‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವಿನ್ನರ್ ಸುನೀಲ್; ಸಿಕ್ಕಿದ್ದು ಇಷ್ಟೊಂದು ಹಣವಾ.. ಉಳಿದವರಿಗೆಷ್ಟು?
Bharjari Bachelor's Season 2 Winner: ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫೈನಲ್ ಜುಲೈ 27ರಂದು ನಡೆಯಿತು. ಸುನೀಲ್ ಮತ್ತು ಅಮೃತಾ ಜೋಡಿ ಗೆಲುವು ಸಾಧಿಸಿದೆ. ಡ್ರೋನ್ ಪ್ರತಾಪ್ ಮತ್ತು ಗಗನಾ ಎರಡನೇ ಸ್ಥಾನ, ರಕ್ಷಕ್ ಮತ್ತು ರಮೋಲಾ ಮೊದಲ ರನ್ನರ್ ಅಪ್ ಸ್ಥಾನ ಪಡೆದರು.

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ (Bharjari Bachelor’s) ಹಲವು ತಿಂಗಳುಗಳ ಕಾಲ ಮನರಂಜನೆ ನೀಡಿದೆ. ಭಾನುವಾರ (ಜುಲೈ 27) ಈ ಶೋನ ಫಿನಾಲೆ ಸಂಜೆ 6 ಗಂಟೆಯಿಂದ ಪ್ರಸಾರ ಕಂಡಿದೆ. ಎಲ್ಲಾ ಸ್ಪರ್ಧಿಗಳು ವಿವಿಧ ರೀತಿಯಲ್ಲಿ ಮನರಂಜನೆ ನೀಡಿದರು. ಅಂತಿಮವಾಗಿ ವಿನ್ನರ್ ಹೆಸರನ್ನು ಘೋಷಣೆ ಮಾಡಲಾಯಿತು. ಸುನೀಲ್ ಈ ಬಾರಿಯ ಕಪ್ ಎತ್ತಿದ್ದಾರೆ.
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಪ್ರತಿ ಪುರುಷ ಸ್ಪರ್ಧಿಗೆ ಒಬ್ಬರು ಮಹಿಳಾ ಸ್ಪರ್ಧಿ ಮೆಂಟರ್ ಇರುತ್ತಾರೆ. ಈ ರೀತಿಯಲ್ಲಿ ಶೋ ಆರಂಭ ಆಯಿತು. ಈ ಬಾರಿ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ನಿರಂಜನ್ ದೇಶಪಾಂಡೆ ಶೋನ ನಡೆಸಿಕೊಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳು ಸಾಕಷ್ಟು ಮನರಂಜನೆ ನೀಡಿದ್ದಾರೆ. ವೇದಿಕೆ ಮಾತ್ರವಲ್ಲದೆ, ಹಳ್ಳಿಗಳಿಗೂ ತೆರಳಿ ಶೋ ಮಾಡಲಾಯಿತು.
View this post on Instagram
View this post on Instagram
ಫಿನಾಲೆ ಎಪಿಸೋಡ್ನಲ್ಲಿ ಎಲ್ಲಾ ಸ್ಪರ್ಧಿಗಳು ವಿವಿಧ ರೀತಿಯಲ್ಲಿ ಡ್ಯಾನ್ಸ್ಗಳನ್ನು ಮಾಡಿದರು. 10 ಜೋಡಿಗಳು ಈ ಬಾರಿ ಸ್ಪರ್ಧಿಸಿದ್ದರು. ಸುನೀಲ್ ಅವರು ವಿನ್ನರ್ ಎಂದು ರವಿಚಂದ್ರನ್ ಘೋಷಣೆ ಮಾಡಿದರು. ಈ ಮೂಲಕ ಸುನೀಲ್ ಹಾಗೂ ಅಮೃತಾ ಜೋಡಿ ಅಂತಿಮವಾಗಿ ವಿನ್ ಆಯಿತು. ಅವರಿಗೆ ಕಪ್ ಹಾಗೂ 15 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್ ಸಿಕ್ಕಿದೆ.
ಇದನ್ನೂ ಓದಿ: ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್’ ಹಳ್ಳಿ ಜೀವನ; ಎಲ್ಲರಲ್ಲೂ ಸಾರ್ಥಕತೆಯ ಭಾವನೆ
ಸುನೀಲ್ ಮಾತನಾಡುವಾಗ ಕೈ ನಡುಗುತ್ತಿತ್ತು. ‘ಶೋಗೆ ಬರಬೇಕೋ ಅಥವಾ ಬೇಡವೋ ಎಂದು ಆಲೋಚಿಸುತ್ತಿದ್ದೆ. ಈಗ ಶೋಗೆ ಬಂದು ಟ್ರೋಫಿ ಹಿಡಿದುಕೊಂಡಿದ್ದೇನೆ. ತುಂಬಾ ಖುಷಿ ಆಗುತ್ತಿದೆ. 20 ಜನರ ಟ್ರೋಫಿ ಇದು’ ಎಂದರು. ಡ್ರೋನ್ ಪ್ರತಾಪ್ ಹಾಗೂ ಗಗನಾ ಜೋಡಿಗೆ ಎರಡನೇ ರನ್ನರ್ ಅಪ್ ಸ್ಥಾನ ಹಾಗೂ ರಕ್ಷಕ್ ಮತ್ತು ರಮೋಲಾ ಜೋಡಿಗೆ ಮೊದಲ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಪ್ರತಾಪ್ಗೆ 3 ಲಕ್ಷ ರೂಪಾಯಿ ಸಿಕ್ಕಿತು. ಅದರಲ್ಲಿ ಅರ್ಧ ಹಣವನ್ನು ಗಗನಾಗೆ ನೀಡೋದಾಗಿ ಪ್ರತಾಪ್ ಹೇಳಿದರು. ರಕ್ಷ್ಗೆ 10 ಲಕ್ಷ ರೂಪಾಯಿ ನೀಡಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








