AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ಗಂಡಸರ ರೀತಿ ಕಾಣ್ತೀರಾ’ ಎಂದಿದ್ದಕ್ಕೆ ಖುಷಿ ಆಗಿದ್ದೇಕೆ ತಾಪ್ಸಿ ಪನ್ನು?

Taapsee Pannu: ತಾಪ್ಸಿ ಪನ್ನು ಅವರು ‘ರಶ್ಮಿ ರಾಕೆಟ್’ ಚಿತ್ರಕ್ಕಾಗಿ ತಮ್ಮ ದೇಹವನ್ನು ಬದಲಾಯಿಸಿಕೊಂಡಿದ್ದರು. ಆದರೆ, ಅವರ ಫೋಟೋಗಳಿಗೆ ಕೆಲವು ನೆಟ್ಟಿಗರು ಟೀಕೆ ಮಾಡಿದ್ದರು. ಆದಾಗ್ಯೂ, ತಾಪ್ಸಿ ಅವರು ಈ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರು ಮತ್ತು ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿದರು.

‘ನೀವು ಗಂಡಸರ ರೀತಿ ಕಾಣ್ತೀರಾ’ ಎಂದಿದ್ದಕ್ಕೆ ಖುಷಿ ಆಗಿದ್ದೇಕೆ ತಾಪ್ಸಿ ಪನ್ನು?
ತಾಪ್ಸಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Aug 01, 2025 | 7:40 AM

Share

ಎಲ್ಲ ನಟಿಯರು ಬಳುಕುವ ರೀತಿ ಇರಲು ಇಷ್ಟಪಡೋದು ಗೊತ್ತೇ ಇದೆ. ಅಭಿಮಾನಿಗಳು ಕೂಡ ತಮ್ಮಿಷ್ಟದ ನಟಿ ಹಾಗೆ ಇರಲಿ ಎಂದು ಬಯಸುತ್ತಾರೆ. ಆದರೆ, ಕೆಲ ನಟಿಯರು ಪಾತ್ರಕ್ಕೆ ತಕ್ಕಂತೆ ಕೆಲವು ಚೇಂಜಸ್ ಮಾಡಿಕೊಳ್ಳೋದನ್ನು ನೋಡಬಹುದು. ಈ ಮೊದಲು ನಟಿ ತಾಪ್ಸಿ ಪನ್ನು (Taapsee Pannu) ಕೂಡ ಅದೇ ಪ್ರಯತ್ನ ಮಾಡಿದ್ದರು. ಆದರೆ ಅವರಿಗೆ ನೆಟ್ಟಿಗರಿಂದ ಬಂದ ಕಮೆಂಟ್​ಗಳು ತುಂಬ ಖಾರವಾಗಿದ್ದವು. ಆದರೆ, ಅದನ್ನು ಕೂಲ್ ಆಗಿ ಅವರು ಸ್ವೀಕರಿಸಿದ್ದಾರೆ. ಇಂದು (ಆಗಸ್ಟ್ 1) ಅವರ ಜನ್ಮದಿನ. ಈ ವೇಳೆ ಹಳೆಯ ಘಟನೆ ನೆನೆಯೋಣ.

‘ಪಿಂಕ್’​, ‘ತಪ್ಪಡ್’​, ‘ಹಸೀನ್​ ದಿಲ್​ರುಬಾ’ ರೀತಿಯ ಚಿತ್ರಗಳನ್ನು ತಾಪ್ಸಿ ಪನ್ನು ನೀಡಿದ್ದಾರೆ. ಅವರು ‘ರಶ್ಮಿ ರಾಕೆಟ್​’ ಚಿತ್ರದಲ್ಲಿ ಅಥ್ಲೀಟ್​ ಪಾತ್ರ ಮಾಡಿದ್ದರು. ಆ ಸಿನಿಮಾ ಅ.15ರಂದು ಜೀ5 ಓಟಿಟಿ ಪ್ಲಾಟ್​ಫಾರ್ಮ್​ ಮೂಲಕ ಬಿಡುಗಡೆ ಕಂಡಿದೆ. ಆ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ತಾಪ್ಸಿ ಪನ್ನು ಬಾಡಿ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಂಡಿದ್ದರು. ಅದರ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಅವುಗಳಿಗೆ ಬಂದ ಕಮೆಂಟ್​ ಕೊಂಚ ಕಟುವಾಗಿಯೇ ಇದ್ದವು.

‘ತಾಪ್ಸಿ ಪನ್ನು ದೇಹ ಗಂಡಸರ ರೀತಿ ಇದೆ’ ಎಂದು ಕೆಲವರು ಕಮೆಂಟ್​ ಮಾಡಿದ್ದರು. ತಾಪ್ಸಿ ಪನ್ನು ಬೇಸರ ಮಾಡಿಕೊಳ್ಳಬಹುದು ಎಂಬುದು ಕಮೆಂಟ್ ಮಾಡಿದವನ ಉದ್ದೇಶ ಆಗಿತ್ತೇನೋ. ಆದರೆ, ಅವರು ಇದನ್ನು ತುಂಬ ಪಾಸಿಟಿವ್ ಆಗಿ ಸ್ವೀಕರಿಸಿದರು ಎಂದೇ ಹೇಳಬಹುದು. ಸಿನಿಮಾ ನೋಡಿ ಇದಕ್ಕೆ ಕಾರಣ ಇದೆ ಎಂದರು.

ಇದನ್ನೂ ಓದಿ
Image
‘ಕಿಂಗ್ಡಮ್’ ಕಲೆಕ್ಷನ್; ಮೊದಲ ದಿನವೇ ಬಾಕ್ಸ್ ಆಫೀಸ್ ಲೂಟಿ ಮಾಡಿದ ವಿಜಯ್
Image
‘ಬಾವ ಬಂದರೋ..’ ಹಾಡಿಗೆ ಈಗೊಂದು ಕಳೆ ಬಂತು; ರಾಜ್ ಗ್ಯಾಂಗ್​ನಿಂದ ಸ್ಟೆಪ್ಸ್
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
Image
ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ

ಇದನ್ನೂ ಓದಿ: ಸುಡು ಬೇಸಿಗೆಯಲ್ಲಿ ಬಡವರಿಗೆ ವಾಟರ್ ಕೂಲರ್ ನೀಡಿದ ನಟಿ ತಾಪ್ಸಿ ಪನ್ನು

ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳನ್ನು ಮಾಡುತ್ತ ತಾಪ್ಸಿ ಪನ್ನು ಮುನ್ನುಗ್ಗುತ್ತಿದ್ದಾರೆ. ಅವರಿಗೆ ಟ್ರೋಲ್​ ಕಾಟ ಹೊಸದೇನೂ ಅಲ್ಲ. ಅನೇಕ ವಿಚಾರಗಳ ಬಗ್ಗೆ ಅವರು ಓಪನ್ ಆಗಿ ಎಲ್ಲವನ್ನೂ ಹೇಳಿಕೊಂಡಿದ್ದು ಇದೆ2. ಆ ಕಾರಣದಿಂದ ಅವರನ್ನು ಕೆಲವರು ಟ್ರೋಲ್​ ಮಾಡುವುದರ ಜೊತೆಗೆ ದ್ವೇಷಿಸಿಸುತ್ತಾರೆ ಕೂಡ. ಆದರೆ ಅವುಗಳ ಬಗ್ಗೆ ತಾಪ್ಸಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅದರ ಬದಲು ಅವರು ತಮ್ಮ ಸಿನಿಮಾ ಕೆಲಸಗಳ ಬಗ್ಗೆ ಗಮನ ಹರಿಸುತ್ತಾರೆ. ಅದರ ಫಲವಾಗಿ ತಾಪ್ಸಿಗೆ ಹೆಚ್ಚು ಹೆಚ್ಚು ಸಿನಿಮಾ ಆಫರ್​ಗಳು ಹರಿದುಬರುತ್ತಿವೆ. ಕಳೆದ ವರ್ಷ ರಿಲೀಸ್ ಆದ ‘ಫಿರ್​ ಆಯಿ ಹಸೀನ್ ದಿಲ್​ರುಬಾ’ ಯಶಸ್ಸು ಕಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.