AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಾ ಮತ್ತು ಹೊಕ್ಕಳು: ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ನಟಿ ತಾಪ್ಸಿ ಪನ್ನು ಹೇಳಿಕೆ

Taapsee Pannu: ತೆಲುಗಿನ 'ಝುಮ್ಮಂದಿನಾದಂ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿ ಇಂದು ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗ ಮಿಂಚುತ್ತಿರುವ ತಾಪ್ಸಿ ಪನ್ನು, ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಆಡಿರುವ ಮಾತುಗಳು ಈಗ ಹೊಸ ವಿವಾದ ಸ್ವರೂಪ ಪಡೆದುಕೊಂಡಿವೆ. ತಮ್ಮ ಹೊಸ ಚಿತ್ರ ‘ಅಸ್ಸಿ’ ಪ್ರಚಾರದ ವೇಳೆ ನೀಡಿದ ಸಂದರ್ಶನವೊಂದರಲ್ಲಿ ಅವರು ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಮೇಲೆ ಹೇರಲಾಗುವ ಮುಜುಗರದ ಬೇಡಿಕೆಗಳ ಬಗ್ಗೆ ಮಾತನಾಡಿದ್ದಾರೆ.

ಬ್ರಾ ಮತ್ತು ಹೊಕ್ಕಳು: ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ನಟಿ ತಾಪ್ಸಿ ಪನ್ನು ಹೇಳಿಕೆ
Taapsee Pannu
ಮಂಜುನಾಥ ಸಿ.
|

Updated on:Feb 22, 2026 | 9:21 PM

Share

ತೆಲುಗಿನ ‘ಝುಮ್ಮಂದಿನಾದಂ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿ ಇಂದು ಬಾಲಿವುಡ್‌ನಲ್ಲಿ (Bollywood) ಸ್ಟಾರ್ ನಟಿಯಾಗ ಮಿಂಚುತ್ತಿರುವ ತಾಪ್ಸಿ ಪನ್ನು, ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಆಡಿರುವ ಮಾತುಗಳು ಈಗ ಹೊಸ ವಿವಾದ ಸ್ವರೂಪ ಪಡೆದುಕೊಂಡಿವೆ. ತಮ್ಮ ಹೊಸ ಚಿತ್ರ ‘ಅಸ್ಸಿ’ ಪ್ರಚಾರದ ವೇಳೆ ನೀಡಿದ ಸಂದರ್ಶನವೊಂದರಲ್ಲಿ ಅವರು ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಮೇಲೆ ಹೇರಲಾಗುವ ಮುಜುಗರದ ಬೇಡಿಕೆಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ತಾಪ್ಸಿ ಅವರ ಹೇಳಿಕೆಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಲಿದ್ದಾರೆ.

ಸಂದರ್ಶನದಲ್ಲಿ ಮಾತನಾಡುತ್ತಾ ತಾಪ್ಸಿ, ‘ದಕ್ಷಿಣದ ಚಿತ್ರಗಳಲ್ಲಿ ನಟಿಯರನ್ನು ಗ್ಲಾಮರಸ್ ಆಗಿ ತೋರಿಸಲು ನಿರ್ದೇಶಕರು ಪ್ಯಾಡೆಡ್ ಬ್ರಾ ಧರಿಸುವಂತೆ ಒತ್ತಾಯಿಸುತ್ತಾರೆ. ಸೆಟ್‌ನಲ್ಲಿ ಹುಡುಗಿಯರು ಹೆಚ್ಚಾಗಿ ಇರುವುದಿಲ್ಲ, ಹಾಗಾಗಿ ನಿರ್ದೇಶಕರು ಅಸಿಸ್ಟೆಂಟ್ ಡೈರೆಕ್ಟರ್ ಮೂಲಕ ಈ ವಿಷಯವನ್ನು ಸ್ಟೈಲಿಸ್ಟ್‌ಗಳಿಗೆ ತಿಳಿಸುತ್ತಾರೆ, ನಂತರ ಅದು ನಮಗೆ ತಲುಪುತ್ತದೆ. ಹಾಡಿನ ಚಿತ್ರೀಕರಣದ ಮಧ್ಯೆ ಹೋಗಿ ಬಟ್ಟೆ ಬದಲಿಸಿ ಬರುವುದು ಎಷ್ಟು ಮುಜುಗುರ ತರುತ್ತದೆ ಎಂದು ಅವರು ಯೋಚಿಸುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತ ಮತ್ತು ಭೋಜಪುರಿ ಸಿನಿಮಾಗಳಲ್ಲಿ ಹೊಕ್ಕಳನ್ನು ತೋರಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ದಕ್ಷಿಣದ ಚಿತ್ರರಂಗದವರಿಗೆ ಹೊಕ್ಕಳಿನ ಮೇಲೆ ವಿಶೇಷ ಪ್ರೀತಿ, ನಟಿಯರ ಹೊಕ್ಕುಳು ತೋರಿಸಲು ಅವರು ಗಮನ ವಹಿಸುತ್ತಾರೆ. ಬಾಲಿವುಡ್‌ನಲ್ಲಿ ನಟಿಯರ ಎದೆಯ ಭಾಗದ ಪ್ರದರ್ಶನಕ್ಕೆ ಆದ್ಯತೆ ನೀಡಲಾಗುತ್ತದೆ. ದಕ್ಷಿಣದ ಸಿನಿಮಾಗಳಲ್ಲಿ ಹೊಕ್ಕಳನ್ನು ತೋರಿಸುವುದೇ ಒಂದು ಕಾಮದ ಪ್ರತೀಕ ಎಂಬಂತೆ ಬಿಂಬಿಸಲಾಗುತ್ತದೆ. ಇದು ನನಗೆ ಇಂದಿಗೂ ಅರ್ಥವಾಗದ ವಿಷಯ’ ಎಂದಿದ್ದಾರೆ.

ಇದನ್ನೂ ಓದಿ:‘ನೀವು ಗಂಡಸರ ರೀತಿ ಕಾಣ್ತೀರಾ’ ಎಂದಿದ್ದಕ್ಕೆ ಖುಷಿ ಆಗಿದ್ದೇಕೆ ತಾಪ್ಸಿ ಪನ್ನು?

ತಾಪ್ಸಿ ಪನ್ನು ದಕ್ಷಿಣ ಭಾರತ ಚಿತ್ರರಂಗದವರ ಬಗ್ಗೆ ಮಾತನಾಡುತ್ತಿರುವುದು ಇದು ಮೊದಲೇನಲ್ಲ, ಈ ಹಿಂದೆಯೂ ತಾಪ್ಸಿ ತಮ್ಮ ಮೊದಲ ತೆಲುಗು ಸಿನಿಮಾದ ಬಗ್ಗೆ ಮಾತನಾಡುತ್ತಾ, ಆ ಸಿನಿಮಾನಲ್ಲಿ ತಮ್ಮ ಹೊಕ್ಕಳ ಮೇಲೆ ತೆಂಗಿನಕಾಯಿ ಎಸೆದಿದ್ದ ಘಟನೆಯನ್ನು ಹಾಸ್ಯಮಯವಾಗಿ ಹೇಳಿದ್ದರು. ಆ ಸಿನಿಮಾದ ನಿರ್ದೇಶಕರೂ ಆಗಿರುವ ರಾಘವೇಂದ್ರ ರಾವ್ ಅವರ ಬಗ್ಗೆಯೂ ಕ್ಷುಲ್ಲಕವಾಗಿ ಮಾತನಾಡಿದ್ದರು. ಇದು ದೊಡ್ಡ ವಿವಾದವಾಗಿತ್ತು ಮತ್ತು ನಂತರ ಅವರು ಕ್ಷಮೆಯನ್ನೂ ಕೇಳಿದ್ದರು. ಈಗ ಮತ್ತೆ ಅಂತಹದ್ದೇ ಹೇಳಿಕೆಗಳನ್ನು ನೀಡುತ್ತಿರುವುದು ದಕ್ಷಿಣ ಭಾರತದ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ.

ತಾಪ್ಸೀ ಅವರ ಈ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ದಕ್ಷಿಣದ ಸಿನಿಮಾಗಳಿಂದಲೇ ಹೆಸರು ಮತ್ತು ಹಣ ಮಾಡಿದ್ದರೂ, ಈಗ ಅದೇ ಚಿತ್ರರಂಗವನ್ನು ಟೀಕಿಸುವುದು ಸರಿ ಅಲ್ಲ, ನಿಮ್ಮ ಸಿನಿಮಾದ ಪ್ರಚಾರಕ್ಕಾಗಿ ಹೀಗೆ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ’ ಎಂಬ ಕಾಮೆಂಟ್‌ಗಳು ಹರಿದುಬರುತ್ತಿವೆ. ಬಾಲಿವುಡ್‌ನಲ್ಲೂ ಮಹಿಳೆಯರನ್ನು ವಸ್ತುಗಳಂತೆ ಬಿಂಬಿಸುವ ಅನೇಕ ಉದಾಹರಣೆಗಳಿವೆ ಎಂಬ ಪಾಯಿಂಟ್ ಅನ್ನು ಅನೇಕರು ಉಲ್ಲೇಖಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Sun, 22 February 26

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ