ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ
2020ರ ಕೊರೊನಾ ಸಮಯದಲ್ಲಿ ಸೋನು ಸೂದ್ ಅವರ ಮಾನವೀಯ ಸೇವೆ ಅನೇಕರಿಗೆ ಸ್ಪೂರ್ತಿ ನೀಡಿದೆ. ಬಾಲಿವುಡ್ ನಟರಾಗಿ ಖ್ಯಾತಿ ಪಡೆದ ಸೋನು ಸೂದ್, ಕೋಟ್ಯಂತರ ರೂಪಾಯಿಗಳ ನಿವ್ವಳ ಮೌಲ್ಯ ಹೊಂದಿದ್ದಾರೆ. ಅವರ ವೃತ್ತಿಜೀವನ, ಕುಟುಂಬ, ಹಾಗೂ ಕೊರೊನಾ ಸಂದರ್ಭದಲ್ಲಿ ನೀಡಿದ ಸಹಾಯದ ಬಗ್ಗೆ ಇಲ್ಲಿ ಹೇಳಲಾಗಿದೆ.

2020ರಲ್ಲಿ ಕೊರೊನಾ ಕಾಣಿಸಿಕೊಂಡಿತು. ಆಗ ಅನೇಕ ಜನರು ಪರಸ್ಪರ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಬಾಲಿವುಡ್ ನಟ ಸೋನು ಸೂದ್ ಕೊರೊನಾ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇಂದು (ಜುಲೈ 30) ಸೋನು ಸೂದ್ ಅವರ ಜನ್ಮದಿನ. 52 ವರ್ಷದ ಈ ನಟ ಸಿನಿಮಾ ನಿರ್ಮಾಪಕ, ನಟ, ಮಾಡೆಲ್ ಮತ್ತು ಉದ್ಯಮಿ ಕೂಡ ಹೌದು. ಸೋನು ಸೂದ್ (Sonu Sood) ಇಲ್ಲಿಯವರೆಗೆ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಿಂದಿಯ ಜೊತೆಗೆ, ಈ ನಟ ತೆಲುಗು, ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಸೋನು ಸೂದ್ ಅನೇಕ ಸಿನಿಮಾಗಳಲ್ಲಿ ಖಳನಾಯಕನ ಪಾತ್ರದ ಮೂಲಕ ಹೆಚ್ಚು ಫೇಮಸ್ ಆಗಿದ್ದಾರೆ. ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ ನಟ ಕೊರೊನಾ ಸಮಯದಲ್ಲಿ ನಿಜ ಜೀವನದ ಹೀರೋ ಆದರು. ಇವರು 1999ರಲ್ಲಿ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಸೋನು ಸೂದ್ ಅವರ ವೃತ್ತಿಜೀವನ ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಪ್ರಾರಂಭವಾಯಿತು. ಅವರು ಕನ್ನಡದಲ್ಲೂ ನಟಿಸಿದ್ದಾರೆ. ಸುದೀಪ್ ಜೊತೆ ‘ವಿಷ್ಣುವರ್ಧನ್’ ಸಿನಿಮಾದಲ್ಲಿ ಆದಿ ಶೇಷನ ಪಾತ್ರ ಮಾಡಿ ಗಮನ ಸೆಳೆದರು.
2024ರಲ್ಲಿ ಸೋನು ಸೂದ್ ಅವರ ಆಸ್ತಿ 140 ಕೋಟಿ ರೂಪಾಯಿ. ಈ ನಟ ಪ್ರತಿ ತಿಂಗಳು 1 ಕೋಟಿ ರೂ.ಗೂ ಹೆಚ್ಚು ಸಂಪಾದನೆ ಮಾಡುತ್ತಾರೆ. ಈ ನಟ ಒಂದು ವರ್ಷದಲ್ಲಿ 12 ಕೋಟಿ ರೂ.ಗೂ ಹೆಚ್ಚು ಸಂಪಾದನೆ ಮಾಡುತ್ತಾರೆ. ಸೋನು ಸೂದ್ ಚಲನಚಿತ್ರಗಳಿಂದ ಮಾತ್ರವಲ್ಲದೆ ಜಾಹೀರಾತುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕವೂ ಸಂಪಾದನೆ ಮಾಡುತ್ತಾರೆ.
ಸೋನು ಸೂದ್ ಮುಂಬೈನಲ್ಲಿ ಒಂದು ಐಷಾರಾಮಿ ಮನೆ ಹೊಂದಿದ್ದಾರೆ. ಅದರಲ್ಲಿ ನಾಲ್ಕು ಮಲಗುವ ಕೋಣೆಗಳು, ಒಂದು ಹಾಲ್ ಇದೆ. ಅದರಲ್ಲಿ ನಟ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ನಟನಿಗೆ ಮುಂಬೈನ ಜುಹುವಿನಲ್ಲಿ ಸ್ವಂತ ಹೋಟೆಲ್ ಕೂಡ ಇದೆ. ಇದರಿಂದ ಅವರಿಗೆ ಹಣ ಬರುತ್ತದೆ. ಇವರ ಬಳಿ ಅನೇಕ ದುಬಾರಿ ಕಾರುಗಳು ಇವೆ.
ಇದನ್ನೂ ನೋಡಿ: ಸೋನು ಸೂದ್ ಫಿಟ್ನೆಸ್; ಎಲ್ಲರಿಗೂ ಸ್ಫೂರ್ತಿ ನೀಡುವ ವಿಡಿಯೋ ಇದು
ಸೋನು ಸೂದ್ ಸೋನಾಲಿಯನ್ನು 1996ರಲ್ಲಿ ವಿವಾಹವಾದರು. ಸೋನು ಸೂದ್ ಮತ್ತು ಸೋನಾಲಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಹೆಸರು ಅಯಾನ್ ಮತ್ತು ಇಶಾಂತ್. ನಟ ತನ್ನ ಕುಟುಂಬದೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







