ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ: ಮೇರುನಟ ಹೇಗಿರಬೇಕು ಎಂದು ರಾಜ್ಕುಮಾರ್ ನೋಡಿ ಕಲಿಯಲಿ; ದರ್ಶನ್ಗೆ ಇಂದ್ರಜಿತ್ ಬುದ್ಧಿವಾದ
Indrajit lankesh Press meet: ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಇಂದ್ರಜಿತ್ ಲಂಕೇಶ್ ಅವರು ಇಂದು (ಜುಲೈ 16) ಸುದ್ದಿಗೋಷ್ಠಿ ನಡೆಸಿದ್ದರು. ಹೀಗಾಗಿ, ಅವರು ಸುದ್ದಿಗೋಷ್ಠಿ ನಡೆಸಿದ ಬೆಂಗಳೂರಿನ ಇಂದ್ರಜಿತ್ ಲಂಕೇಶ್ ಕಚೇರಿಗೆ ಭದ್ರತೆ ನೀಡಲಾಗಿದೆ
ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಗಂಗಾಧರ್ ಅವರ ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪ ಪ್ರಕರಣ ಗಂಟೆಗೆ ಒಂದೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಅಂದು ಹಲ್ಲೆಯೇ ಆಗಿಲ್ಲ ಎಂದು ಗಂಗಾಧರ್ ಹೇಳಿದ್ದರು. ಈ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್ ಸುದ್ದಿಗೋಷ್ಠಿ ನಡೆಸಿದ್ದಾರೆ.
‘ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ. ಸಮಾಜದ ಹಿತದೃಷ್ಟಿಗಾಗಿ ನಮ್ಮ ಕುಟುಂಬ ಕೆಲಸ ಮಾಡುತ್ತ ಬಂದಿದೆ. ಬಡವರಿಗೆ, ಸಾಮಾನ್ಯರಿಗೆ ಅನ್ಯಾಯವಾಗಿದೆ. ಸೆಲೆಬ್ರಿಟಿಗಳ ದೃಷ್ಟಿಯಿಂದ ನಾನು ಮುಂದೆ ಬಂದಿಲ್ಲ. ಯಾರದ್ದೇ ತೇಜೋವಧೆ ಮಾಡುವ ಉದ್ದೇಶ ನನ್ನದಲ್ಲ. ನೋವು ತಿಂದವರಿಗೆ ನ್ಯಾಯ ಒದಗಿಸಿಕೊಡಿ. ಇದಕ್ಕೂ ಮೇಲೆ ನನಗೇನು ಬೇಡ. ಪೊಲೀಸರಿಗೆ ಸಹಕಾರ ನೀಡೋಕೆ ಸಿದ್ಧನಿದ್ದೇನೆ’ ಎಂದಿದ್ದಾರೆ ಇಂದ್ರಜಿತ್.
‘ಎಚ್.ಡಿ. ಕುಮಾರಸ್ವಾಮಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಸ್ವತಃ ಮುಂದೆ ಬಂದು ಹೇಳಿದ್ದೇನೆ. ಮೇರುನಟ ಹೇಗಿರಬೇಕು ಎಂದು ರಾಜ್ಕುಮಾರ್ ಅವರಿಂದ ಕಲಿಯಬೇಕು’ ಎಂದು ದರ್ಶನ್ಗೆ ಇಂದ್ರಜಿತ್ ಕಿವಿಮಾತು ಹೇಳಿದ್ದಾರೆ .
ಹಲ್ಲೆಗೊಳಗಾದ ಸಿಬ್ಬಂದಿ ದಲಿತ ಎಂದು ಇಂದ್ರಜಿತ್ ಹೇಳಿದ್ದರು. ಆದರೆ ನಾನು ದಲಿತನಲ್ಲ ಎಂದು ಗಂಗಾಧರ್ ಅವರೇ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂದ್ರಜಿತ್ ‘ದಲಿತರು ಎಂದು ನಾನು ಜಾತಿ ಆಧಾರದ ಮೇಲೆ ಹೇಳಿದ್ದು ಅಲ್ಲ. ಬಡವರು ದಲಿತರು. ನಾನು ಆ ಅರ್ಥದಲ್ಲಿ ಹೇಳಿದ್ದೇನೆ ಅಷ್ಟೆ. ದಯವಿಟ್ಟು ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ’ ಎಂದಿದ್ದಾರೆ.
ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಇಂದ್ರಜಿತ್ ಲಂಕೇಶ್ ಅವರು ಇಂದು (ಜುಲೈ 16) ಸುದ್ದಿಗೋಷ್ಠಿ ನಡೆಸಿದ್ದರು. ಹೀಗಾಗಿ, ಸುದ್ದಿಗೋಷ್ಠಿ ನಡೆದ ಇಂದ್ರಜಿತ್ ಲಂಕೇಶ್ ಕಚೇರಿಗೆ ಭದ್ರತೆ ನೀಡಲಾಗಿದೆ. ಹಲಸೂರಿನ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಈ ಕಚೇರಿ ಇದೆ. ಭದ್ರತೆಗೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ:Darshan: ಇಂದ್ರಜಿತ್ ಈ ಪ್ರಕರಣವನ್ನು ಎಲ್ಲಿಗೋ ತಗೊಂಡು ಹೋಗ್ತಿದ್ದಾರೆ; ದರ್ಶನ್
ನನ್ನ ಮತ್ತು ಇಂದ್ರಜಿತ್ ಭೇಟಿಯ ಚಿತ್ರ ಹಳೆಯದು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ
Published On - 6:11 pm, Fri, 16 July 21