ಜೀ ಕನ್ನಡದಲ್ಲಿ ‘ನಾವು ನಮ್ಮವರು’ ಶೋ; ತಾರಾ, ಶರಣ್ ಜೊತೆ ಕಿರುತೆರೆಗೆ ಬಂದ ನಟಿ ಅಮೂಲ್ಯ
ಪ್ರಸಿದ್ಧ ಕನ್ನಡ ನಟಿ ಅಮೂಲ್ಯ ಅವರು 8 ವರ್ಷಗಳ ನಂತರ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಆದರೆ, ಈ ಬಾರಿ ನಟಿಯಾಗಿ ಅಲ್ಲ, ಜೀ ಕನ್ನಡದ 'ನಾನು ನಮ್ಮವರು' ರಿಯಾಲಿಟಿ ಶೋನ ಜಡ್ಜ್ ಆಗಿ. ಶರಣ್ ಮತ್ತು ತಾರಾ ಕೂಡ ಈ ಶೋನಲ್ಲಿ ಇರಲಿದ್ದಾರೆ. 2007ರ 'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ಅವರು ಖ್ಯಾತಿ ಪಡೆದರು.

ನಟಿ ಅಮೂಲ್ಯ (Amulya) ಅವರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದವರು. ಕಳೆದ 8 ವರ್ಷಗಳಿಂದ ಅವರು ಚಿತ್ರರಂಗದಿಂದ ದೂರ ಇದ್ದರು. ಈಗ ಅವರು ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ ಎಂಬ ವಿಚಾರವು ಹರಿದಾಡಿದೆ. ಹಾಗಂತ ಅವರು ನಟಿಯಾಗಿ ಬರುತ್ತಿಲ್ಲ, ಜಡ್ಜ್ ಆಗಿ ಅನ್ನೋದು ವಿಶೇಷ. ಜೀ ಕನ್ನಡ ವಾಹಿನಿಯ ‘ನಾನು ನಮ್ಮವರು’ ಶೋನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ವಿಶೇಷ. ಈ ಶೋನಲ್ಲಿ ಶರಣ್ ಹಾಗೂ ತಾರಾ ಕೂಡ ಇರಲಿದ್ದಾರೆ ಎಂದು ಜೀ ಕನ್ನಡ ವಾಹಿನಿಯು ತಿಳಿಸಿದೆ..
ಅಮೂಲ್ಯ ಅವರು 2002ರಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 2007ರ ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಲ್ಲಿ ಗಣೇಶ್ ಬಣ್ಣ ಹಚ್ಚಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಅಮೂಲ್ಯ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. 2017ರಲ್ಲಿ ರಿಲೀಸ್ ಆದ ಗಣೇಶ್ ಅಭಿನಯದ ‘ಮುಗುಳು ನಗೆ’ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು.
ಜೀ ಕನ್ನಡ ಪೋಸ್ಟ್
View this post on Instagram
ಆ ಬಳಿಕ ಅಮೂಲ್ಯ ಅವರು ನಟಿಸಿಲ್ಲ. ಅವರು 2017ರಲ್ಲಿ ಜಗದೀಶ್ ಅವರನ್ನು ವಿವಾಹ ಮತ್ತು ಅವರು ಚಿತ್ರರಂಗದಿಂದ 8 ವರ್ಷ ದೂರ ಇದ್ದರು. ಅವರು ಕಂಬ್ಯಾಕ್ಗಾಗಿ ಫ್ಯಾನ್ಸ್ ಕಾದಿದ್ದರು. ಈಗ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ.
ಅಮೂಲ್ಯ ಅವರು ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅವರು ಜಡ್ಜ್ ಆಗಿ ತಮ್ಮ ಅನುಭವವನ್ನು ಅಭಿಮಾನಿಗಳ ಜೊತೆ, ಸ್ಪರ್ಧಿಗಳ ಜೊತೆ ಹಂಚಿಕೊಳ್ಳಲಿದ್ದಾರೆ. ‘ನಾನು ನಮ್ಮವರು’ ರಿಯಾಲಿಟಿ ಶೋ ಯಾವ ರೀತಿಯಲ್ಲಿ ಮೂಡಿ ಬರುತ್ತಿದೆ ಎಂಬುದು ಇನ್ನೂ ಅಧಿಕೃತವಾಗಿಲ್ಲ.
ಇದನ್ನೂ ಓದಿ: ದಂತದ ಗೊಂಬೆಯಂತಿರುವ ಅಮೂಲ್ಯ ಫೋಟೋಗೆ ಫ್ಯಾನ್ಸ್ ಫಿದಾ
ನಟ ಶರಣ್ ಅವರು ನಟನೆಯಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರು ಹಾಸ್ಯ ಪಾತ್ರಗಳ ಮೂಲಕ ಭೇಷ್ ಎನಿಸಿಕೊಂಡರು. ಇನ್ನು ತಾರಾ ಅವರು ಕೂಡ ನಟನೆಯಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರು ಕೂಡ ಹಿರಿಯ ನಟಿಯರಲ್ಲಿ ಒಬ್ಬರು. ಅವರು ಕೂಡ ಈ ಶೋನ ಭಾಗವಾಗುತ್ತಿದ್ದಾರೆ ಎಂಬ ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:20 am, Tue, 29 July 25







