Su From So Collection: ಅಶ್ವಮೇಧದ ಕುದುರೆ ‘ಸು ಫ್ರಮ್ ಸೋ’; ಕೆಲೆಕ್ಷನ್ನಲ್ಲಿ ಚಿತ್ರವನ್ನು ತಡೆಯೋರೆ ಇಲ್ಲ
‘ಸು ಫ್ರಮ್ ಸೋ’ ಕನ್ನಡ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕಡಿಮೆ ಶೋ ಜೊತೆ ಆರಂಭವಾದರೂ, ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಸಿನಿಮಾ ಈಗಾಗಲೇ 13 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಎಲ್ಲಾ ಸ್ಥಳೀಯ ಕಲಾವಿದರನ್ನು ಒಳಗೊಂಡ ಈ ಚಿತ್ರದ ನಿರ್ದೇಶನ ಜೆ.ಪಿ. ತುಮಿನಾಡ್ ಅವರಿಂದ ಆಗಿದೆ.

ಕಳೆದ ವಾರ ರಿಲೀಸ್ ಆದ ‘ಸು ಫ್ರಮ್ ಸೋ’ ಸಿನಿಮಾ (Su From So Movie ) ಈಗ ಅಶ್ವಮೇಧದ ಕುದುರೆ ಎನಿಸಿಕೊಂಡಿದೆ. ಕಲೆಕ್ಷನ್ ವಿಚಾರದಲ್ಲಿ ಇದನ್ನು ತಡೆಯೋರು ಯಾರು ಇಲ್ಲ. ಈ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಸುಮಾರು 15 ಕೋಟಿ ರೂಪಾಯಿ ಆಗಿದೆ. ಈ ಚಿತ್ರದಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ. ಸಿನಿಮಾ ಮತ್ತಷ್ಟು ದಿನ ಅಬ್ಬರಿಸುವ ಸೂಚನೆ ಸಿಕ್ಕಿದೆ. ಬಹಳ ಸಮಯದ ಬಳಿಕ ಕರ್ನಾಟಕದ ಥಿಯೇಟರ್ಗಳು ವಾರ ಪೂರ್ತಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
‘ಸು ಫ್ರಮ್ ಸೋ’ ಚಿತ್ರಕ್ಕೆ ಆರಂಭದಲ್ಲಿ ಕಡಿಮೆ ಶೋಗಳನ್ನು ನೀಡಲಾಯಿತು. ಈ ಕಾರಣಕ್ಕೆ ಮೊದಲ ದಿನ ಈ ಚಿತ್ರ ಗಳಿಕೆ ಮಾಡಿದ್ದು ಕೇವಲ 78 ಲಕ್ಷ ರೂಪಾಯಿ. ಮರುದಿನ ಕಲೆಕ್ಷನ್ ಮೂರು ಪಟ್ಟಾಯಿತು. ಶನಿವಾರ ಸಿನಿಮಾ 2.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಭಾನುವಾರ 3.5 ಕೋಟಿ ರೂಪಾಯಿ ಹಾಗೂ ಸೋಮವಾರ 3.05 ಕೋಟಿ ರೂಪಾಯಿ ಗಳಿಕೆಯನ್ನು ಚಿತ್ರ ಮಾಡಿದೆ.
ಮಂಗಳವಾರ (ಜುಲೈ 29) ಚಿತ್ರದ ಕಲೆಕ್ಷನ್ ಭರ್ಜರಿಯಾಗಿದೆ. ಈ ಸಿನಿಮಾದ ಗಳಿಕೆ 3-3.5 ಕೋಟಿ ರೂಪಾಯಿ ಇದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ವರದಿ ಮಾಡಿದೆ. ಈ ಮೂಲಕ ಚಿತ್ರದ ಕರ್ನಾಟಕದ ಕಲೆಕ್ಷನ್ ಸುಮಾರು 13 ಕೋಟಿ ರೂಪಾಯಿ ಆಗಿದೆ. ದಿನ ಕಳೆದಂತೆ ಶೋಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ, ವಾರದ ದಿನವೂ ಶೋಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಿವೆ. ಇದು ಸಿನಿಮಾ ಕಲೆಕ್ಷನ್ಗೆ ಸಹಕಾರಿ ಆಗಿದೆ.
ಇದನ್ನೂ ಓದಿ: ಮಲಯಾಳಂ ಬಳಿಕ ತೆಲುಗಿಗೆ ಹೊರಟ ‘ಸು ಫ್ರಮ್ ಸೋ’; ಹಕ್ಕು ಪಡೆಯಲು ನಿರ್ಮಾಣ ಸಂಸ್ಥೆಗಳಿಂದ ಸ್ಪರ್ಧೆ
ಎಲ್ಲ ಸ್ಥಳೀಯ ಕಲಾವಿದರನ್ನೇ ಇಟ್ಟುಕೊಂಡು ‘ಸು ಫ್ರಮ್ ಸೋ’ ನಿರ್ಮಾಣ ಆಗಿದೆ. ರಂಗಭೂಮಿ ಕಲಾವಿದರು ತಮ್ಮ ಕಲೆಯನ್ನು ತೋರಿಸಿದ್ದಾರೆ. ಜೆಪಿ ತುಮಿನಾಡ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ರಾಜ್ ಬಿ ಶೆಟ್ಟಿ ಮೊದಲಾದವರು ಬಂಡವಾಳ ಹೂಡಿದ್ದಾರೆ. ಅವರು ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಜೆಪಿ ಅವರದ್ದು ಅಶೋಕ ಹೆಸರಿನ ಪಾತ್ರ. ಉಳಿದಂತೆ ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕೆರೆ ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Wed, 30 July 25








