ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್ಗೆ ಹೇಳಿದ್ರಂತೆ ರಾಜ್ಕುಮಾರ್
ಚಾಮರಾಜನಗರವನ್ನು ರಾಜ್ಕುಮಾರ್ ಸ್ವರ್ಗದ ಹೆಬ್ಬಾಗಿಲು ಎನ್ನುತ್ತಿದ್ದರಂತೆ, ಯಾಕೆ ಅವರಿಗೆ ಗಾಜನೂರು ಅಷ್ಟು ಇಷ್ಟವಾಗುತಿತ್ತು ಅಂತ ಕೇಳಿದರೆ, ಇದು ಅವರ ಹುಟ್ಟೂರು, ಬಾಲ್ಯವನ್ನು ಇಲ್ಲೇ ಕಳೆದಿದ್ದು, ಅವರ ಅಪ್ಪ ಅಮ್ಮ ಇದೇ ಊರಲ್ಲಿದ್ದರು , ಅವರ ತಂದೆ ನಾಟಕ ಕಲಿಸುತ್ತಿದ್ದ ಕಾರಣ ಯಾರೋ ಬಳುವಳಿಯಾಗಿ ಕೊಟ್ಟ ಜಮೀನನ್ನು ತೋಟವನ್ನಾಗಿ ಮಾಡಿಕೊಂಡಿದ್ದರು, ಅಪಹರಣ ಪ್ರಕರಣದ ಅವರು ಇಲ್ಲಿಗೆ ಬರೋದು ನಿಂತಿತು ಎಂದು ಸಂಬಂಧಿ ಹೇಳುತ್ತಾರೆ.
ಚಾಮರಾಜನಗರ, ಜುಲೈ 30: ದಿವಂಗತ ಡಾ ರಾಜ್ಕುಮಾರ್ ಅವರನ್ನು ದಂತಚೋರ ಮತ್ತು ನರಹಂತಕ ವೀರಪ್ಪನ್ (bandit, poacher Veerappan) ಅಪಹರಿಸಿ 25 ವರ್ಷಗಳ ಕಳೆದಿವೆ. ಅಪಹರಣ ನಡೆದಾಗ ಅಣ್ಣಾವ್ರು ತಮ್ಮ ಹುಟ್ಟೂರು ಗಾಜನೂರಲ್ಲಿದ್ದರು. ಇಲ್ಲಿಂದಲೇ ವೀರಪ್ಪನ್ ಮೇರುನಟನನ್ನು ಕಾಡಿಗೆ ಕರೆದೊಯ್ದಿದ್ದ. ಸಂಬಂಧಿಕರಿಗೆ ಆ ಕರಾಳದಿನ ಈಗಲೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ರಾಜ್ ಕುಮಾರ್ ಅವತ್ತು ತುಂಬಾ ಸಂತೋಷದಲ್ಲಿದ್ದರು, ಸಂಜೆಯವರೆಗೆ ತೋಟದಲ್ಲಿದ್ದು ಮನೆಗೆ ಬಂದು ಟಿವಿ ನೋಡುತ್ತಾ ಕೂತಿದ್ದ ಅಪ್ಪಾಜಿಯವರನ್ನು ವೀರಪ್ಪನ್ ಮತ್ತು ಅವನ ಸಹಚರರು ಬಂದು ಕರೆದೊಯ್ದಿದ್ದರು. ಅಮ್ಮ (ಪಾರ್ವತಮ್ಮ ರಾಜ್ ಕುಮಾರ್) ತುಂಬಾ ಅಳ್ತಾ ಇದ್ದರು, ಅಪ್ಪಾಜಿಯವರು ವೀರಪ್ಪನ್ಗೆ ಯಾರಿಗೂ ತೊಂದರೆ ಮಾಡಬೇಡ, ನಾನೇ ನಿನ್ನ ಜೊತೆ ಬರುತ್ತೇನೆ ಅಂತ ಅವನ ಜೊತೆ ಕಾಡಿಗೆ ಹೋದರು ಎಂದು ಸಂಬಂಧಿಯೊಬ್ಬರು ಹೇಳುತ್ತಾರೆ.
ಇದನ್ನೂ ಓದಿ: ವಿಷ್ಣುವರ್ಧನ್ ಸಿನಿಮಾ ನೋಡುವಾಗ ವೀರಪ್ಪನ್ ಬಂದ; ರಾಜ್ಕುಮಾರ್ ಕಿಡ್ನ್ಯಾಪ್ ಘಟನೆ ಹೇಳಿದ ಕುಟುಂಬಸ್ಥರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

