ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ
ಬಾಲಿವುಡ್ ನಟಿಯ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನಲ್ಲಿ ಜನಿಸಿದ ಅವರು ಫಗ್ಲಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದರು. ‘ಶೇರ್’ಷಾ ಚಿತ್ರದ ಯಶಸ್ಸಿನ ನಂತರ, ಅವರು ವಾರ್ 2 ಮತ್ತು ಟಾಕ್ಸಿಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತಾಯಿಯಾದ ಕಿಯಾರಾ ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳನ್ನು ಆಗಾಗ ವೈರಲ್ ಮಾಡಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ನಟ ಹಾಗೂ ನಟಿಯರ ಫೋಟೋ ಪೋಸ್ಟ್ ಮಾಡಿ ಇವರು ಯಾರು ಎಂದು ಗುರುತಿಸುವಂತೆ ಕೇಳಿಕೊಳ್ಳಲಾಗುತ್ತದೆ. ಈಗ ಈ ಫೋಟೋದಲ್ಲಿರೋ ಸ್ಟಾರ್ ನಟಿಯ ಫೋಟೋ ವೈರಲ್ ಆಗಿದೆ. ಅವರು ಯಾರು ಎಂದು ಗುರುತಿಸುವಂತೆ ಕೋರಲಾಗುತ್ತಿದೆ. ಅವರು ಬೇರೆ ತಾರೂ ಅಲ್ಲ ನಟಿ ಕಿಯಾರಾ ಅಡ್ವಾಣಿ (Kiara Advani). ಅವರಿಗೆ ಇಂದು (ಜುಲೈ 31) ಜನ್ಮದಿನ. ಅವರಿಗೆ ಈಗ 34 ವರ್ಷ.
ಕಿಯಾರಾ ಅಡ್ವಾಣಿ ಅವರು ಹುಟ್ಟಿದ್ದು ಮುಂಬೈನಲ್ಲಿ 1991ರ ಜುಲೈ 31ರಂದು ಜನಿಸಿದರು. ಅವರ ತಂದೆ ದೊಡಡ್ಡ ಬಿಸ್ನೆಸ್ಮೆನ್. ಅವರು ಚಿನ್ನದ ಸ್ಪೂನ್ ಹಿಡಿದು ಜನಿಸಿದರು ಎಂದರೂ ತಪ್ಪಾಗಲಿಕ್ಕಿಲ್ಲ. ಈ ಕಾರಾಣಕ್ಕೆ ಕಿಯಾರಾಗೆ ಬಾಲಿವುಡ್ ಬಾಗಿಲು ತಟ್ಟೋದು ಸುಲಭ ಆಯಿತು. ಕಿಯಾರಾ ಅಡ್ವಾಣಿ ಅವರಿಗೆ ಈಗ 34 ವರ್ಷ ತುಂಬಿದೆ. ಎಲ್ಲರೂ ಅವರಿಗೆ ಬರ್ತ್ಡೇ ವಿಶ್ ತಿಳಿಸುತ್ತಿದ್ದಾರೆ.
ಈ ಬಾರಿ ಕಿಯಾರಾ ಅಡ್ವಾಣಿ ಬರ್ತ್ಡೇ ವಿಶೇಷ ಎನಿಸಿಕೊಳ್ಳಲು ಕಾರಣವೂ ಇದೆ. ಅವರಿಗೆ ಈ ಬಾರಿ ಮಗು ಜನಸಿದೆ. ಕಿಯಾರಾ ಹಾಗೂ ಸಿದ್ದಾರ್ಥ್ 2023ರ ಫೆಬ್ರವರಿಯಲ್ಲಿ ಮದುವೆ ಆದರು ಮತ್ತು 2025ರ ಫೆಬ್ರವರಿಯಲ್ಲಿ ತಾವು ಪ್ರೆಗ್ನೆಂಟ್ ಎಂದು ಘೋಷಿಸಿದರು. ಈಗ ಕಿಯಾರಾಗೆ ಮಗು ಜನಿಸಿದ್ದು, ಅವರು ಮಗುವಿನ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ನಟಿ ಕಿಯಾರಾ ಅಡ್ವಾಣಿ ಮನೆಗೆ ಬಂದಳು ಮಹಾಲಕ್ಷ್ಮೀ; ದಂಪತಿಯಿಂದ ಗುಡ್ ನ್ಯೂಸ್
ಕಿಯಾರಾ ಅಡ್ವಾಣಿ ಅವರು 2014ರ ‘ಫಗ್ಲಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ‘ಧೋನಿ’ ಬಯೋಪಿಕ್ನಲ್ಲಿ ಧೋನಿ ಪತ್ನಿ ಸಾಕ್ಷಿ ಪಾತ್ರ ಮಾಡಿದರು. ಈ ಸಿನಿಮಾ ಅವರಿಗೆ ಸಾಕಷ್ಟು ಜನಪ್ರಿಯತೆ ನೀಡಿತು. ಆ ಬಳಿಕ ಸಾಲು ಸಾಲು ಸಿನಿಮಾ ನೀಡಿದರು. ಅವರ ‘ಶೇರ್ಷಾ’ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಈ ಸಿನಿಮಾ ಬಳಿಕ ಕೆಲವು ಸಿನಿಮಾ ಮಾಡಿದರು. ಈಗ ‘ವಾರ್ 2’ ಹಾಗೂ ‘ಟಾಕ್ಸಿಕ್’ ಸಿನಿಮಾಗಳಲ್ಲಿ ನಟಿಸುತ್ತಾ ಇದ್ದಾರೆ. ಈ ಚಿತ್ರಗಳ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ವಾರ್ 2’ ಚಿತ್ರವು ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಕಿಯಾರಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







