹೋಗಿ, ಅವರ ಫೋಟೋಗೆ ಹಾರ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ ದರ್ಶನ್​ ಅಭಿಮಾನಿಗಳು. ‘ನಿಮ್ಮ ಪ್ರಯಾಣ ನರಕವಾಗಿರಲಿ. ಮರಳಿ ಬಾರದೂರಿಗೆ ನಿನ್ನ ಪಯಣ’ ಎಂದು ಬರೆದುಕೊಂಡಿದ್ದಾರೆ.

ಈ ಮೊದಲು ದರ್ಶನ್ ಬಗ್ಗೆ ನಟ ಜಗ್ಗೇಶ್​ ಮಾತನಾಡಿದ್ದರು. ಇದು ಡಿ ಬಾಸ್​ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಶೂಟಿಂಗ್​ ಸಂದರ್ಭದಲ್ಲಿ ಜಗ್ಗೇಶ್​ ಅವರನ್ನು ಅಭಿಮಾನಿಗಳು ಮುತ್ತಿಗೆ ಹಾಕಿದ್ದರು.

ಇದನ್ನೂ ಓದಿ: ಇಂದ್ರಜಿತ್​ ಲಂಕೇಶ್​ ಸುದ್ದಿಗೋಷ್ಠಿ: ಮೇರುನಟ ಹೇಗಿರಬೇಕು ಎಂದು ರಾಜ್​ಕುಮಾರ್​ ನೋಡಿ ಕಲಿಯಲಿ; ದರ್ಶನ್​ಗೆ ಇಂದ್ರಜಿತ್​ ಬುದ್ಧಿವಾದ

ದರ್ಶನ್​ ಮತ್ತು ನನ್ನ ನಡುವೆ ಯಾವುದೇ ವೈರತ್ವ ಇಲ್ಲ: ನಿರ್ಮಾಪಕ ಉಮಾಪತಿ ಸ್ಪಷ್ಟನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada