ವಿಷ್ಣುವರ್ಧನ್ ಸಿನಿಮಾ ನೋಡುವಾಗ ವೀರಪ್ಪನ್ ಬಂದ; ರಾಜ್ಕುಮಾರ್ ಕಿಡ್ನ್ಯಾಪ್ ಘಟನೆ ಹೇಳಿದ ಕುಟುಂಬಸ್ಥರು
Dr. Rajkumar Kidnap: ಡಾ. ರಾಜ್ಕುಮಾರ್ ಅಪಹರಣಕ್ಕೆ ಇಂದಿಗೆ (ಜುಲೈ 30) 25 ವರ್ಷ. ಈ ಅಪಹರಣ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ರಾಜ್ಕುಮಾರ್ ಅಪಹರಣದ ದಿನ ಏನಾಗಿತ್ತು ಎಂಬುದನ್ನು ರಾಜ್ಕುಮಾರ್ ತಂಗಿ ಮಗಳು ವಿವರಿಸಿದ್ದಾರೆ. ಅಂದು ರಾಜ್ಕುಮಾರ್ ಅವರು ವಿಷ್ಣುವರ್ಧನ್ ಅವರ ಸಿನಿಮಾ ನೋಡುತ್ತಿದ್ದರಂತೆ.
ರಸಿಕರ ರಾಜ ಡಾ. ರಾಜ್ಕುಮಾರ್ (Rajkumar) ಅವರನ್ನು ಕಾಡುಗಳ್ಳ ದಂತಚೋರ ವೀರಪ್ಪನ್ ಅಪಹರಣ ಮಾಡಿದ್ದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈ ಘಟನೆ ನಡೆದು 25 ವರ್ಷಗಳು ಕಳೆದಿವೆ. 200ನೇ ಇಸವಿ ಜುಲೈ 30 ರಂದು ಏನಾಗಿತ್ತು ಎಂದು ರಾಜ್ ಕುಟುಂಬದವರು ವಿವರಿಸಿದ್ದಾರೆ. ಟಿವಿಯಲ್ಲಿ ವಾರ್ತೆ ನೋಡಿ ಆ ಬಳಿಕ ವಿಷ್ಣುವರ್ಧನ್ ಸಿನಿಮಾ ನೋಡುತ್ತಿದ್ದರು. ಆಗಲೇ ರಾಜ್ಕುಮಾರ್ ಅಪಹರಣ ಆಗಿತ್ತಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 30, 2025 10:53 AM

