AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಬರುತ್ತಾ? ರಾಜ್ ಬಿ ಶೆಟ್ಟಿ ಪ್ಲ್ಯಾನೇ ಬೇರೆ

ರಾಜ್ ಬಿ ಶೆಟ್ಟಿ ಅವರ ‘ಸು ಫ್ರಮ್ ಸೋ’ ಚಿತ್ರ ಭಾರೀ ಯಶಸ್ಸು ಕಂಡಿದೆ. ಆದರೂ, ಸೀಕ್ವೆಲ್ ಮಾಡಲು ರಾಜ್​ ಬಿ. ಶೆಟ್ಟಿ ಅವರು ನಿರಾಕರಿಸಿದ್ದಾರೆ. ಇದು ಅವರ ನೈತಿಕತೆಗೆ ವಿರುದ್ಧ ಎಂದು ಅವರು ನಂಬುತ್ತಾರೆ. ಗೆದ್ದ ಕುದುರೆಯ ಬಾಲ ಹಿಡಿದು ಓಡುವುದು ಅವರಿಗೆ ಇಷ್ಟವಿಲ್ಲ. ಹೊಸ ಮತ್ತು ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಯೋಜನೆಯಲ್ಲಿದ್ದಾರೆ.

‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಬರುತ್ತಾ? ರಾಜ್ ಬಿ ಶೆಟ್ಟಿ ಪ್ಲ್ಯಾನೇ ಬೇರೆ
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on: Jul 29, 2025 | 3:08 PM

Share

ಯಾವುದೇ ಸಿನಿಮಾ ಹಿಟ್ ಆದರೆ ಅದಕ್ಕೆ ಸೀಕ್ವೆಲ್ ಅಥವಾ ಪ್ರಿಕ್ವೆಲ್ ಮಾಡೋದು ಟ್ರೆಂಡ್. ಮೊದಲ ಸಿನಿಮಾ ಹಿಟ್ ಆಗಿದೆ ಎಂಬ ಕಾರಣಕ್ಕೆ ಎರಡನೇ ಪಾರ್ಟ್​ ಮಾಡಿದರೆ ಜನರು ನೋಡಲು ಬಂದೇ ಬರುತ್ತಾರೆ. ಇದು ಬಿಸ್ನೆಸ್ ನಿಟ್ಟಿನಲ್ಲಿ ತುಂಬಾನೇ ಲಾಭ. ಈ ಕಾರಣಕ್ಕೆ ಅನೇಕರು ಈ ಬಗ್ಗೆ ಆಸಕ್ತಿ ಹೊರಹಾಕುತ್ತಾರೆ. ಆದರೆ, ರಾಜ್ ಬಿ. ಶೆಟ್ಟಿ ಮಾತ್ರ ಈ ಸಂಪ್ರದಾಯಕ್ಕೆ ಕಟ್ಟು ಬಿದ್ದವರಲ್ಲ. ಈ ಕಾರಣದಿಂದಲೇ ‘ಸು ಫ್ರಮ್ ಸೋ’ (Su From So) ಚಿತ್ರಕ್ಕೆ ಸೀಕ್ವೆಲ್ ಮಾಡಲು ಅವರು ರೆಡಿ ಇಲ್ಲ.

‘ಸು ಫ್ರಮ್ ಸೋ’ ಸಿನಿಮಾಗೆ ಸೀಕ್ವೆಲ್ ತರಬೇಕು ಎಂದು ಅನೇಕರು ಹೇಳಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್ ನೋಡಿದರೆ ಆ ರೀತಿಯ ಅವಕಾಶವೂ ಇದೆ ಎನಿಸುತ್ತದೆ. ಆದರೆ, ರಾಜ್ ಬಿ ಶೆಟ್ಟಿ ಇದಕ್ಕೆ ವಿರುದ್ಧ. ಅವರು ‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಮಾಡಬಾರದು ಎಂದು ದಿಟ್ಟ ನಿರ್ಧಾರ ಮಾಡಿದ್ದಾರೆ. ಅವರು ಬೇರೆ ರೀತಿಯ ಚಿತ್ರಗಳನ್ನು ಮಾಡುವ ಪ್ಲ್ಯಾನ್​ನಲ್ಲಿ ಇದ್ದಾರೆ.

‘ಸು ಫ್ರಮ್ ಸೋ’ ಸಿನಿಮಾಗೆ ಸೀಕ್ವೆಲ್ ಮಾಡಬಹುದು ಎನ್ನುವ ಚರ್ಚೆಗಳು ನಡೆದಿದ್ದವು. ಆದರೆ, ಅದು ತಮ್ಮ ನೈತಿಕತೆಗೆ ವಿರುದ್ಧವಾಗಿದೆ ಎಂದು ನಂಬುತ್ತಾರೆ ರಾಜ್. ಜೊತೆಗೆ ಗೆದ್ದ ಕುದುರೆಯ ಬಾಲ ಹಿಡಿದು ಓಡುವವರು ಅವರಲ್ಲ. ಈ ಕಾರಣದಿಂದಲೇ ರಾಜ್ ಅವರು ‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಮಾಡಬಾರದು ಎಂದು ನಿರ್ಧರಿಸಿದ್ದಾರೆ.

ಇದನ್ನೂ ಓದಿ
Image
ಶ್ರಾವಣದ ಉಪವಾಸ ಮಾಡಿ ಬಳಿಕ ಕುರಿ ಮರಿ ತಿಂದ ನಟಿ; ವ್ಯಕ್ತವಾಯಿತು ಟೀಕೆ
Image
ಜೀ ಕನ್ನಡದಲ್ಲಿ ‘ನಾವು ನಮ್ಮವರು’ ಶೋ; ತಾರಾ, ಶರಣ್, ಅಮೂಲ್ಯ ಜಡ್ಜ್
Image
ಸೋಮವಾರವೂ ಭಾನುವಾರದಷ್ಟೇ ಗಳಿಸಿದ ‘ಸು ಫ್ರಮ್ ಸೋ’
Image
‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ

‘ಮುಂದಿನ ಬಾರಿ ನಾವು ಹೊಸ ರೀತಿಯ ಸಿನಿಮಾ ಮಾಡುತ್ತೇವೆ. ಅದನ್ನು ನೋಡಲು ಬರುವಾಗ ಈ ಸಿನಿಮಾದ ಮೇಲಿದ್ದ ನಿರೀಕ್ಷೆ ಬೇಡ. ಅದು ಸಂಪೂರ್ಣವಾಗಿ ಹೊಸ ರೀತಿಯದ್ದೇ ಚಿತ್ರ ಆಗಿರಲಿದೆ. ಸಿನಿಮಾ ಗೆಲ್ಲುತ್ತದೆಯೋ ಅಥವಾ ಬಿಡುತ್ತದೆಯೋ ಎರಡನೇ ವಿಷಯ. ಪ್ರಾಮಾಣಿಕ ಪ್ರಯತ್ನವಂತೂ ಇರುತ್ತದೆ’ ಎನ್ನುತ್ತಾರೆ ರಾಜ್.

ಇದನ್ನೂ ಓದಿ: ಸೋಮವಾರವೂ ಭಾನುವಾರದಷ್ಟೇ ಗಳಿಸಿದ ‘ಸು ಫ್ರಮ್ ಸೋ’; ಕಲೆಕ್ಷನ್​​ನಲ್ಲಿ ರಾಜ್ ಬಿ. ಶೆಟ್ಟಿ ದಾಖಲೆ

‘ಸು ಫ್ರಮ್ ಸೋ’ ಚಿತ್ರ ಕರ್ನಾಟಕದಲ್ಲಿ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಾರದ ದಿನಗಳಲ್ಲೂ ಸಿನಿಮಾ ಅಬ್ಬರಿಸುತ್ತಿದೆ. ಈ ವಿಚಾರ ಅವರಿಗೆ ಖುಷಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ